ಸೆಪ್ಟೆಂಬರ್ 16 ರಿಂದ ಐಫೋನ್ ರನ್ ಆಗುವ ವಿಧಾನವೇ ಬದಲಾಗಲಿದೆ!ನಿಮ್ಮ ಬಳಿ ಈ ಡಿವೈಸ್ ಇರಲೇಬೇಕು !
ನಾಲ್ಕು ಸರಣಿಗಳಲ್ಲಿ iPhone 16 ಬಿಡುಗಡೆಯಾಗಿದೆ.ಇದು ಸೆಪ್ಟೆಂಬರ್ 20 ರಿಂದ ಖರೀದಿಗೆ ಕೂಡಾ ಲಭ್ಯವಿದೆ.
ಬೆಂಗಳೂರು : ಆಪಲ್ ತನ್ನ ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.ಈ ಸರಣಿಯು ನಾಲ್ಕು ಮಾದರಿಗಳಿಂದ ಬಿಡುಗಡೆಯಾಗಿದೆ. iPhone 16, iPhone 16 Plus, iPhone 16 Pro ಮತ್ತು iPhone 16 Pro Max ಎನ್ನುವ ನಾಲ್ಕು ಸರಣಿಗಳಲ್ಲಿ ಇದು ಬಿಡುಗಡೆಯಾಗಿದೆ. ಎಲ್ಲಾ ನಾಲ್ಕು ಐಫೋನ್‌ಗಳು ಸೆಪ್ಟೆಂಬರ್ 20 ರಿಂದ ಖರೀದಿಗೆ ಲಭ್ಯವಿರುತ್ತವೆ.ಐಫೋನ್ ಬಿಡುಗಡೆಯ ನಂತರ,ಆಪಲ್ ತನ್ನ ಇತ್ತೀಚಿನ ಮೊಬೈಲ್ ಆಪರೇಟಿಂಗ್ ಸಿಸ್ಟಂ iOS 18ನ ಬಿಡುಗಡೆ ದಿನಾಂಕವನ್ನು ಕೂಡಾ ಪ್ರಕಟಿಸಿದೆ.
ಯಾವ ಐಫೋನ್‌ಗಳಲ್ಲಿ iOS 18 ಇರುತ್ತದೆ :
iPhone XS, iPhone XS Max, iPhone 11, iPhone 11 Pro, iPhone 11 Pro Max, iPhone 12, iPhone 12 Mini, iPhone 12 Pro, iPhone 12 Pro Max, iPhone 13, iPhone 13 Mini, iPhone 13 Pro, 13 Pro Max, iPhone 14, iPhone 14 Pro, iPhone 14 Plus, iPhone 14 Pro Max, iPhone 15, iPhone 15 Plus, iPhone 15 Pro, iPhone 15 Pro Max, iPhone SE 3rd Generation, iPhone SE 2nd Generationಗಳು iOS 18 ಅನ್ನು ಪಡೆಯುತ್ತವೆ.
ಇದನ್ನೂ ಓದಿ : ಭಾರತ ಸೇರಿ ಹಲವು ದೇಶಗಳಲ್ಲಿ iPhone16 ಬಿಡುಗಡೆ
iOS 18 ನ ವೈಶಿಷ್ಟ್ಯಗಳು :
ಐಒಎಸ್ 18 ರಲ್ಲಿ, ಐಫೋನ್ ಬಳಕೆದಾರರು ಈಗ ಒಂದು ಸ್ಥಳದಿಂದ ಇನ್ನೊಂದಕ್ಕೆ ಅಪ್ಲಿಕೇಶನ್‌ಗಳನ್ನು ಡ್ರ್ಯಾಗ್ ಮತ್ತು ಡ್ರಾಪ್ ಮಾಡಬಹುದು.ಹೋಮ್ ಸ್ಕ್ರೀನ್‌ನಲ್ಲಿ ನೀವು ಎಲ್ಲಿ ಬೇಕಾದರೂ ಅಪ್ಲಿಕೇಶನ್‌ಗಳು ಮತ್ತು ವಿಜೆಟ್‌ಗಳನ್ನು ಇರಿಸಬಹುದು. ಲಾಕ್ ಸ್ಕ್ರೀನ್ ಕೆಳಗಿನ ಬಟನ್‌ಗಳನ್ನು ಕಸ್ಟಮೈಸ್ ಮಾಡಬಹುದು ಮತ್ತು ಕಂಟ್ರೋಲ್ ಸೆಂಟರ್ ನಿಂದ ತ್ವರಿತವಾಗಿ ಅಕ್ಸೆಸ್ ಪಡೆಯಬಹುದು. ಫೋಟೋ ಅಪ್ಲಿಕೇಶನ್ ನಿಮಗೆ ಬೇಕಾಗಿರುವ ಫೋಟೋಗಳನ್ನು ಹುಡುಕಲು ಸುಲಭವಾಗುವ ರೀತಿಯಲ್ಲಿ ಸ್ವಯಂಚಾಲಿತವಾಗಿ ಫೋಟೋಗಳನ್ನು ಕ್ಲಾಸಿಫೈ ಮಾಡುತ್ತದೆ.ಮೇಲ್ ಅಪ್ಲಿಕೇಶನ್ ಈಗ ಇಮೇಲ್‌ಗಳನ್ನು ಕೆಟಗರಿಗಳಲ್ಲಿ ವರ್ಗಿಕರಿಸುತ್ತದೆ. iMessageನಲ್ಲಿ ಹೊಸ ಟೆಕ್ಸ್ಟ್ ಎಫೆಕ್ಟ್ ಇದೆ.
iPhone, iPad ಮತ್ತು Macಗಾಗಿ ವಿನ್ಯಾಸಗೊಳಿಸಲಾದ iOS 18ನಲ್ಲಿ Apple Intelligence ಎಂಬ ಪರ್ಸನಲ್ ಇಂಟೆಲಿಜೆನ್ಸ್ ಸಿಸ್ಟಮ್ ಅನ್ನು ಪರಿಚಯಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Channel- bit.ly/46lENGm
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.