ಬೆಂಗಳೂರು : ಟ್ರೂಕಾಲರ್ 'ಟ್ರೂಕಾಲರ್ ವಂಚನೆ ವಿಮೆ' ಹೆಸರಿನ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.ಈ ಸೇವೆಯನ್ನು ಭಾರತದಲ್ಲಿ ಮಾತ್ರ ಪ್ರಾರಂಭಿಸಲಾಗಿದೆ. iOS ಮತ್ತು Android ಫೋನ್‌ಗಳಿಗೆ ಇದು ಲಭ್ಯವಿದೆ. ಪ್ರೀಮಿಯಂ ಚಂದಾದಾರರನ್ನು ವಂಚನೆಯಿಂದ ರಕ್ಷಿಸುವುದು ಇದರ ಉದ್ದೇಶವಾಗಿದೆ.ಈ ಸೇವೆಯನ್ನು ಒದಗಿಸಲು Truecaller HDFC Ergo ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ.ಆನ್‌ಲೈನ್ ವಂಚನೆಯ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ,ಈ ಹೊಸ ವೈಶಿಷ್ಟ್ಯವು ಕೆಲವು ವಂಚನೆಗೆ ಬಲಿಯಾದ ಬಳಕೆದಾರರಿಗೆ ಸಹಾಯ ಮಾಡುತ್ತದೆ.ಸದ್ಯಕ್ಕೆ ಈ ವೈಶಿಷ್ಟ್ಯವು ಪ್ರೀಮಿಯಂ ಚಂದಾದಾರರಿಗೆ ಮಾತ್ರ ಲಭ್ಯವಿದೆ.


COMMERCIAL BREAK
SCROLL TO CONTINUE READING

ಟ್ರೂಕಾಲರ್ ವಂಚನೆ ವಿಮೆ ಎಂದರೇನು? :
ಭಾರತದ ದೊಡ್ಡ ವಿಮಾ ಕಂಪನಿಯಾದ HDFC ERGO ಸಹಯೋಗದೊಂದಿಗೆ Truecaller 'Truecaller Fraud Insurance' ಎಂಬ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.ಈ ವಿಮೆಯು ಯಾವುದೇ ವಂಚನೆಯಿಂದ ಆದಂಥಹ 10,000 ರೂ.ವರೆಗಿನ ನಷ್ಟವನ್ನು ಭರಿಸುತ್ತದೆ. ಈ ವಿಮೆ ನೇರವಾಗಿ Truecaller ಅಪ್ಲಿಕೇಶನ್‌ನಲ್ಲಿಯೇ ಲಭ್ಯವಿದೆ.ಇದು ನಿಮ್ಮ ಮೊಬೈಲ್ ರೀಚಾರ್ಜ್ ಮಾಡುವಷ್ಟು ಸುಲಭ.ಅಪ್ಲಿಕೇಶನ್‌ನಲ್ಲಿಯೇ ಈ ವಿಮೆಯನ್ನು ಪ್ರಾರಂಭಿಸಬಹುದು ಮತ್ತು ನಿರ್ವಹಿಸಬಹುದು.ಪ್ರಸ್ತುತ ಈ ಸೇವೆಯು Truecaller ನ ಪ್ರೀಮಿಯಂ ಚಂದಾದಾರರಿಗೆ ಮಾತ್ರ ಲಭ್ಯವಿದೆ.


ಇದನ್ನೂ ಓದಿ : ಟ್ವಿಟರ್ ನಂತೆ ಕಾರ್ಯನಿರ್ವಹಿಸುತ್ತಿದ್ದ ಹಳದಿ ಹಕ್ಕಿಯ ಚಿಲಿಪಿಲಿ ಇನ್ಮುಂದೆ ಕೇಳಲ್ಲ!!


ಯಾರಿಗೆ ಲಾಭ? :
ಪ್ರೀಮಿಯಂ ಚಂದಾದಾರಿಕೆ: ಈ ವೈಶಿಷ್ಟ್ಯವು ಪ್ರಸ್ತುತ ಟ್ರೂಕಾಲರ್‌ನ ವಾರ್ಷಿಕ ಪ್ರೀಮಿಯಂ ಚಂದಾದಾರಿಕೆಯನ್ನು ತೆಗೆದುಕೊಂಡ ಬಳಕೆದಾರರಿಗೆ ಮಾತ್ರ ಲಭ್ಯವಿದೆ.
ಟ್ರೂಕಾಲರ್‌ ಫ್ಯಾಮಿಲಿ ಸ್ಚೀಮ್ :ನೀವು  ಟ್ರೂಕಾಲರ್‌ ಫ್ಯಾಮಿಲಿ ಸ್ಚೀಮ್  ಅನ್ನು ಹೊಂದಿದ್ದರೆ, ಈ ವಿಮೆಯ ಲಾಭವನ್ನು ನಿಮ್ಮ ಕುಟುಂಬದ ಉಳಿದ ಸದಸ್ಯರಿಗೂ ನೀಡಬಹುದು.
ಯೋಜನೆ ಅಪ್‌ಗ್ರೇಡ್: ನೀವು ಪ್ರಸ್ತುತ ಈ ವಿಮೆಯನ್ನು ಒಳಗೊಂಡಿರದ ಉಚಿತ ಅಥವಾ ಪ್ರೀಮಿಯಂ ಪ್ಲಾನ್‌ನಲ್ಲಿದ್ದರೆ,ನಿಮ್ಮ ಯೋಜನೆಯನ್ನು ಅಪ್‌ಗ್ರೇಡ್ ಮಾಡಬಹುದು.  ನಂತರ ಈ ಪ್ರಯೋಜನವನ್ನು ಪಡೆಯಬಹುದು.


ಆಕ್ಟಿವ್ ಮಾಡುವುದು ಹೇಗೆ? :
Truecaller ಆ್ಯಪ್ ತೆರೆಯಿರಿ: ಮೊದಲನೆಯದಾಗಿ, ನಿಮ್ಮ Truecaller ಆ್ಯಪ್ ಅನ್ನು  ಓಪನ್ ಮಾಡಿ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು  ಇನ್ಸ್ಟಾಲ್ ಮಾಡಿಕೊಳ್ಳಿ .
ವಿಮಾ ಆಯ್ಕೆಯನ್ನು ಹುಡುಕಿ: ಈಗ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳು ಅಥವಾ ಪ್ರೀಮಿಯಂ ವೈಶಿಷ್ಟ್ಯಗಳ ವಿಭಾಗದಲ್ಲಿ ವಂಚನೆ ವಿಮೆ ಆಯ್ಕೆಯನ್ನು  ಸರ್ಚ್ ಮಾಡಿ 
ಸಕ್ರಿಯಗೊಳಿಸಿ: ನಂತರ ವಿಮೆಯನ್ನು ಸಕ್ರಿಯಗೊಳಿಸಲು ಅಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಿ.


ಇದನ್ನೂ ಓದಿ : ಭಾರತೀಯ ಮಾರುಕಟ್ಟೆಗೆ Realme C63 ಸ್ಮಾರ್ಟ್‌ಫೋನ್ ಎಂಟ್ರಿ; ವೈಶಿಷ್ಟ್ಯ & ಬೆಲೆ ತಿಳಿಯಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.