JIO Prepaid Plan : ರಿಲಯನ್ಸ್ ಜಿಯೋ ಆಗಸ್ಟ್‌ನಲ್ಲಿ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಇದು 750 ರೂಪಾಯಿಯ ರೀಚಾರ್ಜ್ ಪ್ಲಾನ್. ಇದರ ವಿಶೇಷತೆ ಎಂದರೆ ಇದು 90 ದಿನಗಳ ಸೇವಾ ಮಾನ್ಯತೆಯೊಂದಿಗೆ ಬಂದಿತ್ತು. ಆದರೆ ಈಗ ಕಂಪನಿಯು ಈ ಪ್ಲಾನ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.  750 ರೂಪಾಯಿ ಬೆಲೆಯ ಪ್ಲಾನ್ ಬೆಲೆ 749 ರೂಪಾಯಿಗೆ ಇಳಿದಿದೆ.  ಇದರಿಂದ ಸಿಗುತ್ತಿದ್ದ ಪ್ರಯೋಜನಗಳಲ್ಲಿಯೂ  ಕೂಡಾ ಸಣ್ಣ ಬದಲಾವಣೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಜಿಯೋ  749 ರೂ. ಪ್ಲಾನ್ ಕೊಡುಗೆ :
ರಿಲಯನ್ಸ್ ಜಿಯೋದ  749 ರೂಪಾಯಿ ಪ್ಲಾನ್ ನಲ್ಲಿ 2GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆಗಳು, ಪ್ರತಿ ದಿನ 100  ಎಸ್ಎಂಎಸ್  ಮತ್ತು Jio ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. ಈ ಯೋಜನೆಯ ಒಟ್ಟು ಸೇವಾ ಮಾನ್ಯತೆ 90 ದಿನಗಳು.  750 ರ ಪ್ಲಾನ್ ಕೂಡ ಇದೆಲ್ಲವನ್ನೂ ನೀಡಿತು. ಇದರೊಂದಿಗೆ ಬಳಕೆದಾರರು  1 ರೂಪಾಯಿಗೆ  100MB ಹೆಚ್ಚುವರಿ ಡೇಟಾ ನೀಡುತ್ತಿತ್ತು. ಈ ಯೋಜನೆಯನ್ನು ಜಿಯೋದಿಂದ ಎರಡು ಭಾಗಗಳಾಗಿ ವಿಂಗಡಿಸಿದೆ. ಮೊದಲ ಭಾಗವು ರೂ 749 ಪ್ಲಾನ್ ಆಗಿತ್ತು, ಮತ್ತು ಎರಡನೆಯದು 100MB ಡೇಟಾವನ್ನು ನೀಡಲಾದ  1 ರೂಪಾಯಿ ಯೋಜನೆ. 


ಇದನ್ನೂ ಓದಿ : Google Play store ನಲ್ಲಿ ಅಪಾಯಕಾರಿ ವೈರಸ್ ಪತ್ತೆ


ಈಗ  ಸಿಗಲಿದೆ ಅನೇಕ ಪ್ರಯೋಜನಗಳು : 
ಈಗ, ಜಿಯೋ  1 ಯೋಜನೆಯನ್ನು ತೆಗೆದುಹಾಕಿದೆ. ಆದ್ದರಿಂದ 749 ರೂ.ಗಳ ಯೋಜನೆಯಲ್ಲಿ ಉಳಿದ ಎಲ್ಲಾ ಪ್ರಯೋಜನಗಳು ಸಿಗಲಿದೆ. ಇದು 90 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವುದರಿಂದ ಅನೇಕ ಗ್ರಾಹಕರನ್ನು ಆಕರ್ಷಿಸಬಹುದು. Jio 1.5GB ದೈನಂದಿನ ಡೇಟಾದೊಂದಿಗೆ 90 ದಿನಗಳ ಯೋಜನೆಯನ್ನು ನೀಡಿಲ್ಲ. ಆದ್ದರಿಂದ 90 ದಿನಗಳ ಯೋಜನೆಯನ್ನು ಆಯ್ಕೆ ಮಾಡುವುದಾದರೆ, 749 ರೂಪಾಯಿಗಳನ್ನು ಪಾವತಿಸಬೇಕು. ಇದರಲ್ಲಿ   2GB ದೈನಂದಿನ ಡೇಟಾ ಸಿಗುತ್ತದೆ.  


ಒಟ್ಟು 180GB ಡೇಟಾ ಲಭ್ಯ : 
ಈ ಯೋಜನೆಯನ್ನು ಬಳಸುವ ದೈನಂದಿನ ವೆಚ್ಚ  8.32 ರೂ. (749/90 ದಿನಗಳು). ಈ ಯೋಜನೆಯೊಂದಿಗೆ, ಬಳಕೆದಾರರು ಒಟ್ಟು 180GB ಡೇಟಾವನ್ನು ಪಡೆಯುತ್ತಾರೆ. 84 ದಿನಗಳವರೆಗೆ ಅದೇ ಪ್ರಯೋಜನಗಳೊಂದಿಗೆ  719 ರೂಪಾಯಿ ಪ್ಲಾನ್ ತೆಗೆದುಕೊಳ್ಳುತ್ತಿರುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ. 


ಇದನ್ನೂ ಓದಿ : Great Indian Festival Sale: ಮತ್ತೊಮ್ಮೆ ಬಂದಿದೆ ಅಗ್ಗದ ಆನ್‌ಲೈನ್ ಶಾಪಿಂಗ್‌ ! ಉತ್ಪನ್ನಗಳ ಮೇಲೆ ಸಿಗುತ್ತಿದೆ ಭಾರೀ ಆಫರ್


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.