Flipkart Nokia Smart TV Best Deal : ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಅನೇಕ ಆಕರ್ಷಕ ಸೇಲ್ ಮತ್ತು ಆಫರ್ ಗಳನ್ನು ನೀಡಲಾಗುತ್ತಿದೆ. ಈ ಮೂಲಕ ಶಾಪಿಂಗ್ ಮಾಡುವಲ್ಲಿ ಬಳಕೆದಾರರ ಆಸಕ್ತಿಯನ್ನು ಹೆಚ್ಚಿಸುತ್ತದೆ.  ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ  ಆಫರ್ ಸಹಾಯದಿಂದ ನೋಕಿಯಾದ 50-ಇಂಚಿನ ಸ್ಮಾರ್ಟ್ ಟಿವಿಯನ್ನು 30 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ರಿಯಾಯಿತಿಯಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಡೀಲ್‌ನಲ್ಲಿ ಹಲವು ಹೆಚ್ಚುವರಿ ಆಫರ್‌ಗಳನ್ನು ಸಹ ನೀಡಲಾಗುತ್ತಿದೆ.  


COMMERCIAL BREAK
SCROLL TO CONTINUE READING

Nokia ನ 50-ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಭಾರೀ ರಿಯಾಯಿತಿ : 
ನೋಕಿಯಾ  50 ಇಂಚಿನ  ಅಲ್ಟ್ರಾ ಹೆಚ್ ಡಿ  4K QLED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 69,999 ರೂಪಾಯಿಗೆ ಲಿಸ್ಟ್ ಮಾಡಲಾಗಿದೆ. ಇದರ ಮೇಲೆ 28% ರಿಯಾಯಿತಿ  ನೀಡಲಾಗುತ್ತಿದ್ದು, ಈ ಟಿವಿಯನ್ನು 49,999 ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಈ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಫೆಡರಲ್ ಬ್ಯಾಂಕ್ ಅಥವಾ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ಎರಡು ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಸಿಗುತ್ತದೆ. 


ಇದನ್ನೂ ಓದಿ : ನಿಮ್ಮ ಎಸಿ ಫಿಟ್ ಮಾಡುವಾಗ ಈ ಸಾಧನ ಅಳವಡಿಸಿದರೆ 2 ಸಾವಿರ ರೂ.ವರೆಗೆ ವಿದ್ಯುತ್ ಬಿಲ್ ಸೇವ್ ಮಾಡಬಹುದು!


ಈ ರೀತಿ 30 ಸಾವಿರ ರೂಪಾಯಿಗಿಂತ ಹೆಚ್ಚಿನ ರಿಯಾಯಿತಿ  : 
ಫ್ಲಿಪ್‌ಕಾರ್ಟ್ ರಿಯಾಯಿತಿ ಮತ್ತು ಬ್ಯಾಂಕ್ ಆಫರ್ ಎರಡನ್ನೂ ಒಳಗೊಂಡಂತೆ 22 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತಿದೆ. ಹಳೆಯ ಸ್ಮಾರ್ಟ್ ಟಿವಿಗೆ ಬದಲಾಗಿ ಇದನ್ನು ಖರೀದಿಸುವ ಮೂಲಕ, 11 ಸಾವಿರ ರೂಪಾಯಿಗಳವರೆಗೆ ಹೆಚ್ಚು ಉಳಿಸಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆದರೆ,  ಈ ಟಿವಿಯ ಬೆಲೆ 69,999 ರೂ.ಗಳಿಂದ 36,999 ರೂ.ಗೆ ಇಳಿಯಲಿದೆ. ಒಟ್ಟಾರೆಯಾಗಿ ಈ ಡೀಲ್‌ನಲ್ಲಿ 33 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. 


ನೋಕಿಯಾ ಸ್ಮಾರ್ಟ್ ಟಿವಿಗಳ ವೈಶಿಷ್ಟ್ಯಗಳು  : 
Nokia 50 ಇಂಚಿನ Ultra HD 4K QLED ಸ್ಮಾರ್ಟ್ Android TV 50-ಇಂಚಿನ ಡಿಸ್ಪ್ಲೇಯೊಂದಿಗೆ 3840 x 2160 ಪಿಕ್ಸೆಲ್‌ಗಳ ಅಲ್ಟ್ರಾ HD 4K ರೆಸಲ್ಯೂಶನ್, 60W ಸೌಂಡ್ ಔಟ್‌ಪುಟ್ ಮತ್ತು 60Hz ರಿಫ್ರೆಶ್  ರೇಟ್ ಅನ್ನು  ನೀಡುತ್ತಿದೆ. ನೋಕಿಯಾದ ಈ ಸ್ಮಾರ್ಟ್ ಟಿವಿ  ನೆಟ್ ಫ್ಲಿಕ್ಸ್ , ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ +  ಹಾಟ್ ಸ್ಟಾರ್  ಮತ್ತು  ಯುಟ್ಯೂಬ್ ನಂತಹ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ಇದು ಈಗಾಗಲೇ  ಗೂಗಲ್  ಅಸಿಸ್ಟೆಂಟ್ ಕ್ರೋಮ್ ಕಾಸ್ಟ್ ಅನ್ನು ಹೊಂದಿದೆ. 


ಇದನ್ನೂ ಓದಿ : Mini AC: ಕೂಲರ್‌ಗಿಂತಲೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಮಿನಿ ಎಸಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.