BSNL 4G SIM Online Delivery : BSNL ತನ್ನ ಹೊಸ 4G ನೆಟ್‌ವರ್ಕ್‌ ಈಗಾಗಲೇ ಆರಂಭಿಸಿದೆ.ಇದೀಗ 5G ಸೇವೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.ಇತರ ಟೆಲಿಕಾಂ ನೆಟ್ವರ್ಕ್ ಗಳಿಗೆ ಹೋಲಿಸಿದರೆ ಬಿಎಸ್ಎನ್ಎಲ್ ದರ ಕಡಿಮೆ.ಹಾಗಾಗಿ  ಬಿಎಸ್ಎನ್ಎಲ್ ಸಿಮ್ ಖರೀದಿಸುವವರ ಸಂಖ್ಯೆ ಕೂಡಾ ಹೆಚ್ಚುತ್ತಿದೆ.ಈಗ ಮನೆಯಲ್ಲಿಯೇ ಕುಳಿತು BSNLನ 4G ಸಿಮ್ ಅನ್ನು ಬಹಳ ಸುಲಭವಾಗಿ ಆರ್ಡರ್ ಮಾಡಬಹುದು.ಆರ್ಡರ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆ ತಲುಪುತ್ತದೆ. 


COMMERCIAL BREAK
SCROLL TO CONTINUE READING

BSNL ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳ :
BSNL 2000ನೇ ಇಸವಿಯಲ್ಲಿ ಪ್ರಾರಂಭವಾಯಿತು.ಆರಂಭದಲ್ಲಿ ಸಂಚಲನ ಮೂಡಿಸಿದ ನಂತರ,ಅನೇಕ ಖಾಸಗಿ ಟೆಲಿಕಾಂ ಕಂಪನಿಗಳು ಮಾರುಕಟ್ಟೆಗೆ ಬಂದವು.ಈ ಕಂಪನಿಗಳು   ಜನರಿಗೆ ಅಗ್ಗದ ಯೋಜನೆಗಳನ್ನು ನೀಡುವುದರೊಂದಿಗೆ ಬಹಳ ಬೇಗನೆ 5G ಸೇವೆಯತ್ತ ಕರೆದೊಯ್ದಿತು.ಆದರೆ ಈಗ Jio, Airtel ಮತ್ತು Vi ನಂತಹ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಹೆಚ್ಚಿಸಿವೆ. ಹಾಗಾಗಿ ಇದೀಗ ಬಹುತೇಕ ಮಂದಿ ಮತ್ತೆ  ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ.ಕಂಪನಿಯು 2025ರ ವೇಳೆಗೆ ದೇಶಾದ್ಯಂತ 1 ಲಕ್ಷ ಟವರ್‌ಗಳನ್ನು ಸ್ಥಾಪಿಸಲು ಯೋಜಿಸಿದೆ.ಇದರಿಂದ ಜನರು ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಅಕ್ಟೋಬರ್ ಅಂತ್ಯದ ವೇಳೆಗೆ ಸುಮಾರು 80,000 ಟವರ್‌ಗಳನ್ನು ಸ್ಥಾಪಿಸಲಾಗುವುದು ಮತ್ತು ಉಳಿದ 21,000 ಟವರ್‌ಗಳನ್ನು ಮಾರ್ಚ್ 2025 ರೊಳಗೆ ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈಗಾಗಲೇ ಹೇಳಿದ್ದಾರೆ. ಇದರೊಂದಿಗೆ 2025ರ ವೇಳೆಗೆ ಒಟ್ಟು ಒಂದು ಲಕ್ಷ 4ಜಿ ನೆಟ್‌ವರ್ಕ್ ಟವರ್‌ಗಳನ್ನು ನಿರ್ಮಿಸಲಾಗುವುದು. 


ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ಈ 3 ಬದಲಾವಣೆ ಕಂಡ್ರೆ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಅಂತಾನೆ ಅರ್ಥ..!


ಈಗ BSNL ಸಿಮ್ ಪಡೆಯಲು ಎಲ್ಲಿಗೂ ಹೋಗುವ ಅಗತ್ಯ ಇಲ್ಲ. ಮನೆಯಿಂದಲೇ  BSNL ಸಿಮ್ ಕಾರ್ಡ್ ಆರ್ಡರ್ ಮಾಡಬಹುದು. ಪ್ರೂನ್ ಹೆಸರಿನ ಕಂಪನಿಯ ಸಹಯೋಗದೊಂದಿಗೆ BSNL  ಸಿಮ್ ಕಾರ್ಡ್‌ಗಳನ್ನು ಮನೆಗೆ ತಲುಪಿಸಲಾಗುವುದು. ನೀವು ಸಿಮ್ ಅನ್ನು ಹೇಗೆ ಆರ್ಡರ್ ಮಾಡಬಹುದು ಎಂಬುದನ್ನು ನೋಡೋಣ.  


ಆನ್‌ಲೈನ್ ನಲ್ಲಿ BSNL 4G ಸಿಮ್: 
ಹಂತ 1: ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನ ಬ್ರೌಸರ್‌ಗೆ ಹೋಗಿ ಮತ್ತು https://prune.co.in/ ವೆಬ್‌ಸೈಟ್ ತೆರೆಯಿರಿ .
ಹಂತ 2: ವೆಬ್‌ಸೈಟ್ ತೆರೆದ ತಕ್ಷಣ, ಬೈ ಸಿಮ್ ಕಾರ್ಡ್ ಆಯ್ಕೆಗೆ ಹೋಗಿ.
ಹಂತ 3: ಅದರ ನಂತರ ದೇಶ (ಭಾರತ) ಆಯ್ಕೆಮಾಡಿ.ಇದಾದ ಮೇಲೆ ನೆಟ್ವರ್ಕ್ ಆಪರೇಟರ್ BSNL ಅನ್ನು ಆಯ್ಕೆ ಮಾಡಿ. 
ಹಂತ 4: ಈಗ ಬಲಭಾಗದಲ್ಲಿ ಗೋಚರಿಸುವ ಆಯ್ಕೆಗಳಿಂದ ನಿಮ್ಮ ಆಯ್ಕೆಯ FRC ಪ್ಲಾನ್ ಅನ್ನು ಆಯ್ಕೆಮಾಡಿ.
ಹಂತ 5: ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, OTP (ಇದು ನಿಮ್ಮ ಮೊಬೈಲ್‌ನಲ್ಲಿ ಬರುತ್ತದೆ), ಇಮೇಲ್ ವಿಳಾಸದಂತಹ ವಿವರಗಳನ್ನು ಭರ್ತಿ ಮಾಡಿ. ವಿತರಣಾ ವಿಳಾಸವನ್ನು ಸಹ ನಮೂದಿಸಿ.


ಇದನ್ನೂ ಓದಿ : ಎಣ್ಣೆ, ಮಸಾಲೆಗಳಿಂದ ಅಡುಗೆ ಮನೆ ಟೈಲ್ಸ್ ಜಿಡ್ಡು ಹಿಡಿದಿದೆಯಾ? ಹೀಗೆ ಮಾಡಿದರೆ ಸ್ವಚ್ಛಗೊಳಿಸಲು ಕೇವಲ 5 ನಿಮಿಷ ಸಾಕು !


ಹೀಗೆ ಮಾಡುವುದರಿಂದ ಕೇವಲ 10 ನಿಮಿಷಗಳಲ್ಲಿ BSNL ಸಿಮ್ ನಿಮ್ಮ ಮನೆಗೆ ತಲುಪಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.