ನವದೆಹಲಿ :  Appleನ iPhone 12 ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಆಗಿದೆ. ಸಾಮಾನ್ಯವಾಗಿ iPhone ಅಂದರೆ ಅದು ದುಬಾರಿ ಫೋನ್. ಆದರೆ ಈಗ iPhone 12 ಬೆಲೆ ಅಗ್ಗವಾಗಿದೆ. ಐಫೋನ್ 13 ತುಂಬಾ ದುಬಾರಿ ಫೋನ್.  ಐಫೋನ್ 14 ಸರಣಿಯ ಬೆಲೆ ಕೂಡ ತುಂಬಾ ಹೆಚ್ಚಿರುತ್ತದೆ. ಹೀಗಾಗಿ ಐಫೋನ್ 12 ಜನರ ಮೊದಲ ಆಯ್ಕೆಯಾಗಿದೆ. ಐಫೋನ್ 12 2020 ರಲ್ಲಿ ಬಂದಿರುವ ಫೋನ್. ನಂತರ ಕಳೆದ ವರ್ಷ ಮಾರುಕಟ್ಟೆಗೆ ಬಂದಿದ್ದೇ ಐಫೋನ್ 13. ಐಫೋನ್ 12 ನ ಬೆಲೆ ಗಮನಾರ್ಹವಾಗಿ ಕಡಿಮೆಯಾಗಿದೆ. ಇದರ ನಡುವೆ ಇದೀಗ ಬಂದಿರುವ ಆಫರ್  ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಆಫರ್ ಮೂಲಕ ಐಫೋನ್ 12 ಅನ್ನು ಉಚಿತವಾಗಿ  ಪಡೆಯಬಹುದು. 


COMMERCIAL BREAK
SCROLL TO CONTINUE READING

iPhone 12 ಅನ್ನು ಉಚಿತವಾಗಿ ಪಡೆಯಲು ಹೀಗೆ ಮಾಡಿ : 
ವೆರಿಝೋನ್ ಐಫೋನ್ 12 ಅನ್ನು ಉಚಿತವಾಗಿ ನೀಡುತ್ತಿದೆ. ಆದರೆ ಐಫೋನ್ 12 ಅನ್ನು  ಉಚಿತವಾಗಿ ಪಡೆಯಬೇಕಾದರೆ ಕೆಲವು ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಂಡಿರಬೇಕು. ಮಾತ್ರವಲ್ಲ  ಕೆಲವು ಹಂತಗಳನ್ನು ಅನುಸರಿಸಬೇಕು. 


ಇದನ್ನೂ ಓದಿ : Newly Wed Bride Google Search: ನವವಿವಾಹಿತ ವಧು ಗೂಗಲ್ ನಲ್ಲಿ ಹೆಚ್ಚು ಹುಡುಕುವುದೇನು ಗೊತ್ತಾ?


Verizon ನಲ್ಲಿ iPhone 12 ಅನ್ನು ಉಚಿತವಾಗಿ ಪಡೆಯುವುದು ಹೇಗೆ ?
ಹಂತ 1: Verizon ವೆಬ್‌ಸೈಟ್‌ಗೆ ಹೋಗಿ ಮತ್ತು iPhone 12 ಗಾಗಿ  ಸರ್ಚ್ ಮಾಡಿ . 
ಹಂತ 2: ಈಗ ನಿಮ್ಮ ಆಯ್ಕೆಗೆ ಅನುಗುಣವಾಗಿ iPhone 12 ಗಾಗಿ ಇಂಟರ್ನಲ್ ಸ್ಟೋರೇಜ್ ಮತ್ತು ಬಣ್ಣ ವನ್ನು ಆಯ್ಕೆ ಮಾಡಿ. 
ಹಂತ 3: 'ಯಾವುದೇ ಅನಿಯಮಿತ ಯೋಜನೆಯೊಂದಿಗೆ ಅದನ್ನು ಉಚಿತವಾಗಿ ಪಡೆಯಿರಿ.  ಹೊಸ ಲೈನ್ ಆಯ್ಕೆಯನ್ನು ಟ್ಯಾಪ್ ಮಾಡಿ. 
ಹಂತ 4: ಈಗ ಕಂಟಿನ್ಯೂ ಮೇಲೆ  ಕ್ಲಿಕ್ ಮಾಡಿ ಮತ್ತು ಹೊಸ ಬಳಕೆದಾರ ಆಯ್ಕೆಯನ್ನು ಆರಿಸಿ.
ಹಂತ 5: ಇಲ್ಲಿ ಹೊಸ ಪೇಜ್ ತೆರೆಯುತ್ತದೆ, ಅಲ್ಲಿ ನೀವು ನಿಮ್ಮ ಪಿನ್ ಕೋಡ್ ಅನ್ನು ನಮೂದಿಸಬೇಕು ಮತ್ತು ಸ್ಥಳವನ್ನು ದೃಢೀಕರಿಸಬೇಕು.
ಹಂತ 6: ಇಲ್ಲಿ, ಬಹು ವೆರಿಝೋನ್ ಪ್ಲಾನ್ ಗಳನ್ನು  ಕಾಣಬಹುದು. iPhone 12 ಅನ್ನು ಉಚಿತವಾಗಿ ಪಡೆಯಲು ನಿಮ್ಮ ಆಯ್ಕೆಯ ಪ್ರಕಾರ  36 ತಿಂಗಳ ಅವಧಿಗೆ ಪಾವತಿಸುವ ಆಯ್ಕೆಯನ್ನು ಆಯ್ಕೆಮಾಡಿ . 
ಹಂತ 7:ಪಾವತಿಯನ್ನು ಮಾಡಿದ ನಂತರ, ಹೇಳಲಾದ ಅವಧಿಗೆ Verizon ಚಂದಾದಾರಿಕೆ ಯೋಜನೆಯೊಂದಿಗೆ iPhone 12 ನಿಮ್ಮದಾಗಿರುತ್ತದೆ.


ಇದನ್ನೂ ಓದಿ : ಪ್ರತಿ ದಿನ 1 ಮಿಲಿಯನ್ ಸ್ಪ್ಯಾಮ್ ಅಕೌಂಟ್‌ಗಳು ಪತ್ತೆ, ಆಘಾತಕಾರಿ ವಿಚಾರ ಬಿಚ್ಚಿಟ್ಟ Twitter


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.