Loan From Aadhaar: ಸರ್ಕಾರದ ಯೋಜನೆಗಳ ಅಡಿಯಲ್ಲಿ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಿ ಸುಲಭವಾಗಿ ಕಡಿಮೆ ಬಡ್ಡಿದರದಲ್ಲಿ ಲೋನ್ ಪಡೆಯಿರಿ ಎಂಬ ಸಂದೇಶ ನಿಮಗೂ ಬಂದಿದೆಯೇ? ನಿಮ್ಮ ಫೋನ್‌ನಲ್ಲಿ ಬರುವ ಇಂತಹ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ. ಇಲ್ಲವೇ, ಮೋಸ ಹೋಗಬಹುದು. 


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ "ಪ್ರಧಾನ ಮಂತ್ರಿ ಯೋಜನೆ ಆಧಾರ್ ಕಾರ್ಡ್ ಸಾಲ 2% ಬಡ್ಡಿ, 50% ಮನ್ನಾ 8595311955 ಗೆ ಕರೆ ಮಾಡಿ" ಎಂಬ ನಕಲಿ ಸಂದೇಶ ಸಖತ್ ವೈರಲ್ ಆಗುತ್ತಿದೆ. ಆದರೆ, ಇಂತಹ ಸಂದೇಶಕಗಳಿಗೆ ಮಾರುಹೋಗಿ ಕರೆ ಮಾಡಿದರೆ ನೀವು ಮೋಸ ಹೋಗಬಹುದು ಎಚ್ಚರ! 


ಇದೊಂದು ನಕಲಿ ಸಂದೇಶ: 
ವಾಸ್ತವವಾಗಿ, ಆಧಾರ್ ಕಾರ್ಡ್‌ನಿಂದ 2% ಬಡ್ಡಿ ದರದಲ್ಲಿ ಸಾಲ!  ಎಂಬುದು ಸಂಪೂರ್ಣವಾಗಿ ನಕಲಿ ಸಂದೇಶ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ತಿಳಿಸಿದೆ. ಸರ್ಕಾರದ ಯಾವುದೇ ಯೋಜನೆಯಲ್ಲಿ ಆಧಾರ್ ಕಾರ್ಡ್ ಮೂಲಕ ಸಾಲ ನೀಡುವಂತಹ ಸೌಲಭ್ಯವನ್ನು ಪರಿಚಯಿಸಲಾಗಿಲ್ಲ ಎಂದು ಇದರಲ್ಲಿ ಸ್ಪಷ್ಟಪಡಿಸಲಾಗಿದೆ. 


ಇದನ್ನೂ ಓದಿ- UPI ATM: ಯುಪಿಐ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಹೇಗೆ? ಇಲ್ಲಿದೆ ಸುಲಭ ಪ್ರಕ್ರಿಯೆ


ಈ ಕುರಿತಂತೆ ಟ್ವಿಟ್ಟರ್ (ಈಗಿನ X) ಪೋಸ್ಟ್‌ನಲ್ಲಿ ಈ ರೀತಿ ಬರೆಯಲಾಗಿದೆ:- 
"ಸರ್ಕಾರದ ಯೋಜನೆಯಡಿ ಕೇವಲ 2% ವಾರ್ಷಿಕ ಬಡ್ಡಿಯಲ್ಲಿ ಆಧಾರ್ ಕಾರ್ಡ್ ಮೂಲಕ ಸಾಲ ನೀಡಲಾಗುವುದು ಎಂದು ನಕಲಿ ಸಂದೇಶದಲ್ಲಿ ಹೇಳಲಾಗುತ್ತಿದೆ. ಇಂತಹ ಸುಳ್ಳು ಸಂದೇಶಗಳನ್ನು ಫಾರ್ವರ್ಡ್ ಮಾಡಬೇಡಿ. ಇದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವ ಪ್ರಯತ್ನವೂ ಆಗಿರಬಹುದು" ಎಂದು ಪಿಐಬಿ ಫ್ಯಾಕ್ಟ್ ಚೆಕ್ ಎಚ್ಚರಿಸಿದೆ. 


Smartphone Hang Problem: ಪದೇ ಪದೇ ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ


ಇಂತಹ ಸಂದೇಶಗಳು ಬಂದರೆ ಏನು ಮಾಡಬೇಕು? 
>> ನಿಮ್ಮ ಫೋನ್ ಅಥವಾ ಇಮೇಲ್‌ನಲ್ಲಿ ನೀವು ಅಂತಹ ಸಂದೇಶವನ್ನು ಸ್ವೀಕರಿಸಿದರೆ, ಅದರ ಮೇಲೆ ಕ್ಲಿಕ್ ಮಾಡುವ ಅಥವಾ ನೀಡಿರುವ ಸಂಖ್ಯೆಗೆ ಕರೆ ಮಾಡುವ ಬದಲು ಅದನ್ನು ನಿರ್ಲಕ್ಷಿಸುವುದು ಮತ್ತು ಅಳಿಸುವುದು ಉತ್ತಮ.
>> ಇಂತಹ ನಕಲಿ ಮಾಹಿತಿಗಳನ್ನು ನಿಮ್ಮ ಸಂಪರ್ಕದಲ್ಲಿರುವವರಿಗೆ ಕಳುಹಿಸುವ ತಪ್ಪನ್ನು ಎಂದಿಗೂ ಮಾಡಬೇಡಿ.  
>> ಇಂತಹ ನಕಲಿ ಸಂದೇಶಗಳಿಂದ ಮೋಸ ಹೋಗುವುದನ್ನು ತಪ್ಪಿಸಲು ಯಾವುದೇ ಕಾರಣಕ್ಕೂ ಯಾರೊಂದಿಗೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.