ನೀವೂ Paytm ಬಳಸುತ್ತೀರಾ? ಹಾಗಾದ್ರೆ ಮನೆಯಲ್ಲಿಯೇ ಕುಳಿತು ನೀವು ಎರಡು ಲಕ್ಷ ರೂ. ಪಡೆಯಬಹುದು
ನೀವೂ ಒಂದು ವೇಳೆ ಹಣ ಪಾವತಿ ಸೇವಗಾಗಿ Paytm ಅನ್ನು ಬಳಸುತ್ತಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಹೌದು, Paytm ಇದೀಗ ತನ್ನ ಬಳಕೆದಾರರಿಗೆ ಮನೆಯಲ್ಲಿಯೇ ಕುಳಿತು ಮಾಡುವ ಉತ್ತಮ ಸೌಕರ್ಯವೊಂದನ್ನು ಕಲ್ಪಿಸುತ್ತಿದೆ. ಅಂದರೆ ಪೇಟಿಎಂ ಇದೀಗ ತನ್ನ ಗ್ರಾಹಕರಿಗೆ 2 ಲಕ್ಷ ರೂಪಾಯಿಗಳ ಸಾಲ ಸೌಲಭ್ಯವನ್ನು ನೀಡುತ್ತಿದೆ.
ನವದೆಹಲಿ: ಒಂದು ವೇಳೆ ನೀವೂ ಕೂಡ ಹಣ ಪಾವತಿ ಸೇವೆಗಳಿಗಾಗಿ Paytm ಆಪ್ ಬಳಕೆ ಮಾಡುತ್ತಿದ್ದರೆ, ನಿಮಗಾಗಿ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಹೌದು, ಪೆಟಿಎಂ ತನ್ನ ಗ್ರಾಹಕರಿಗೆ ಒಳ್ಳೆಯ ಸೌಕರ್ಯವೊಂದನ್ನು ಕಲ್ಪಿಸುತ್ತಿದೆ. ಪೆಟಿಎಂ ತನ್ನ ಗ್ರಾಹಕರಿಗೆ 2 ಲಕ್ಷ ರೂ.ಗಳವರೆಗೆ ಸಾಲ ಪಡೆಯುವ ಸೌಲಭ್ಯವನ್ನು ಕಲ್ಪಿಸುತ್ತಿದೆ. ಇದಕ್ಕಾಗಿ ಸಾಮಾನ್ಯ ಷರತ್ತುಗಳು ಮಾತ್ರ ಅನ್ವಯಿಸಲಿವೆ. ಯಾವುದೇ ಅಧಿಕ ತಾಪತ್ರಯ ಇಲ್ಲದೆ, ಕಡಿಮೆ ದಾಖಲೆಗಳನ್ನು ನೀಡಿ ನೀವು ಇಲ್ಲಿ ಸಾಲ ಪಡೆಯಬಹುದು. ಇತ್ತೀಚೆಗಷ್ಟೇ ಕಂಪನಿ ತನ್ನ ಗ್ರಾಹಕರಿಗೆ ಇನ್ಸ್ಟಂಟ್ ಪರ್ಸನಲ್ ಲೋನ್ ಸೌಲಭ್ಯ ಆರಂಭಿಸಿತ್ತು. ಇದಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕಂಪನಿ ಸಂಪೂರ್ಣ ಡಿಜಿಟಲ್ ಆಗಿಸಿತ್ತು ಹಾಗೂ ಇದಕ್ಕಾಗಿ ಬ್ಯಾಂಕ್ ಗೆ ಭೇಟಿ ನೀಡಿ ದಾಖಲೆಗಳನ್ನು ನೀಡಬೇಕಾದ ಯಾವುದೇ ಅವಶ್ಯಕತೆ ಇಲ್ಲ. ಕೆಲವೇ ನಿಮಿಷಗಳಲ್ಲಿ ಗ್ರಾಹಕರು ಇಲ್ಲಿ ಸಾಲ ಪಡೆಯಬಹುದು. ಬನ್ನಿ ಹಾಗಾದರೆ ಈ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳೋಣ.
ಇದನ್ನೂ ಓದಿ- Google Pay, Paytm, PhonePeಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ OnePlus Payment App
ಮನೆಯಲ್ಲಿಯೇ ಸಾಲ ಸಿಗಲಿದೆ
ಪೆಟಿಎಂನ ಸಂಪೂರ್ಣ ಪ್ರಕ್ರಿಯೆ ಆನ್ಲೈನ್ ಇರಲಿದೆ. ಗ್ರಾಹಕರು ಸಾಲ ಪಡೆಯಲು ಮನೆಯಿಂದ ಹೊರಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲಿಯೇ ಕುಳಿತು ನೀವು ಮೊಬೈಲ್ ಫೋನ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಾಲ ಪಡೆಯುವ ಸಂಪೂರ್ಣ ಪ್ರಕ್ರಿಯೆ ಎರಡೇ ನಿಮಿಷಗಳಲ್ಲಿ ಮುಕ್ತಾಯಗೊಳ್ಳಲಿದೆ. ಪ್ರಕ್ರಿಯೆ ಪೂರ್ಣಗೊಂಡ ಕೆಲವೇ ನಿಮಿಷಗಳಲ್ಲಿ ಹಣ ನಿಮ್ಮ ಖಾತೆಗೆ ಕೂಡ ಬರಲಿದೆ.
ಇದನ್ನೂ ಓದಿ- ATM: ಇನ್ಮುಂದೆ 'ಕ್ಯೂಆರ್ ಕೋಡ್ ಸ್ಕ್ಯಾನ್' ಮಾಡಿ ATM ನಿಂದ ಹಣ ಪಡೆಯಬಹುದು! ಅದು ಹೇಗೆ ಇಲ್ಲಿದೆ!
ತ್ವರಿತ ಸಾಲ ಪಡೆಯಲು ಗ್ರಾಹಕರು Paytm App ನ ಫೈನಾನ್ಸಿಯಲ್ ಸರ್ವಿಸೆಸ್ ಆಪ್ಶನ್ ನಲ್ಲಿರುವ ಪರ್ಸನಲ್ ಲೋನ್ ಟ್ಯಾಬ್ ಮೇಲೆ ಕ್ಲಿಕ್ಕಿಸಬೇಕು. ಇದಾದ ಬಳಿಕ ನಿಮಗೆ ಕೇಳಲಾಗಿರುವ ಮಾಹಿತಿಯನ್ನು ನೀವು ಒದಗಿಸಬೇಕು ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಲಾಗುವುದು. ಒಂದು ವೇಳೆ ನೀವು ಅರ್ಹರಾಗಿದ್ದಾರೆ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಈಗಾಗಲೇ Paytm ತನ್ನ ಸುಮಾರು 400 ಕ್ಕೂ ಅಧಿಕ ಗ್ರಾಹಕರಿಗೆ ವೈಯಕ್ತಿಕ ಸಾಲ ಕೂಡ ಒದಗಿಸಿದೆ. ಈ ಆರ್ಥಿಕ ವರ್ಷ ಮುಕ್ತಾಯಕ್ಕು ಮುನ್ನ ಸುಮಾರು 10 ಲಕ್ಷ ಜನರಿಗೆ ವೈಯಕ್ತಿಕ ಸಾಲ ನೀಡುವ ಗುರಿ ಕಂಪನಿ ಹೊಂದಿದೆ.
ಇದನ್ನೂ ಓದಿ-ಹಣ ಇಲ್ಲವೇ? ಚಿಂತೆಬಿಡಿ Amazon, Paytm, Mobikwik ನೀಡುತ್ತಿವೆ ಉತ್ತಮ ಕೊಡುಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.