ನವದೆಹಲಿ: ಒಂದು ವೇಳೆ ನಿಮಗೆ ಚೀನಾ ಮೊಬೈಲ್ ಫೋನ್ ಗಳ ಮೇಲೆ ನಂಬಿಕೆ ಇಲ್ಲ ಎಂದಾದರೆ, ನಿಮ್ಮ ಅನಿಸಿಕೆ ಸರಿಯಾಗಿದೆ. ಇತ್ತೀಚೆಗಷ್ಟೇ ಚೀನಾದ ಮೊಬೈಲ್ ತಯಾರಕ ಕಂಪನಿಯೊಂದು ಇಂತಹ ಆವು ಕೃತ್ಯ ಮಾಡಿ ಸಿಲುಕಿಬಿದ್ದಿದೆ. ಕಂಪನಿ ಮಾಡಿರುವ ಈ ಕೆಲಸದಿಂದ ನಿಮಗೂ ಶಾಕ್ ಆಗಬಹುದು.  ಚೀನಾ ಮೂಲದ ಮೊಬೈಲ್ ತಯಾರಕ ಕಂಪನಿಯೊಂದು ಉದ್ದೇಶ ಪೂರ್ವಕವಾಗಿ ಸುಮಾರು 2 ಕೋಟಿ ಜನರ ಸ್ಮಾರ್ಟ್ ಫೋನ್ ನಲ್ಲಿ ವೈರಸ್ ಹಾಕಿದೆ. ಇತ್ತೀಚೆಗಷ್ಟೇ ಇದು ಬಹಿರಂಗಗೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಅಪ್ಪಿತಪ್ಪಿಯೂ ಐಕ್ಲೌಡ್‌ನಲ್ಲಿ ವಾಟ್ಸಾಪ್ ಬ್ಯಾಕಪ್ ಮಾಡಬೇಡಿ


ಟೆಕ್ ಸೈಟ್ themobileindian ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಚೀನಾ ಮೂಲದ ಮೊಬೈಲ್ ತಯಾರಕ ಕಂಪನಿ (Gionee)ಯನ್ನು ಈ ಕೆಲಸಕ್ಕಾಗಿ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಕಂಪನಿ ಉದ್ದೇಶ ಪೂರ್ವಕವಾಗಿ ಸುಮಾರು 21 ಮಿಲಿಯನ್ (ಸುಮಾರು 2 ಕೋಟಿ) ಸ್ಮಾರ್ಟ್ ಫೋನ್ ಗಳಲ್ಲಿ ಟ್ರೋಜನ್ ಹಾರ್ಸ್ ವೈರಸ್ ಹಾಕಿದೆ . ಅಷ್ಟೇ ಅಲ್ಲ ಇದಕ್ಕಾಗಿ ಯಾವ ಮೊಬೈಲ್ ಬಳಕೆದಾರರ ಅನುಮತಿಯನ್ನು ಪಡೆಯಲಾಗಿಲ್ಲ.


ಇದನ್ನು ಓದಿ- ಡೀಫಾಲ್ಟ್ ಆಗಿ ಸೇವ್ ಮಾಡಲಾದ ಚಿತ್ರಗಳು


ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಚೀನಾ ಕಂಪನಿ ಜಿಯೋನಿಯ ಸಹಯೋಗಿ ಕಂಪನಿಯಾಗಿರುವ ಶೇನ್ಝೆನ್ ಝೀಪು ಟೆಕ್ನಾಲಜಿ ಲಿಮಿಟೆಡ್(Shenzhen Zhipu Technology Co. Ltd) ಕಂಪನಿ ಬಳಕೆದಾರರ ಮೊಬೈಲ್ ನಲ್ಲಿ ಅಪ್ಡೇಟ್ ಹೆಸರಿನಲ್ಲಿ ಟ್ರೋಜನ್ ಹಾರ್ಸ್ ವೈರಸ್ ಹಾಕಿದೆ ಹಾಗೂ ಬಳಿಕ ಈ ಎಲ್ಲ ಮೊಬೈಲ್ ಬಳಕೆದಾರರಿಗೆ ಅವರು ಬಯಸದ ಜಾಹೀರಾತುಗಳನ್ನು ಬಿತ್ತರಿಸಿದೆ. ಈ ಜಾಹೀರಾತುಗಳಿಂದ ಕಂಪನಿ ಸುಮಾರು 4.2 ಮಿಲಿಯನ್ ಡಾಲರ್ ಹಣ ಸಂಪಾದಿಸಿದೆ.


ಇದನ್ನು ಓದಿ-ವಾಟ್ಸಾಪ್‌ನ ಈ 3 ಅತ್ಯಂತ ಅಪಾಯಕಾರಿ ಸೆಟ್ಟಿಂಗ್‌ಗಳನ್ನು ತಕ್ಷಣ ಬದಲಾಯಿಸಿ ಇಲ್ಲದಿದ್ದರೆ ...


ಚೀನಾ ಮೂಲದ ನ್ಯಾಯಾಲಯವೊಂದು ಜಿಯೋನಿಯ ಈ ಕೃತ್ಯವನ್ನು ಅಕ್ರಮ ಎಂದು ತೀರ್ಪು ನೀಡಿದ ಬಳಿಕ ಪ್ರಕರಣ ಬಹಿರಂಗಗೊಂಡಿದೆ. ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ ಮೊಬೈಲ್ ತಯಾರಕ ಕಂಪನಿ ಜಿಯೋನಿ   ಡಿಸೆಂಬರ್ 2018 ಹಾಗೂ ಅಕ್ಟೋಬರ್ 2019ರ ನಡುವೆ ಆಪ್ ವೊಂದರ ಮಾಧ್ಯಮದ ಮೂಲಕ ಉದ್ದೇಶ ಪೂರ್ವಕವಾಗಿ ಸುಮಾರು 2 ಕೋಟಿ ಮೊಬೈಲ್ ಗಳನ್ನು ಟ್ರೋಜನ್ ಹಾರ್ಸ್ ಮಾಲ್ವೇಯರ್ (Trojan Horese Malware)ನಿಂದ ಸಂಕ್ರಮಿತಗೊಳಿಸಿದೆ ಎನ್ನಲಾಗಿದೆ.