Gmail ಬಳಕೆದಾರರಿಗೆ ಒಳ್ಳೆಯ ಸುದ್ದಿ, ಜೂನ್‌ವರೆಗೆ ಉಚಿತವಾಗಿ ಸಿಗಲಿದೆ ಈ ಸೇವೆ
ಕಳೆದ ವರ್ಷ, ಗೂಗಲ್ ತನ್ನ ವೀಡಿಯೊ ಕರೆ ಸೇವೆ ಗೂಗಲ್ ಹ್ಯಾಂಗ್ ಔಟ್‌ನ್ನು ಗೂಗಲ್ ಮೀಟ್ ಎಂದು ಮರು ನಾಮಕರಣ ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಂಪನಿಯು ಈ ವೀಡಿಯೊ ಕರೆ ಸೇವೆಯನ್ನು ಎಲ್ಲಾ ಜಿಮೇಲ್ ಬಳಕೆದಾರರಿಗೆ ಉಚಿತವಾಗಿ ಒದಗಿಸಿತು. ಇದರ ನಂತರ, ಗೂಗಲ್ ಮೀಟ್‌ನ ಈ ಉಚಿತ ಸೇವೆಯನ್ನು ಮಾರ್ಚ್ 2021 ರವರೆಗೆ ವಿಸ್ತರಿಸಿತ್ತು. ಈಗ ಕಂಪನಿಯು ಈ ವರ್ಷದ ಜೂನ್‌ವರೆಗೆ ಈ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ನವದೆಹಲಿ: ನೀವು ಜಿಮೇಲ್ (Gmail) ಬಳಕೆದಾರರಾಗಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಗೂಗಲ್ ತನ್ನ ಜಿಮೇಲ್ ಬಳಕೆದಾರರಿಗೆ ವಿಶೇಷ ಸೇವೆಯನ್ನು ಜೂನ್‌ವರೆಗೆ ಉಚಿತವಾಗಿ ನೀಡಲು ನಿರ್ಧರಿಸಿದೆ. ಹಾಗಾಗಿ ಈ ಪ್ರಮುಖ ಸೇವೆಗಾಗಿ ಬಳಕೆದಾರರು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.
Google ಮೀಟ್ ಅನ್ನು ಉಚಿತವಾಗಿ ಬಳಸಿ :
ಜಿಮೇಲ್ ಬಳಕೆದಾರರಿಗೆ ಲಭ್ಯವಿರುವ ಗೂಗಲ್ ಮೀಟ್‌ನ ವೀಡಿಯೊ ಕರೆ ಸೇವೆಯನ್ನು ಈ ವರ್ಷದ ಜೂನ್‌ವರೆಗೆ ಉಚಿತವಾಗಿ ನೀಡಲು ಗೂಗಲ್ (Google) ನಿರ್ಧರಿಸಿದೆ. ಅಂದರೆ, ಈ ವಿಶೇಷ ವೀಡಿಯೊ ಕರೆ ಸೇವೆಗಾಗಿ (Google Video Calling Service) ನೀವು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಈ ಬಗ್ಗೆ ಕಂಪನಿಯು ಟ್ವೀಟ್ ಮೂಲಕ ಮಾಹಿತಿ ಒದಗಿಸಿದೆ.
ಇದನ್ನೂ ಓದಿ - Google's Year In Search: ವಾರ್ಷಿಕ Search Report ಜಾರಿಗೊಳಿಸಿದ Google, WHF Jobs ಹಾಗೂ e-Coursesಗಳ ಅತಿ ಹೆಚ್ಚು ಹುಡುಕಾಟ
ಯಾವುದೇ ಅಡೆತಡೆ ಇಲ್ಲದೆ 24 ಗಂಟೆಗಳ ಕಾಲ ಬಳಸಿ :
ಈಗ ಜಿಮೇಲ್ ಬಳಕೆದಾರರು ಯಾವುದೇ ಅಡೆತಡೆ ಇಲ್ಲದೆ ಮತ್ತು ಹಣವನ್ನು ಖರ್ಚು ಮಾಡದೆ 24 ಗಂಟೆಗಳ ಕಾಲ ಗೂಗಲ್ ಮೀಟ್ (Google Meet) ಸೇವೆಯನ್ನು ಬಳಸಬಹುದು ಎಂದು ಗೂಗಲ್ ಹೇಳಿದೆ. ಇದಕ್ಕಾಗಿ ಕಂಪನಿಯು ಬಳಕೆದಾರರಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆದಾಗ್ಯೂ, ಬಳಕೆದಾರರು ಈ ಸೇವೆಯನ್ನು 24 ಗಂಟೆಗಳಿಗಿಂತ ಹೆಚ್ಚು ಕಾಲ ಬಳಸಿದರೆ, ನಂತರ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಕಂಪನಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಕಳೆದ ವರ್ಷ, ಗೂಗಲ್ ತನ್ನ ವೀಡಿಯೊ ಕರೆ ಸೇವೆ ಗೂಗಲ್ ಹ್ಯಾಂಗ್ ಔಟ್‌ನ್ನು ಗೂಗಲ್ ಮೀಟ್ ಎಂದು ಮರು ನಾಮಕರಣ ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಂಪನಿಯು ಈ ವೀಡಿಯೊ ಕರೆ ಸೇವೆಯನ್ನು ಎಲ್ಲಾ ಜಿಮೇಲ್ ಬಳಕೆದಾರರಿಗೆ ಉಚಿತವಾಗಿ ಒದಗಿಸಿತು. ಇದರ ನಂತರ, ಗೂಗಲ್ ಮೀಟ್‌ನ ಈ ಉಚಿತ ಸೇವೆಯನ್ನು ಮಾರ್ಚ್ 2021 ರವರೆಗೆ ವಿಸ್ತರಿಸಿತ್ತು. ಈಗ ಕಂಪನಿಯು ಈ ವರ್ಷದ ಜೂನ್ ವರೆಗೆ ಈ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಇದನ್ನೂ ಓದಿ - Google WifiNanScan App: Googleನಿಂದ ಅತ್ಯದ್ಭುತ App ಬಿಡುಗಡೆ, ಇಂಟರ್ನೆಟ್ ಇಲ್ಲದೆಯೂ ಎಲ್ಲಾ ಕೆಲಸ ಮಾಡಬಹುದು
ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಉಚಿತ :
ನಿಮ್ಮ ಐಒಎಸ್ ಮತ್ತು ಆಂಡ್ರಾಯ್ಡ್ ಫೋನ್‌ಗಳಲ್ಲಿ ನೀವು ಗೂಗಲ್ ಮೀಟ್ ಅನ್ನು ಉಚಿತವಾಗಿ ಬಳಸಬಹುದು. ಈ ಸೇವೆಯಲ್ಲಿ ನೀವು ಗರಿಷ್ಠ 49 ಜನರನ್ನು ಸೇರಿಸಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.