ನವದೆಹಲಿ: ಜಿಯೋ ಆರಂಭದಿಂದಲೂ ತನ್ನ ಬಳಕೆದಾರರಿಗೆ ದೀರ್ಘಕಾಲದವರೆಗೆ ಉಚಿತ ಡೇಟಾ ಮತ್ತು ಕರೆಗಳ ಪ್ರಯೋಜನಗಳನ್ನು ನೀಡುತ್ತಿದೆ. ಇಂದಿಗೂ, ಜಿಯೋ ಇತರ ಖಾಸಗಿ ವಲಯದ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಹೆಚ್ಚು ಕೈಗೆಟುಕುವ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ನೀಡುತ್ತದೆ. ಇದೀಗ  ಜಿಯೋ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡಿದೆ, ಇದರಲ್ಲಿ ಅವರು 30 ದಿನಗಳವರೆಗೆ ಉಚಿತ ಇಂಟರ್ನೆಟ್, ಕರೆ ಮತ್ತು SMS ಪ್ರಯೋಜನವನ್ನು ಪಡೆಯಬಹುದು. ಜಿಯೋದ 399, 599 ಮತ್ತು 699 ರ ಪೋಸ್ಟ್ ಪೈಡ್ ಯೋಜನೆಗಳೊಂದಿಗೆ 30 ದಿನಗಳ ಉಚಿತ ಪ್ರಯೋಗವನ್ನು ನೀಡಲಾಗುತ್ತಿದೆ. 30 ದಿನಗಳ ಉಚಿತ ಪ್ರಯೋಗವನ್ನು ಪಡೆಯಲು ಜಿಯೋ ಗ್ರಾಹಕರು ಏನು ಮಾಡಬೇಕು ಮತ್ತು ಅವರು ಯಾವ ಪ್ರಯೋಜನಗಳನ್ನು ಇದರಿಂದ ಪಡೆಯುತ್ತಾರೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, (Technology News In Kannada)


COMMERCIAL BREAK
SCROLL TO CONTINUE READING

ಜಿಯೋದ ರೂ 399 ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋದ ರೂ 399 ಪೋಸ್ಟ್‌ಪೇಯ್ಡ್ ಯೋಜನೆಯು 75 ಜಿಬಿ ಹೈ ಸ್ಪೀಡ್ ಡೇಟಾವನ್ನು ನೀಡುತ್ತದೆ, ಅರ್ಥಾತ್ ಪ್ರತಿ ಜಿಬಿಗೆ 10 ರೂ. ವೆಚ್ಚವಾಗುತ್ತದೆ.  ಧ್ವನಿ ಕರೆಗಾಗಿ, ಇದು ಅನಿಯಮಿತ ಕರೆ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 100 SMS ನೀಡಲಾಗುತ್ತದೆ. ಇತರ ಪ್ರಯೋಜನಗಳ ವಿಷಯದಲ್ಲಿ, ಈ ಯೋಜನೆಯು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯಲ್ಲಿ 3 ಫ್ಯಾಮಿಲಿ ಸಿಮ್‌ಗಳನ್ನು ಸೇರಿಸಬಹುದಾಗಿದ್ದು, ಪ್ರತಿಯೊಂದಕ್ಕೂ ತಿಂಗಳಿಗೆ 99 ರೂ. ಚಾರ್ಜ್ ಬೀಳಲಿದೆ. 


ಇದನ್ನೂ ಓದಿ-Rashmika Mandanna Deepfake ವಿಡಿಯೋ ಕುರಿತು ಪ್ರಧಾನಿ ಮೋದಿ ಎಚ್ಚರಿಕೆ! ಹೇಳಿದ್ದೇನು ನೀವೇ ಕೇಳಿ


ಜಿಯೋದ ರೂ 599 ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋದ ರೂ 599 ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಅನಿಯಮಿತ ವೇಗದ ಡೇಟಾ ಲಭ್ಯವಿದೆ. ಧ್ವನಿ ಕರೆ ಕುರಿತು ಹೇಳುವುದಾದರೆ, ಈ ಯೋಜನೆಯು ಅನಿಯಮಿತ ಕರೆಯನ್ನು ಒದಗಿಸುತ್ತದೆ. ಜಿಯೋದ ಈ ಯೋಜನೆಯಲ್ಲಿ, ಪ್ರತಿದಿನ 100 SMS ನೀಡಲಾಗುತ್ತದೆ. ಈ ಯೋಜನೆಯು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಗೆ ಉಚಿತ ಪ್ರವೇಶವನ್ನು ನೀಡುತ್ತದೆ.


ಇದನ್ನೂ ಓದಿ-ಏರ್ಟೆಲ್, ಜಿಯೋ, ವಿಐ, ಬಿಎಸ್ಎನ್ಎಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಟ್ರಾಯ್! ನಿಮಗೂ ಬಂದಿದೆಯಾ?


ಜಿಯೋದ ರೂ 699 ಪೋಸ್ಟ್‌ಪೇಯ್ಡ್ ಯೋಜನೆ
Jio ನ 699 ರೂ ಪೋಸ್ಟ್‌ಪೇಯ್ಡ್ ಯೋಜನೆಯು 100GB ಹೈ ಸ್ಪೀಡ್ ಡೇಟಾದೊಂದಿಗೆ ಬರುತ್ತದೆ, ಅರ್ಥಾತ್ ಪ್ರತಿ GB ಗೆ 10 ರೂ. ವೆಚ್ಚವಾಗುತ್ತದೆ ಎಂದರ್ಥ ಈ ಯೋಜನೆಯು ಅನಿಯಮಿತ ಕರೆಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ, ಪ್ರತಿದಿನ 100 SMS ಲಭ್ಯವಿದೆ. ಈ ಯೋಜನೆಯು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯಲ್ಲಿ 5 ಫ್ಯಾಮಿಲಿ ಸಿಮ್‌ಗಳನ್ನು ಸೇರಿಸಬಹುದು, ಪ್ರತಿಯೊಂದಕ್ಕೂ ತಿಂಗಳಿಗೆ 99 ರೂ. ಪ್ರತಿ ಸಿಮ್‌ಗೆ ಹೆಚ್ಚುವರಿ 5GB ಡೇಟಾ ಲಭ್ಯವಿದೆ. ಈ ಯೋಜನೆಯು ನೆಟ್‌ಫ್ಲಿಕ್ಸ್ (ಬೇಸಿಕ್) ಮತ್ತು ಅಮೆಜಾನ್ ಪ್ರೈಮ್‌ಗೆ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಅಮೆಜಾನ್ ಪ್ರೈಮ್ ವೀಡಿಯೊ ಚಂದಾದಾರಿಕೆಯು 1 ವರ್ಷದ ಅವಧಿಯದ್ದಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ