ವಿದ್ಯಾರ್ಥಿಗಳಿಗೊಂದು Good News , ಸ್ಟೂಡೆಂಟ್ಸ್ ಗಾಗಿ ಹೊಸ feature ಪರಿಚಯಿಸಿದ Jio
ಜಿಯೋದ ಹೊಸ ಫೀಚರ್ ಸ್ಟಡಿ ಮೋಡ್ ತನ್ನ ಬಳಕೆದಾರರಿಗೆ ತರಗತಿವಾರು ವಿಷಯವನ್ನು ಲಭ್ಯವಾಗುವಂತೆ ಮಾಡುತ್ತದೆ.
ನವದೆಹಲಿ : ಜಿಯೋ ತನ್ನ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯಗಳನ್ನು ತಂದಿದೆ. ಜಿಯೋ ತನ್ನ ವೆಬ್ ಬ್ರೌಸಿಂಗ್ ಆಪ್ ಜಿಯೋ ಪೇಜ್ ಗೆ (Jio Pages) ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇದಕ್ಕೆ ಸ್ಟಡಿ ಮೋಡ್ (Study Mode) ಎಂದು ಹೆಸರಿಸಲಾಗಿದೆ. ಇದನ್ನು ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ. ಸ್ಟೆಡಿ ಮೋಡ್ ಬಳಕೆದಾರರಿಗೆ ಹೆಚ್ಚಿನ ರೀತಿಯಲ್ಲಿ ಉಪಯೋಗವಾಗಲಿದೆ ಎನುವುದು ಕಂಪನಿಯ ನಂಬಿಕೆ. ಇದಷ್ಟೇ ಅಲ್ಲ, ಕೋರೋನ ಹಿನ್ನೆಲೆಯಲ್ಲಿ ಇದೀಗ ಆನ್ಲೈನ್ ಕ್ಲಾಸ್ (online class) ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ಟಡಿ ಮೋಡ್ ಅನ್ನು ಜಿಯೋ ಪೇಜ್ ಗೆ ಸೇರಿಸಲಾಗಿದೆ.
Study Mode ಪ್ರಯೋಜನಗಳು :
ಜಿಯೋದ ಹೊಸ ಫೀಚರ್ ಸ್ಟಡಿ ಮೋಡ್ (jio page study mode) ತನ್ನ ಬಳಕೆದಾರರಿಗೆ ತರಗತಿವಾರು ವಿಷಯವನ್ನು ಲಭ್ಯವಾಗುವಂತೆ ಮಾಡುತ್ತದೆ. ಇದರಲ್ಲಿ, ಬಳಕೆದಾರರು ತಮ್ಮ ವಿಷಯಕ್ಕೆ ಅನುಗುಣವಾಗಿ ವೀಡಿಯೊ ಚಾನೆಲ್‌ಗಳ ಸಲಹೆ ಸಿಗುತ್ತದೆ. ಇದರೊಂದಿಗೆ, ಈ ಚಾನಲ್ ಅನ್ನು ತಮ್ಮ ನೆಚ್ಚಿನ ಕ್ಯಾಟಗರಿಗೆ ಸೇರಿಸುವ ಆಯ್ಕೆಯನ್ನು ಇದು ಬಳಕೆದಾರರಿಗೆ ನೀಡುತ್ತದೆ. ಇದಲ್ಲದೆ, ಶಿಕ್ಷಣ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು (website link) ಕೂಡಾ ನೀಡುತ್ತದೆ. ಈ ಲಿಂಕ್ ಗಳ ಮೂಲಕ ಬಳಕೆದಾರರು ನೇರವಾಗಿ ವೆಬ್‌ಸೈಟ್‌ಗಳನ್ನು ಬಳಸಬಹುದು.
ಇದನ್ನೂ ಓದಿ : Redmi Note 10: ರೆಡ್ಮಿಯ ಈ ಸ್ಮಾರ್ಟ್ಫೋನ್ ನೀರಿನಲ್ಲಿಯೂ ಹಾಳಾಗುವುದಿಲ್ಲವಂತೆ!
Jio Pagesನ Study Mode ಪಡೆಯುವುದು ಹೇಗೆ ತಿಳಿಯಿರಿ:
-JioPages ನಲ್ಲಿ ಸ್ಟಡಿ ಮೋಡ್ ಅನ್ನು ಬಳಸಲು, ಬಳಕೆದಾರರು ಮೊದಲು ಈ ವೆಬ್ ಬ್ರೌಸರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
-ಡೌನ್‌ಲೋಡ್ ಪೂರ್ಣಗೊಂಡ ನಂತರ, ಅಪ್ಲಿಕೇಶನ್ ತೆರೆಯಿರಿ.
-ಇಲ್ಲಿ ನೀವು ಮೋಡ್ ಸೆಲೆಕ್ಟ್ ಮಾಡುವ ಆಯ್ಕೆ ಇರುತ್ತದೆ.
- ಸ್ವಿಚ್ ಮೋಡ್ ಆಯ್ಕೆಗೆ ಹೋಗಿ ಸ್ಟೆಡಿ ಮೋಡ್ ಅನ್ನು ಆಕ್ಟಿವ್ ಮಾಡಿಕೊಳ್ಳಬಹುದು
- ಜಿಯೋ ಪೇಜ್ ಅನ್ನು Jio Set-Top Box ನೊಂದಿಗೆ ಇದನ್ನು ಪ್ರಿ ಇನ್‌ಸ್ಟಾಲ್ ಮಾಡಲಾಗಿದೆ, ಆದರೆ ಇತರ ಆಂಡ್ರಾಯ್ಡ್ ಟಿವಿ ಬಳಕೆದಾರರು ಅದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.
8 ಭಾಷೆಗಳಲ್ಲಿ ಲಭ್ಯವಿದೆ :
ಈ ಪ್ಲಾಟ್ ಫಾರಂ ಸಾಕಷ್ಟು ಸುರಕ್ಷಿತವಾಗಿದೆ ಮತ್ತು 8 ಭಾರತೀಯ ಭಾಷೆಗಳನ್ನು ಇದು ಸಪೋರ್ಟ್ ಮಾಡುತ್ತದೆ. ಈ ವೆಬ್ ಬ್ರೌಸರ್‌ನಲ್ಲಿ ಯಾವುದೇ ವೆಬ್‌ಸೈಟ್‌ನ ಲಿಂಕ್‌ಗಳನ್ನು ಸೇವ್ ಮಾಡುವ ಸೌಲಭ್ಯವನ್ನು ಇದು ಬಳಕೆದಾರರಿಗೆ ನೀಡುತ್ತದೆ. ಇದರೊಂದಿಗೆ, ಬಳಕೆದಾರರು ಸುಲಭವಾಗಿ ತಮ್ಮ ಡಿವೈಸ್ ನಲ್ಲಿ ವೆಬ್‌ಸೈಟ್ ಅನ್ನು ಸುಲಭವಾಗಿ ತೆರೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : chat ಓಪನ್ ಮಾಡದೆಯೇ ಕಳುಹಿಸಬಹುದು WhatsApp ಮೆಸೇಜ್ , ಈ ಟ್ರಿಕ್ ಬಳಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ