Google Pixel Production In India: ಗೂಗಲ್ ತನ್ನ ಮಾರುಕಟ್ಟೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಪೂರ್ಣಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ವಾಸ್ತವದಲ್ಲಿ ಇತ್ತೀಚೆಗೆ ಬಹಿರಂಗಗೊಂಡ ಮಾಹಿತಿಯೊಂದರ ಪ್ರಕಾರ, ಗೂಗಲ್ ಭಾರತದಲ್ಲಿ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಆರಂಭಿಸಲಿದೆ. ಇದು 2024ರಿಂದಲೇ ಆರಂಭವಾಗಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗೂಗಲ್ ದೇಶದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಯೋಜನೆಯನ್ನು ಘೋಷಿಸಿತ್ತು. ಮಾಹಿತಿಯ ಪ್ರಕಾರ, ಪಿಕ್ಸೆಲ್ 8 ಸ್ಮಾರ್ಟ್ ಫೋನ್ ಗಳು ಭಾರತದಲ್ಲಿ ಮೊದಲು ಉತ್ಪಾದನೆಯಾಗಲಿವೆ. (Technology News In Kannada)
   
ವರದಿಯ ಪ್ರಕಾರ, ಗೂಗಲ್‌ನ ಉನ್ನತ ಮಟ್ಟದ ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್ ಉತ್ಪಾದನೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಇದಕ್ಕಾಗಿ ಕಂಪನಿಯು 10 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 1 ಕೋಟಿ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.


COMMERCIAL BREAK
SCROLL TO CONTINUE READING

ವಿಶೇಷತೆ ಎಂದರೆ ಗೂಗಲ್‌ನಂತಹ ದೊಡ್ಡ ಕಂಪನಿಯು ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿದರೆ, ಅದು ದೇಶದಲ್ಲಿ ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸುತ್ತದೆ. ಆದಾಗ್ಯೂ, ಗೂಗಲ್ ಭಾರತದಲ್ಲಿ ಎಷ್ಟು ಫೋನ್‌ಗಳನ್ನು ತಯಾರಿಸಲು ಯೋಜಿಸುತ್ತಿದೆ ಎಂಬುದು ವರದಿಯಲ್ಲಿ  ಬಹಿರಂಗವಾಗಿಲ್ಲ. ಅಲ್ಲದೆ, ಈ ಫೋನ್‌ಗಳು ಕೇವಲ ಭಾರತೀಯ ಮಾರುಕಟ್ಟೆಗಳಿಗೆ ಮಾತ್ರವೇ ಅಥವಾ ರಫ್ತಿಗಾಗಿ ಅವುಗಳನ್ನು ತಯಾರಿಸಲಾಗುತ್ತದೆಯೇ ಎಂಬುದರ ಕುರಿತು ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


ಇದನ್ನೂ ಓದಿ-Amrut Bharat Trains: ದೇಶಾದ್ಯಂತದ ಕೋಟ್ಯಾಂತರ ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ!


ಹೊಸ ಕೃತಕ ಬುದ್ಧಿಮತ್ತೆ ಮಾದರಿ ಬಿಡುಗಡೆ!
ಏತನ್ಮಧ್ಯೆ, ಗೂಗಲ್ ತನ್ನ ಕೃತಕ ಬುದ್ಧಿಮತ್ತೆಯ ಮಾದರಿಯ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಜೆಮಿನಿ 1.5 ಪ್ರೊ ಮಾದರಿಯನ್ನು ಪಠ್ಯ ಮತ್ತು ವೀಡಿಯೊವನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಗೂಗಲ್ ಎಐ ಇದು ಒಂದು ದೊಡ್ಡ ಹೆಜ್ಜೆಯಾಗಿದೆ.


ಇದನ್ನೂ ಓದಿ-WhatsApp Helpline: ಇನ್ಮುಂದೆ ನೀವು ಡೀಪ್ ಫೇಕ್ ಕುರಿತು ವರದಿ ಮಾಡಬಹುದು, ಸಹಾಯವಾಣಿ ಸಂಖ್ಯೆ ಜಾರಿಗೊಳಿಸಲಿದೆ ವಾಟ್ಸ್ ಆಪ್!


ಪಿಕ್ಸಲ್ 8 ಪ್ರೊ ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳು
ಗೂಗಲ್ ಪಿಕ್ಸಲ್ 8 ಪ್ರೊ ಸ್ಮಾರ್ಟ್ ಫೋನ್ 6.7 ಇಂಚಿನ ಸೂಪರ್ ಆಕ್ಟುವಾ ಡಿಸ್ಪ್ಲೇ ಹೊಂದಿದೆ. ಈ ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು 5050 mAh ಬ್ಯಾಟರಿಯನ್ನು ಒದಗಿಸಲಾಗಿದೆ. ಫೋನ್ 50MP + 64MP + 48MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 11MP ಕ್ಯಾಮೆರಾವನ್ನು ಹೊಂದಿದೆ. 12GB ರಾಮ್  ಅನ್ನು ಎರಡು ಶೇಖರಣಾ ಆಯ್ಕೆಗಳೊಂದಿಗೆ ಒದಗಿಸಲಾಗಿದೆ - 128GB ಮತ್ತು 256GB. ಫೋನ್‌ನಲ್ಲಿ ಅಂಡ್ರಾಯಿಡ್ 14 ಅನ್ನು ನೀಡಲಾಗಿದೆ. ಭಾರತದಲ್ಲಿ ಗೂಗಲ್ ಪಿಕ್ಸಲ್ 8 ಪ್ರೊ ಬೆಲೆ ₹106,999 ರಿಂದ ಆರಂಭವಾಗುತ್ತದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.