Google Maps ನಲ್ಲೂ ಬಂತು ಈ ವೈಶಿಷ್ಟ್ಯ, ಸ್ಕ್ರೀನ್ ಲಾಕ್ ಆದರೂ ರಸ್ತೆ ಕಾಣಿಸಲಿದೆ!
Google Maps New Feature: ಗೂಗಲ್ ನ ಮಾರ್ಗದರ್ಶಕ ಆಪ್ ಗೂಗಲ್ ಮಾಪ್ಸ್ ನಲ್ಲಿ ಹೊಸ ವೈಶಿಷ್ಟ್ಯ ಬಂದಿದೆ. ತನ್ಮೂಲಕ ಫೋನ್ ಓಪನ್ ಮಾಡದೆಯೇ ನೀವು ಮಾರ್ಗವನ್ನು ನೋಡಬಹುದು. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಫೋನ್‌ನ ಲಾಕ್ ಸ್ಕ್ರೀನ್‌ನಲ್ಲಿ ರಸ್ತೆಯನ್ನು ನೋಡಲು ಸಾಧ್ಯವಾಗಲಿದೆ. ಈ ವೈಶಿಷ್ಟ್ಯವನ್ನು ನೀವು ಹೇಗೆ ಬಳಸಬಹುದು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿದುಕೊಳ್ಳೋಣ ಬನ್ನಿ, (Technology News In Kannada)
Google Maps Update: ಗೂಗಲ್ ಮ್ಯಾಪ್ಸ್ ಬಳಕೆದಾರರ ಪಾಲಿಗೆ ಒಂದು ನ್ಯಾವಿಗೇಷನ್ ಅಪ್ಲಿಕೇಶನ್ ಆಗಿದ್ದು, ಬಳಕೆದಾರರು ಅದನ್ನು ತಮ್ಮ ಮಾರ್ಗದರ್ಶಕವಾಗಿ ಬಳಸುತ್ತಾರೆ. ಇದು ಗೂಗಲ್ ನ ಅಪ್ಲಿಕೇಶನ್ ಆಗಿದೆ ಮತ್ತು ಫೋನ್‌ನಲ್ಲಿ ಪ್ರಿಇನ್ಸ್ಟಾಲ್ ರೂಪದಲ್ಲಿ ಬರುತ್ತದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ಬಳಕೆದಾರರು ಯಾವುದೇ ಸ್ಥಳಕ್ಕೆ ಸಂಪೂರ್ಣ ಮಾರ್ಗವನ್ನು ತಿಳಿದುಕೊಳ್ಳಬಹುದು. ಇದು ತುಂಬಾ ಉಪಯುಕ್ತವಾದ ಅಪ್ಲಿಕೇಶನ್ ಆಗಿದೆ. ಇದೀಗ ಗೂಗಲ್ ಮಾಪ್ಸ್ ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಸೇರಿಸಲಾಗಿದೆ, ಅದರ ಸಹಾಯದಿಂದ ಬಳಕೆದಾರರು ತಮ್ಮ ಫೋನ್ ಅನ್ಲಾಕ್ ಮಾಡದೆಯೆ ಮಾರ್ಗವನ್ನು ನೋಡಬಹುದು. ನಾವು ಮಾತನಾಡುತ್ತಿರುವ ವೈಶಿಷ್ಟ್ಯದ ಹೆಸರು "ಗ್ಲಾನ್ಸೆಬಲ್ ಡೈರಕ್ಷನ್". ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಫೋನ್‌ನ ಲಾಕ್ ಸ್ಕ್ರೀನ್‌ನಲ್ಲಿ ಮಾರ್ಗವನ್ನು ನೋಡಬಹುದು(Technology News In Kannada)
ಗ್ಲಾನ್ಸೆಬಲ್ ಡೈರಕ್ಷನ್ ಗಳು ಯಾವುವು?
ಫೆಬ್ರವರಿಯಲ್ಲಿ ಲಾಂಚ್ ಆಗಿರುವ ಈ ವೈಶಿಷ್ಟ್ಯದ ಮೂಲಕ ಫೋನ್ ಅನ್ ಲಾಕ್ ಮಾಡದೆಯೇ ಲಾಕ್ ಸ್ಕ್ರೀನ್ ನಲ್ಲಿ ದಾರಿಯನ್ನು ನೋಡಬಹುದು. ಇದು ನಿಮಗೆ ರಿಯಲ್ ಟೈಮ್ ಅಪ್ಡೇಟ್ ನೀಡುತ್ತದೆ. ಎಸ್ಟಿಮೇಟೆಡ್ ಟೈಮ್ ಆಫ್ ಅರೈವಲ್ (ETA) ಮತ್ತು ಡೈವರ್ಶನ್‌ಗಳಂತಹ ಪ್ರಯಾಣ ಸಂಬಂಧಿತ ಮಾಹಿತಿಯನ್ನು ನೇರವಾಗಿ ಸ್ಮಾರ್ಟ್‌ಫೋನ್‌ನ ಲಾಕ್ ಸ್ಕ್ರೀನ್‌ನಲ್ಲಿ ನೀವು ನೋಡಬಹುದು. ಇದರೊಂದಿಗೆ ನೀವು ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ನ್ಯಾವಿಗೇಟ್ ಮಾಡಬಹುದು.
ಈ ವೈಶಿಷ್ಟ್ಯವು ಯಾವಾಗ ಮತ್ತು ಎಲ್ಲಿ ಲಭ್ಯವಿರುತ್ತದೆ?
ಈ ವೈಶಿಷ್ಟ್ಯವು ಕ್ರಮೇಣ ಎಲ್ಲಾ ಬಳಕೆದಾರರಿಗೆ ಅಂಡ್ರಾಯಿಡ್ ಮತ್ತು ಐಓಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಅಂಡ್ರಾಯಿಡ್ ಆವೃತ್ತಿ 11.116 ಮತ್ತು ಐಓಎಸ್ ಆವೃತ್ತಿ 6.104.2 ಹೊಂದಿರುವ ಬಳಕೆದಾರರು ಈ ವೈಶಿಷ್ಟ್ಯವನ್ನು ಪಡೆಯಲು ಪ್ರಾರಂಭಿಸಿದ್ದಾರೆ.
ವೈಶಿಷ್ಟ್ಯ ಪ್ರಯೋಜನಗಳು
ರಿಯಲ್ ಟೈಮ್ ಅಪ್ಡೇಟ್ ಸಿಗಲಿದೆ
ಈ ವೈಶಿಷ್ಟ್ಯವು ಪ್ರಯಾಣದ ಸಮಯದಲ್ಲಿ ಮಾರ್ಗವು ಬದಲಾದರೂ ಸಹ ಬಳಕೆದಾರರಿಗೆ ನವೀಕರಿಸಿದ ಮಾಹಿತಿಯನ್ನು ಒದಗಿಸುತ್ತದೆ, ಇದರಿಂದ ಪ್ರಯಾಣಿಕ ಯಾವಾಗಲೂ ಸರಿಯಾದ ಮಾರ್ಗದಲ್ಲಿಯೇ ಉಳಿಯುತ್ತಾನೆ.
ಸುಲಭ ಪ್ರವೇಶ
ಈ ವೈಶಿಷ್ಟ್ಯವು ಲಾಕ್ ಸ್ಕ್ರೀನ್‌ನಲ್ಲಿಯೇ ಮಾರ್ಗವನ್ನು ನೋಡಲು ಬಳಕೆದಾರರಿಗೆ ಅನುಮತಿಸುತ್ತದೆ. ಇದರೊಂದಿಗೆ, ಬಳಕೆದಾರರು ಮತ್ತೆ ಮತ್ತೆ ಫೋನ್ ಅನ್ನು ಅನ್ಲಾಕ್ ಮಾಡುವ ಅಗತ್ಯವಿಲ್ಲ. ಇದು ಸಾಕಷ್ಟು ಸುಲಭವಾಗಿದೆ.
ಇದನ್ನೂ ಓದಿ-Windows 11 ಇನ್ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿದೆ, ಮೈಕ್ರೋಸಾಫ್ಟ್ ನಿಂದ ಹೊಸ ಅಪ್ಡೇಟ್ ಬಿಡುಗಡೆ!
ಆಟೋಮೇಟಿಕ್ ರೀಕ್ಯಾಲ್ಕ್ಯುಲೇಶನ್
ಈ ವೈಶಿಷ್ಟ್ಯವು ಬಳಕೆದಾರರ ಮಾರ್ಗವನ್ನು ಆಟೋಮೇಟಿಕ್ ರೀಕ್ಯಾಲ್ಕ್ಯೂಲೆಟ್ ಮಾಡಬಹುದು. ಬಳಕೆದಾರರು ತಪ್ಪು ದಾರಿಯಲ್ಲಿ ಹೋದರೂ, ಗೂಗಲ್ ಮ್ಯಾಪ್ಸ್ ಸ್ವಯಂಚಾಲಿತವಾಗಿ ಮಾರ್ಗವನ್ನು ಬದಲಾಯಿಸುತ್ತವೆ.
ಈ ವೈಶಿಷ್ಟ್ಯವನ್ನು ಆನ್ ಮಾಡುವುದು ಹೇಗೆ
1. ಗೂಗಲ್ ಮ್ಯಾಪ್ಸ್ ಆಪ್ ಓಪನ್ ಮಾಡಿ.
2. ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡಿ.
3. ಇದರ ನಂತರ "ಸೆಟ್ಟಿಂಗ್ಸ್" ಗೆ ಹೋಗಿ.
4. ಇಲ್ಲಿ "ನ್ಯಾವಿಗೇಷನ್ ಸೆಟ್ಟಿಂಗ್ಸ್" ಗೆ ಹೋಗಿ.
5. ಇದರ ನಂತರ ನೀವು "ನ್ಯಾವಿಗೇಟ್ ಮಾಡುವಾಗ ಗ್ಲಾನ್ಸೆಬಲ್ ಡೈರಕ್ಷನ್" ಆಯ್ಕೆಯನ್ನು ನೋಡಿವಿರಿ. ಅದನ್ನು ಆನ್ ಮಾಡಿ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ