Mobile Game ಆಡುವವರಿಗೆ ದೊಡ್ಡ ಉಡುಗೊರೆ ನೀಡಿದ Google, ಇಲ್ಲಿದೆ ಡೀಟೇಲ್ಸ್
Google ತನ್ನ Play Store ನಲ್ಲಿ ಪಾಸ್ ಸೆಕ್ಷನ ಆಂಭಿಸಿದೆ. ಪ್ಲೇ ಪಾಸ್ ಕಲೆಕ್ಷನ್ ನಲ್ಲಿ ಗೂಗಲ್ ಮೊಬೈಲ್ ಗೇಮ್ಸ್, ಒಗಟುಗಳು ಹಾಗೂ ಜಂಗಲ್ ಅಡ್ವೆಂಚರ್, ವರ್ಲ್ಡ್ ಕ್ರಿಕೆಟ್ ಬ್ಯಾಟಲ್ ಗಳಂತಹ ಆಕ್ಷನ್ ಆಟಗಳನ್ನು ಶಾಮೀಲುಗೊಳಿಸಲಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪದೆದುಕೊಳ್ಳೋಣ.
ನವದೆಹಲಿ: Google ಸೋಮವಾರ Play Store ನಲ್ಲಿ Play Pass ವಿಭಾಗವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ತನ್ಮೂಲಕ 1,000 ಕ್ಕೂ ಅಧಿಕ ಅಪ್ಲಿಕೇಶನ್‌ಗಳು ಮತ್ತು ಆಟಗಳನ್ನು ಜಾಹೀರಾತುಗಳಿಲ್ಲದೆ ಪ್ರಸ್ತುತ ಪಡಿಸಲಾಗುವುದು ಎಂದಿದೆ. ಇದರ ಜೊತೆಗೆ ಅವುಗಳ ಪ್ರೀಮಿಯಂ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ನಿಗದಿತ ಮಾಸಿಕ ಅಥವಾ ವಾರ್ಷಿಕ ಶುಲ್ಕಕ್ಕೆ ನೀಡಲಿದೆ. ಪ್ಲೇ ಪಾಸ್ ಸಂಗ್ರಹಣೆಯು ಜಂಗಲ್ ಅಡ್ವೆಂಚರ್ಸ್, ವರ್ಲ್ಡ್ ಕ್ರಿಕೆಟ್ ಬ್ಯಾಟಲ್‌ನಂತಹ ಆಟಗಳು, ಒಗಟುಗಳು ಅಥವಾ ಆಕ್ಷನ್ ಆಟಗಳನ್ನು ಒಳಗೊಂಡಿರುತ್ತದೆ.
ನೀವು 109 ರೂ.ಗೆ ಚಂದಾದಾರರಾಗಬಹುದು
ಇದರ ಮೂಲಕ, ಯೂಟರ್ ಸೇರಿದಂತೆ ಯುನಿಟ್ ಪರಿವರ್ತಕ, ಆಡಿಯೊಲ್ಯಾಬ್ ಮತ್ತು ಫೋಟೋ ಸ್ಟುಡಿಯೋ ಪ್ರೊನಂತಹ ಅಪ್ಲಿಕೇಶನ್‌ಗಳನ್ನು ಸಹ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿರುವ ಗೂಗಲ್, “ಭಾರತದ ಬಹು ಅಪ್ಲಿಕೇಶನ್‌ಗಳು ಸೇರಿದಂತೆ 59 ದೇಶಗಳ ಡೆವಲಪರ್‌ಗಳಿಂದ 41 ವಿಭಾಗಗಳಲ್ಲಿ 1,000 ಉತ್ತಮ ಗುಣಮಟ್ಟದ ಮತ್ತು ಕ್ಯುರೇಟೆಡ್ ಸಂಗ್ರಹಗಳನ್ನು ಪ್ಲೇ ಪಾಸ್ ನೀಡುತ್ತದೆ. ಬಳಕೆದಾರರು ಒಂದು ತಿಂಗಳ ಪ್ರಯೋಗದೊಂದಿಗೆ ಪ್ರಾರಂಭಿಸಬಹುದು ಮತ್ತು ಒಂದು ತಿಂಗಳಿಗೆ ರೂ 99 ಅಥವಾ ವಾರ್ಷಿಕವಾಗಿ ರೂ 889 ಪಾವತಿಸಿ ಚಂದಾದಾರರಾಗಬಹುದು. ಬಳಕೆದಾರರು ರೂ 109 ಗೆ ಒಂದು ತಿಂಗಳ ಪ್ರಿಪೇಯ್ಡ್ ಚಂದಾದಾರಿಕೆಯನ್ನು ಸಹ ಪಡೆಯಬಹುದು.
ಇದನ್ನೂ ಓದಿ-BSNL ಭರ್ಜರಿ ಪ್ಲಾನ್: 200ರೂ.ಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಲಾಭ
90 ದೇಶಗಳಲ್ಲಿ ಸೇವೆ ಪ್ರಾರಂಭ
Google ಫ್ಯಾಮಿಲಿ ಗ್ರೂಪ್ ಜೊತೆಗೆ, ಕುಟುಂಬ ನಿರ್ವಾಹಕರು ತಮ್ಮ Play Pass ಚಂದಾದಾರಿಕೆಗಳನ್ನು ಕುಟುಂಬದ ಇತರ ಐವರು ಸದಸ್ಯರೊಂದಿಗೆ ಹಂಚಿಕೊಳ್ಳಬಹುದು. 90 ದೇಶಗಳಲ್ಲಿ ಬಳಕೆದಾರರನ್ನು ತಲುಪುವ ಸಾಮರ್ಥ್ಯದೊಂದಿಗೆ, Play Pass ಎಲ್ಲಾ ರೀತಿಯ ಅಪ್ಲಿಕೇಶನ್‌ಗಳು ಮತ್ತು ಆಟಗಳ ಭಾರತೀಯ ಡೆವಲಪರ್‌ಗಳಿಗೆ ತಮ್ಮ ಜಾಗತಿಕ ಬಳಕೆದಾರರ ನೆಲೆಯನ್ನು ವಿಸ್ತರಿಸಲು ಮತ್ತು ಹೊಸ ಆದಾಯದ ಸ್ಟ್ರೀಮ್‌ಗಳನ್ನು ಅನ್‌ಲಾಕ್ ಮಾಡಲು ಹೊಸ ಅವಕಾಶವನ್ನು ಸೃಷ್ಟಿಸಲಿದೆ. Google ಪ್ರತಿ ತಿಂಗಳು ಹೊಸ ಆಟಗಳು ಮತ್ತು ಅಪ್ಲಿಕೇಶನ್‌ಗಳನ್ನು ಸೇರಿಸಲು ಜಾಗತಿಕ ಮತ್ತು ಸ್ಥಳೀಯ ಡೆವಲಪರ್‌ಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಲಿದೆ ಮತ್ತು ಇದರಿಂದ Play Pass ನಲ್ಲಿ ಯಾವಾಗಲೂ ಹೊಸ ಅಪ್ಡೇಟ್ ಅನ್ನು ಕೂಡ ನೀಡಲಿದೆ. ಡೆವಲಪರ್‌ಗಳು ಇದರಲ್ಲಿ ಹೇಗೆ ಭಾಗವಹಿಸಬೇಕು ಎಂಬುದನ್ನು ಅರಿತುಕೊಳ್ಳಬೇಕು
ಈ ಅಪ್ಲಿಕೇಶನ್‌ಗಳಲ್ಲಿ ಆಪ್ ಗಳು ತೊಂದರೆಯನ್ನುಂಟು ಮಾಡುವುದಿಲ್ಲ.
ಇದನ್ನೂ ಓದಿ-Jio ಅದ್ಭುತ ಪ್ಲಾನ್! ಎರಡು ವರ್ಷಗಳ ಕಾಲ ಸಿಗಲಿದೆ Free ಡೇಟಾ ಮತ್ತು ಕರೆ ಜೊತೆಗೆ 4G Smartphone
Play Pass ಕಲೆಕ್ಷನ್ನಲ್ಲಿ ವಿಶ್ರಾಂತಿ ಪಡೆಯಲು ಅನುಕೂಲ ಮಾಡುವ ಹಲವು ಶೀರ್ಷಿಕೆಗಳು ಶಾಮೀಲಾಗಿರಲಿವೆ. ಆಟಗಳೇ ಆಗಿರಲಿ, ಒಗಟುಗಳೇ ಆಗಿರಲಿ ಅಥವಾ ಆಕ್ಷನ್ ಗೇಮ್ ಗಳೇ ಆಗಿರಲಿ-ಉತ್ಪಾದನೆಯನ್ನು ಹೆಚ್ಚಿಸುವ ಆಪ್ ಗಳು ಕೂಡ ಇದರಲ್ಲಿ ಇರಲಿವೆ. ಬಳಕೆದಾರರಿಗೆ ಜಂಗಲ್ ಅಡ್ವೆಂಚರ್, ವರ್ಲ್ಡ್ ಕ್ರಿಕೆಟ್ ಬ್ಯಾಟಲ್ 2 ಹಾಗೂ ಮಾನ್ಯುಮೆಂಟ್ ವ್ಯಾಲಿಗಳಂತಹ ಪ್ರಶಿದ್ದ ಆಟ, ಯೂಟರ್, ಯುನಿಟ್ ಕನ್ವರ್ಟರ್ ಹಾಗೂ ಆಡಿಯೋ ಲ್ಯಾಬ್ಸ್ ಗಳಂತಹ ಉಪಯುಕ್ತ ಆಪ್ ಗಳ ಜೊತೆಗೆ ಹುದುಗಿಕೊಂಡ ರತ್ನಗಳಾದ ಫೋಟೋ ಸ್ಟುಡಿಯೋ ಪ್ರೊ, ಕಿಂಗ್ಡಂ ರಶ್ ಫ್ರಾಂಟೀಯರ್ಸ್ ಟಿಡಿ ಹಾಗೂ ಇನ್ನು ಹತ್ತು ಹಲವು ಶಾಮೀಲಾಗಿವೆ.
ಇದನ್ನೂ ಓದಿ-Cyber Warfare: ಏನಿದು ಸೈಬರ್ ವಾರ್ ಫೇರ್? ಸೈನಿಕರ ರೀತಿಯೇ ಯುದ್ಧವಾಡುತ್ತಾರೆಯೇ ಸೈಬರ್ ಅಪರಾಧಿಗಳು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.