Google Chat New Feature: ಗೂಗಲ್ ತನ್ನ ಚಾಟ್ ಅಪ್ಲಿಕೇಶನ್-ಗೂಗಲ್ ಚಾಟ್ ಬಳಕೆದಾರರಿಗಾಗಿ ವಾಟ್ಸಾಪ್‌ನಂತಹ ಹೊಸ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಿದೆ. ಅದುವೇ ಧ್ವನಿ ಸಂದೇಶ ವೈಶಿಷ್ಟ್ಯ. ಇದಲ್ಲದೆ, ಅಪ್ಲಿಕೇಶನ್‌ನಲ್ಲಿನ ಫೋಟೋ ಬಟನ್ ಅನ್ನು ಮೈಕ್ರೊಫೋನ್ ಬಟನ್‌ನೊಂದಿಗೆ ಬದಲಾಯಿಸಲಾಗಿದೆ. ಇದರ ಸಹಾಯದಿಂದ  ಗೂಗಲ್ ಚಾಟ್ ಬಳಕೆದಾರರು ಮೈಕ್ರೊಫೋನ್ ಬಟನ್ ಜೊತೆಗೆ ಧ್ವನಿ ಸಂದೇಶವನ್ನು ಕಳುಹಿಸುವುದು ತುಂಬಾ ಸುಲಭವಾಗಿದೆ. 


COMMERCIAL BREAK
SCROLL TO CONTINUE READING

ಗೂಗಲ್ ಚಾಟ್‌ನಲ್ಲಿ ಧ್ವನಿ ಸಂದೇಶವನ್ನು ಕಳುಹಿಸುವುದು ಹೇಗೆ? 
ಗೂಗಲ್ ಚಾಟ್‌ನಲ್ಲಿ ಧ್ವನಿ ಸಂದೇಶವನ್ನು ಕಳುಹಿಸಲು ಬಳಕೆದಾರರು ವಾಟ್ಸಾಪ್‌ನಂತೆಯೇ ಮೊದಲು ಮೈಕ್ರೊಫೋನ್ ಬಟನ್ ಬಳಸಬೇಕು. ಆದರೆ ಗೂಗಲ್ ಚಾಟ್‌ನಲ್ಲಿ ಬಳಕೆದಾರರು ಮೈಕ್ರೊಫೋನ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವ ಅಗತ್ಯವಿಲ್ಲ. ಅದನ್ನು ಜಸ್ಟ್ ಟ್ಯಾಪ್ ಮಾಡಿ ಸಂದೇಶವನ್ನು ರೆಕಾರ್ಡ್ ಮಾಡಬೇಕು. ನೀವು ಧ್ವನಿ ಸಂದೇಶವನ್ನು ಕಳುಹಿಸುವ ಮೊದಲು ಧ್ವನಿ ಟಿಪ್ಪಣಿಯಲ್ಲಿ ಅದನ್ನು ಆಲಿಸಬಹುದು. 


ಇದನ್ನೂ ಓದಿ- ಅಂತಾರಾಷ್ಟ್ರೀಯ ಯುಪಿಐ ಪಾವತಿ: PhonePe, GPayಗೆ ಟಕ್ಕರ್ ನೀಡಿದ ವಾಟ್ಸಾಪ್


ಲಭ್ಯವಿರುವ ಮಾಹಿತಿಯ ಪ್ರಕಾರ, ಗೂಗಲ್ ಚಾಟ್‌ನಲ್ಲಿ ಕಳುಹಿಸಿದ ಧ್ವನಿ ಸಂದೇಶವು ಗ್ರೂಪ್ ಚಾಟ್ ಅಥವಾ ಸಂದೇಶದಲ್ಲಿ ಮಾತ್ರೆ ಆಕಾರದಲ್ಲಿ ಕಾಣಿಸುತ್ತದೆ. ಇತರ ಬಳಕೆದಾರರು ಸಾಮಾನ್ಯ ಚಾಟ್ ಸಂದೇಶಗಳಂತೆ ಧ್ವನಿ ಸಂದೇಶಗಳಿಗೆ ಪ್ರತ್ಯುತ್ತರಿಸಲು ಸಾಧ್ಯವಾಗುತ್ತದೆ. 


ಈಗಾಗಲೇ, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಗೂಗಲ್ ಚಾಟ್ ಧ್ವನಿ ಸಂದೇಶ ಕಳುಹಿಸುವಿಕೆ ವೈಶಿಷ್ಟ್ಯ ಲಭ್ಯವಿದೆ. ಇದರ ಸಹಾಯದಿಂದ ಬಳಕೆದಾರರು ಸಂದೇಶವನ್ನು ಟೈಪ್ ಮಾಡುವ ಬದಲಿಗೆ ಧ್ವನಿ ಸಂದೇಶವನ್ನು ಕಳುಹಿಸಬಹುದು. ಇದು ಸುಲಭವಾಗಿ ಸಂದೇಶ ಕಳುಹಿಸಲು ಮಾತ್ರವಲ್ಲದೆ ಸಮಯವನ್ನು ಕೂಡ ಉಳಿಸುತ್ತದೆ. 


ಇದನ್ನೂ ಓದಿ- Smartphone: ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ನಿಧಾನಗೊಳಿಸುತ್ತೆ ಬಳಕೆದಾರರ ಈ 5 ಅಭ್ಯಾಸಗಳು


ಶೀಘ್ರದಲ್ಲೇ ಬಳಕೆದಾರರು ಗೂಗಲ್ ಚಾಟ್‌ನಲ್ಲಿ ಧ್ವನಿ ಸಂದೇಶಗಳನ್ನು ಪದಗಳಾಗಿ ಲಿಪ್ಯಂತರಗೊಳಿಸುವ ಪ್ರತಿಲೇಖನ ವೈಶಿಷ್ಟ್ಯವನ್ನು ಸಹ ಪಡೆಯುತ್ತಾರೆ ಎಂದು ಗೂಗಲ್ ಘೋಷಿಸಿದೆ. ಗಮನಾರ್ಹವಾಗಿ, ವಾಟ್ಸಾಪ್ ಇತ್ತೀಚೆಗೆ ಐಒಎಸ್ ಬಳಕೆದಾರರಿಗಾಗಿ ಇಂತಹ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ ಮತ್ತು ಇದು ಶೀಘ್ರದಲ್ಲೇ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಬಿಡುಗಡೆ ಮಾಡಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.