8 ವರ್ಷಗಳ ನಂತರ ಹೊಸ ಲೋಗೋವನ್ನು ಪಡೆಯುತ್ತಿದೆ Google Chrome
Google Chrome: ಗೂಗಲ್ ಕ್ರೋಮ್‌ನ ವಿನ್ಯಾಸಕ ಎಲ್ವಿನ್ ಹೂ, ಟ್ವಿಟರ್‌ನಲ್ಲಿ ಲೋಗೋ ಮರುವಿನ್ಯಾಸದ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ.
ನವದೆಹಲಿ: ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ಗೂಗಲ್ ತನ್ನ ಕ್ರೋಮ್ ಬ್ರೌಸರ್ (Browser) ಲೋಗೋವನ್ನು ಬದಲಾಯಿಸುತ್ತಿದೆ. ಗೂಗಲ್ ಕ್ರೋಮ್‌ನ ವಿನ್ಯಾಸಕ ಎಲ್ವಿನ್ ಹೂ, ಟ್ವಿಟರ್‌ನಲ್ಲಿ ಲೋಗೋ ಮರುವಿನ್ಯಾಸದ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನೌಕರರಿಗೆ ಸಿಹಿ ಸುದ್ದಿ..! ವೇತನಕ್ಕಾಗಿ ತಿಂಗಳ ಅಂತ್ಯದವರೆಗೆ ಕಾಯಬೇಕಿಲ್ಲ, ಪ್ರತೀ ವಾರ ಕೈ ಸೇರಲಿದೆ ಸಂಬಳ
"ನಿಮ್ಮಲ್ಲಿ ಕೆಲವರು ಇಂದು Chrome ನ ಕ್ಯಾನರಿ ಅಪ್‌ಡೇಟ್‌ನಲ್ಲಿ ಹೊಸ ಐಕಾನ್ ಅನ್ನು ಗಮನಿಸಿರಬಹುದು. ಹೌದು! ನಾವು 8 ವರ್ಷಗಳಲ್ಲಿ ಮೊದಲ ಬಾರಿಗೆ Chrome ನ ಬ್ರ್ಯಾಂಡ್ ಐಕಾನ್‌ಗಳನ್ನು ರಿಫ್ರೆಶ್ ಮಾಡುತ್ತಿದ್ದೇವೆ. ಹೊಸ ಐಕಾನ್‌ಗಳು ನಿಮ್ಮ ಸಾಧನಗಳಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ" ಎಂದು ಹೂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಹೊಸ ಐಕಾನ್ (New Icon) ಅನ್ನು ಸರಳೀಕರಿಸಲಾಗಿದೆ, ಚಪ್ಪಟೆಗೊಳಿಸಲಾಗಿದೆ. ಬಣ್ಣಗಳು ಪ್ರಕಾಶಮಾನವಾಗಿರುತ್ತವೆ ಮತ್ತು ಪ್ರಮಾಣಗಳು ವಿಭಿನ್ನವಾಗಿವೆ, ಮಧ್ಯದಲ್ಲಿ ದೊಡ್ಡ ನೀಲಿ ಚೆಂಡನ್ನು ಗಮನಾರ್ಹವಾಗಿ ದೊಡ್ಡದಾಗಿಸಲಾಗಿದೆ.
ಹೊಸ Google Chrome ಲೋಗೋ ಶೀಘ್ರದಲ್ಲೇ Chrome 100 ಬಿಡುಗಡೆಯೊಂದಿಗೆ ಎಲ್ಲಾ ಸಾಧನಗಳಾದ್ಯಂತ ಬಳಕೆದಾರರಿಗೆ ಕಾಣಲಿದೆ.
ಇದನ್ನೂ ಓದಿ: ಚುನಾವಣಾ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ಗರಿಗೆದರಿದ ಜ್ಯೋತಿಷ್ಯ ಉದ್ಯಮ
ಹೂ ಪ್ರಕಾರ, ನೀವು ಕ್ರೋಮ್ ಕ್ಯಾನರಿ (ಕ್ರೋಮ್‌ನ ಡೆವಲಪರ್ ಆವೃತ್ತಿ) ಅನ್ನು ಬಳಸಿದರೆ ಈಗ ಹೊಸ ಐಕಾನ್ ಅನ್ನು ನೋಡಲು ಪ್ರಾರಂಭಿಸುತ್ತಿರಿ. ಆದರೆ ಮುಂದಿನ ಕೆಲವು ತಿಂಗಳುಗಳಲ್ಲಿ ಇದು ಎಲ್ಲರಿಗೂ ಕಾಣಲು ಪ್ರಾರಂಭಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.