Google Diwali Surprise: ಬೆಳಕಿನ ಹಬ್ಬ ದೀಪಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಕೇವಲ ಒಂದು ವಾರ ಬಾಕಿ ಇರುವಾಗಲೇ ಭಾರತದಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ಸರ್ಚ್ ಇಂಜಿನ್ ಗೂಗಲ್ ಕೂಡ ಸೇರಿಕೊಂಡಿದೆ. ಗೂಗಲ್ ದೇಶದ ಬಳಕೆದಾರರಿಗೆ 'ದೀಪಾವಳಿ ಸರ್ಪ್ರೈಸ್' ನೀಡಿದೆ. ಭಾರತದಲ್ಲಿನ ಬಳಕೆದಾರರು ತನ್ನ ಪುಟದಲ್ಲಿನ ಹುಡುಕಾಟ ಪಠ್ಯ ಪೆಟ್ಟಿಗೆಯಲ್ಲಿ 'ದೀಪಾವಳಿ' ಎಂದು ಹುಡುಕಬೇಕೆಂದು ಕಂಪನಿಯು ಬಯಸುತ್ತದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಗೂಗಲ್, 'ಸರ್ಪ್ರೈಸ್'ಗಾಗಿ ಗೂಗಲ್ ಸರ್ಚ್ ಬಾಕ್ಸ್‌ನಲ್ಲಿ ದೀಪಾವಳಿ ಎಂದು ಹುಡುಕಿ ಎಂದು ಬರೆದಿದೆ.  


COMMERCIAL BREAK
SCROLL TO CONTINUE READING

ಗೂಗಲ್ ಇಂಡಿಯಾದ ವೆಬ್‌ಸೈಟ್‌ನಲ್ಲಿನ ಹುಡುಕಾಟ ಬಾಕ್ಸ್‌ನಲ್ಲಿ 'ದೀಪಾವಳಿ' ಎಂದು ಸರ್ಚ್ ಮಾಡಿದಾಗ  ಹಬ್ಬದ ಕುರಿತು ಹಲವಾರು ಫಲಿತಾಂಶಗಳು ಲಭ್ಯವಾಗಲಿವೆ. ಈ ಫಲಿತಾಂಶಗಳ ಮೇಲ್ಭಾಗದಲ್ಲಿ ದೀಪದೊಂದಿಗೆ 'ದೀಪಾವಳಿ' ಎಂಬ ಪದ ಮತ್ತು ಕೆಳಗೆ 'ಹಬ್ಬ' ಎಂದು ಬರೆಯಲಾಗಿದೆ, ದೀಪವು ಹೊಳೆಯುವ ನಕ್ಷತ್ರಗಳಿಂದ ಆವೃತವಾಗಿರಲಿದೆ. ದೀಪದ ಮೇಲೆ ಕ್ಲಿಕ್ ಮಾಡಿದಾಗ, ಬಳಕೆದಾರರ ಪರದೆಯು ಪ್ರಕಾಶಮಾನವಾದ ಹೊಳೆಯುವ ದೀಪಗಳಿಂದ ತುಂಬಿರುತ್ತದೆ. ಈ ದೀಪಗಳ ಹಿಂದೆ ಹೊಳೆಯುವ ನಕ್ಷತ್ರಗಳಿವೆ. ಕರ್ಸರ್ ಅನ್ನು ಮೂವ್ ಮಾಡಿದಂತೆ ಒಂದು ದೀಪವು ಪರದೆಯ ಸುತ್ತಲೂ ಹೋಗುತ್ತದೆ. ಅದೇ ಸುಂದರವಾದ ಅನಿಮೇಷನ್ 'ದೀಪಾವಳಿ 2022' ಅನ್ನು ಹುಡುಕುವಾಗ ಸಹ ಕಾಣಿಸಿಕೊಳ್ಳುತ್ತದೆ.


ಇದನ್ನೂ ಓದಿ- PM Kisan: ಈ ಒಂದು ತಪ್ಪಿನಿಂದ 4 ಕೋಟಿ ರೈತರಿಗೆ ನಷ್ಟ!


Android ಮತ್ತು Apple ಸಾಧನಗಳಲ್ಲಿ ಗೂಗಲ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ 'ದೀಪಾವಳಿ' ಅಥವಾ 'ದೀಪಾವಳಿ 2022 ' ಕೀವರ್ಡ್‌ಗಳನ್ನು ಹುಡುಕುವಾಗ ಬಳಕೆದಾರರು ಒಂದೇ ರೀತಿಯ ಫಲಿತಾಂಶಗಳನ್ನು ಪಡೆಯುತ್ತಾರೆ . ಅಪ್ಲಿಕೇಶನ್‌ನಲ್ಲಿ (ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ) ಯಾವುದೇ ದೀಪದ ಮೇಲೆ ಕ್ಲಿಕ್ ಮಾಡಿದಾಗ, ಬಳಕೆದಾರರ ಮೊಬೈಲ್ ಪರದೆಯು ಪ್ರಕಾಶಮಾನವಾದ ಬೆಳಕಿನಿಂದ ತುಂಬಿರುತ್ತದೆ ಮತ್ತು ದೀಪವು ಬಳಕೆದಾರರ ಕೈ/ಬೆರಳಿನ ಚಲನೆಯನ್ನು ಅನುಸರಿಸುತ್ತದೆ. ಲ್ಯಾಪ್‌ಟಾಪ್ ಮತ್ತು ಡೆಸ್ಕ್ ಟಾಪ್ ನಲ್ಲಿಯೂ ದೀಪಾವಳಿ ಎಂದು ಗೂಗಲ್ ಸರ್ಚ್ ಮಾಡಿದರೆ ಅಲ್ಲಿಯೂ ಸಹ ಸ್ಕ್ರೀನ್ ನಲ್ಲಿ ಇದೇ ರೀತಿ ಪ್ರಕಾಶಮಾನವಾದ ದೀಪವನ್ನು ಕಾಣಬಹುದು. 


ಇದನ್ನೂ ಓದಿ- Instagram Reels:ಭಾರತೀಯ ಬಳಕೆದಾರರಿಗೆ ದೀಪಾವಳಿ ಗಿಫ್ಟ್, ರೀಲ್ಸ್ ಮಾಡಿ ಲಕ್ಷಾಂತರ ರೂ. ಸಂಪಾದಿಸಿ


ಗೂಗಲ್ ಬಳಸಿ ಪರದೆಯ ಮೇಲೆ ದಿಯಾಗಳನ್ನು ಬೆಳಗಿಸುವುದು ಹೇಗೆ?
ನಿಮ್ಮ ಬ್ರೌಸರ್ ವಿಂಡೋದಲ್ಲಿ Google ಹುಡುಕಾಟವನ್ನು ತೆರೆಯಿರಿ, Chrome ಬ್ರೌಸರ್ ಬಳಸುವವರು ವಿಳಾಸ ಪಟ್ಟಿಯನ್ನು ಸಹ ಬಳಸಬಹುದು.


ಹಂತ 1- 'Diwali' ಅಥವಾ 'Diwali 2022' ಕೀವರ್ಡ್‌ಗಳಿಗಾಗಿ ಹುಡುಕಿ.


ಹಂತ 2 - ಪರದೆಯ ಮೇಲೆ ಕಾಣಿಸಿಕೊಳ್ಳುವ ಫಲಿತಾಂಶದಲ್ಲಿ ಮೇಲೆ ದೀಪದ ಜೊತೆಗೆ ದೀಪಾವಳಿ ಎಂದು ಬರೆಯಲಾಗಿರುತ್ತದೆ. 


ಹಂತ 3 - ಈ ದಿಯಾ ಮೇಲೆ ಕ್ಲಿಕ್ ಮಾಡಿ.


ಹಂತ 4 - ಈಗ ಪರದೆಯ ಮೇಲೆ ಕರ್ಸರ್ ಅನ್ನು ಸರಿಸಿ, ಅದು ಹೊಳೆಯುವ ಬೆಳಕಿನಿಂದ ತುಂಬುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.