Google Pixel 7 Pro: ಗೂಗಲ್ ಹೊರತರುತ್ತಿದೆ ಇನ್ಸ್ಟಂಟ್ ಫುಲ್ ಚಾರ್ಚಿಂಗ್ ಸ್ಮಾರ್ಟ್‍ಫೋನ್..!
ಗೂಗಲ್ ತನ್ನ ಪ್ರಬಲ ವೈಶಿಷ್ಟ್ಯಗಳ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಲಿದೆ. ಇದರ ಹಲವಾರು ಮಾಹಿತಿಯನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಫೋನ್ನ ವಿನ್ಯಾಸವೂ ಹೆಚ್ಚು ಇಷ್ಟವಾಗುತ್ತಿದೆ. ಗೂಗಲ್ ಪಿಕ್ಸೆಲ್ 7 ಪ್ರೊ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಿರಿ.
ನವದೆಹಲಿ: ಟೆಕ್ ದೈತ್ಯ ಗೂಗಲ್ ಹೊಸ ಪಿಕ್ಸೆಲ್ 7 ಪ್ರೊವನ್ನು ಅಕ್ಟೋಬರ್ 4ರಂದು ಅನಾವರಣಗೊಳಿಸಲು ಸಿದ್ಧವಾಗಿದೆ. ಇದು ವೆನಿಲ್ಲಾ ಪಿಕ್ಸೆಲ್ 7 ಮತ್ತು ಇತರ Ecosystem ಉತ್ಪನ್ನಗಳನ್ನು ಒಳಗೊಂಡಿದೆ. ಗೂಗಲ್‍ನಿಂದ ಈ ಸ್ಮಾರ್ಟ್‍ಫೋನ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಉತ್ಪನ್ನದ ವೈಶಿಷ್ಟ್ಯಗಳ ಮಾಹಿತಿ ಸೋರಿಕೆಯಾಗಿದೆ.
ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಪಿಕ್ಸೆಲ್ 7 ಪ್ರೊನಲ್ಲಿ ದೊಡ್ಡಮಟ್ಟದ ಅಪ್‌ಗ್ರೇಡ್ ಇರುವುದಿಲ್ಲವೆಂದು ತಿಳಿದುಬಂದಿದೆ. ಇದು ಹೊಸ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಬಹುದು. ಈಗಾಗಲೇ ಹಲವಾರು ಟೆಕ್ ವೆಬ್‍ಸೈಟ್‍ಗಳಲ್ಲಿ ಇದರ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಹರಿದಾಡುತ್ತಿದೆ. ಈ ಫೋನ್‌ನಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: Apple iPhone 13: ಅತ್ಯಂತ ಕಡಿಮೆ ಬೆಲೆಗೆ ಆ್ಯಪಲ್ ಐಫೋನ್ 13 ಖರೀದಿಸಿ!
Google Pixel 7 Pro ವಿಶೇಷತೆ
ಶೀಘ್ರವೇ ಬಿಡುಗಡೆಯಾಗಲಿರುವ ಪಿಕ್ಸೆಲ್ 7 ಪ್ರೊ ವಿಶೇಷತೆಗಳ ಬಗ್ಗೆ ಹಲವಾರು ಯೂಟ್ಯೂಬರ್‍ಗಳು ಈಗಾಗಲೇ ಮಾಹಿತಿ ನೀಡಿದ್ದಾರೆ. ಪಿಕ್ಸೆಲ್ 6 ಪ್ರೊಗೆ ಹೋಲಿಸಿದರೆ ಹ್ಯಾಂಡ್‌ಸೆಟ್ ಹೆಚ್ಚು ಅಪ್‌ಗ್ರೇಡ್ ಆಗದಿರಬಹುದು ಅಂತಾ ಹೇಳಲಾಗುತ್ತಿದೆ. ಪ್ರೊ ಮಾದರಿಯು ಅದೇ 6.7-ಇಂಚಿನ ಬಾಗಿದ QHD LTPO-ಸಕ್ರಿಯಗೊಳಿಸಿದ OLED ಪ್ಯಾನೆಲ್‌ನೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ರೇಟ್ ನೀಡುತ್ತದೆ. ಹ್ಯಾಂಡ್‌ಸೆಟ್ ಮುಂದಿನ ಪೀಳಿಗೆಯ ಟೆನ್ಸರ್ 2 Soc ನಿಂದ ಚಾಲಿತವಾಗುತ್ತದೆ. ಇದು ಕೆಲವು ಗಂಭೀರ GPU, NPU ಮತ್ತು ಮೋಡೆಮ್ ಸುಧಾರಣೆಗಳನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.
Google Pixel 7 Pro ಸ್ಟೋರೇಜ್
ಈ ಸಾಧನವು 12GB + 128GB ಮತ್ತು 12GB + 256GB ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ. Google ಈ ವರ್ಷ 512GB ಸ್ಟೋರೇಜ್ ಮಾದರಿಯಲ್ಲಿ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡದಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಗ್ರಾಹಕರ ನಿರೀಕ್ಷೆಗೆ ಬಿತ್ತು ತೆರೆ, ಈ ದಿನದಿಂದ ಭಾರತದಲ್ಲಿ 5G ಸೇವೆ ಪ್ರಾರಂಭ
ಗೂಗಲ್ ಪಿಕ್ಸೆಲ್ 7 ಪ್ರೊ ಕ್ಯಾಮೆರಾ
Pixel 7 Pro ಅದೇ 50-ಮೆಗಾಪಿಕ್ಸೆಲ್ ಮುಖ್ಯ ಸೆನ್ಸಾರ್, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 48MP ಟೆಲಿಫೋಟೋ ಸೆನ್ಸಾರ್‍ನೊಂದಿಗೆ ಬರುತ್ತದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಆದರೆ ಟೆಲಿಫೋಟೋ ಕ್ಯಾಮರಾದಲ್ಲಿ ಹೊಸ Samsung GM1ನ ಸೆನ್ಸಾರ್ ಬಳಸಲಾಗಿದೆ ಅನ್ನೋ ವದಂತಿಗಳಿವೆ. ಮುಂಭಾಗದಲ್ಲಿ ಈ ಸಾಧನವು 11-ಮೆಗಾಪಿಕ್ಸೆಲ್ ಸ್ನ್ಯಾಪರ್ ಹೊಂದಿರಲಿದ್ದು, ಇದು ಈ ವರ್ಷ ಆಟೋಫೋಕಸ್ ಹೊಂದಿರಲಿದೆ ಅಂತಾ ಹೇಳಲಾಗಿದೆ.
Google Pixel 7 Pro ಬ್ಯಾಟರಿ
ಕೊನೆಯದಾಗಿ ಪಿಕ್ಸೆಲ್ ಫೋನ್ ಅದೇ 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 30W ಚಾರ್ಜಿಂಗ್ ಅನ್ನು ಮಾತ್ರ ಬೆಂಬಲಿಸುತ್ತದೆ, ಇದು ಕೆಲವು ಬಳಕೆದಾರರ ಮೇಲೆ ಪರಿಣಾಮ ಬೀರುವುದಿಲ್ಲ. ಇದಲ್ಲದೆ ಈ ಸಾಧನವು ವೈರ್‌ಲೆಸ್ ಚಾರ್ಜಿಂಗ್ ಸಹ ಬೆಂಬಲಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.