Google pay Phone pay scam : ಜನರು ತಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಬಳಸುವ ಗೂಗಲ್ ಪೇ ಮತ್ತು ಫೋನ್ ಪೇಯಂತಹ ಅಪ್ಲಿಕೇಶನ್‌ಗಳ ಮೂಲಕ ಹೊಸ ರೀತಿಯ ವಂಚನೆಗೆ ಒಳಗಾಗುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ಕ್ರೈಂ ಪೊಲೀಸರು ಎಚ್ಚರಿಸಿದ್ದಾರೆ. Google Pay ನಲ್ಲಿ ಹೊಸ ರೀತಿಯ ವಂಚನೆ ನಡೆಯುತ್ತಿದೆ ಅಂತ ಸೈಬರ್ ಕ್ರೈಮ್ ಪೊಲೀಸರು ಏನು ಎಚ್ಚರಿಸುತ್ತಿದ್ದಾರೆ.. ಅದರಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ..


COMMERCIAL BREAK
SCROLL TO CONTINUE READING

Google Pay ವಂಚನೆಗೆ ಸಂಬಂಧಿಸಿದಂತೆ, ಸೈಬರ್ ಕ್ರೈಮ್ ಪೊಲೀಸರು ಹೇಳುವ ಪ್ರಕಾರ, ಮೊದಲು ನಿಮಗೆ  ಮಾಹಿತಿ ಇಲ್ಲದೆ ಯಾರಾದರೂ Google Pay ಮತ್ತು Phone Pay ನಂತಹ UPI ಅಪ್ಲಿಕೇಶನ್‌ಗಳ ಮೂಲಕ ಉದ್ದೇಶಪೂರ್ವಕವಾಗಿ ನಿಮಗೆ ಹಣವನ್ನು ಕಳುಹಿಸುತ್ತಾರೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದ ನಂತರ, ನಿಮ್ಮನ್ನು ಸಂಪರ್ಕಿಸಿ ಆಕಸ್ಮಿಕವಾಗಿ ನಿಮಗೆ ಹಣವನ್ನು ಕಳುಹಿಸಲಾಗಿದೆ.. ಅದನ್ನು ಬೇರೆಯವರಿಗೆ ಕಳುಹಿಸುವ ಬದಲು ಆತುರದಲ್ಲಿ ನಿಮಗೆ ಕಳುಹಿಸಿದ್ದೇನೆ.. ಎಂದು ನಿಮಗೆ ಹೇಳುತ್ತಾರೆ.. ಅಲ್ಲದೆ ಹಣ ಕಳುಹಿಸಿರುವ ಸಂಖ್ಯೆಗೆ ಮತ್ತೆ ಕಳುಹಿಸುವಂತೆ ಮನವಿ ಮಾಡುತ್ತಾರೆ.. ನೀವು ಪಾಪ ಅಂತ ಹಣ ಕಳುಹಿಸಿದರೆ ಅವರು ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ.. ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ಲೂಟಿ ಮಾಡುತ್ತಾರೆ...


ಇದನ್ನೂ ಓದಿ:18+ ವಯಸ್ಕರಿಗೆ ಮಾತ್ರ : ವಿರಾಟ್ ಕೊಹ್ಲಿ ಸೊಸೆಯ ಹಸಿಬಿಸಿ ವಿಡಿಯೋಗಳು ಲೀಕ್‌..! ದೃಶ್ಯಗಳನ್ನು ನೋಡಿ ಫ್ಯಾನ್ಸ್‌ ಶಾಕ್‌


ವಂಚನೆಯಿಂದ ಸುರಕ್ಷಿತವಾಗಿರಲು ಮಾಡಬೇಕಾದ ಕೆಲಸಗಳು


ನಿಮಗೆ ಪರಿಚಯವಿಲ್ಲದ ಯಾರಾದರೂ Google Pay ಸೇರಿದಂತೆ UPI ಅಪ್ಲಿಕೇಶನ್‌ಗಳಲ್ಲಿ ಹಣವನ್ನು ಕಳುಹಿಸಿದರೆ ಮತ್ತು ಅದನ್ನು ಮರಳಿ ಕಳುಹಿಸುವಂತೆ ಕೇಳಿದರೆ, ತಕ್ಷಣವೇ ಹಣವನ್ನು ಕಳುಹಿಸಬೇಡಿ.


ಹಣವನ್ನು ಕಳುಹಿಸಿದ ವ್ಯಕ್ತಿಯನ್ನು ಸಂಪರ್ಕಿಸಿ ಮತ್ತು ಅವರ ಗುರುತಿನ ಪುರಾವೆಗಳೊಂದಿಗೆ ಹತ್ತಿರದ ಪೊಲೀಸ್ ಠಾಣೆಗೆ ಬಂದು ನಗದು ಪಡೆದುಕೊಳ್ಳಲು ಹೇಳಿ.


ಯಾರಾದರೂ Google Pay ನಲ್ಲಿ ನಿಮಗೆ ಹಣವನ್ನು ಕಳುಹಿಸಿದರೆ ಮತ್ತು ಅದನ್ನು ಮರಳಿ ಕಳುಹಿಸಲು ಮೆಸೇಜ್‌ನಲ್ಲಿ ಲಿಂಕ್ ಕಳುಹಿಸಿದರೆ, ಅದರ ಮೇಲೆ ಕ್ಲಿಕ್ ಮಾಡಬೇಡಿ. ಇದು ನಿಮ್ಮ ಬ್ಯಾಂಕ್ 
ಖಾತೆಯನ್ನು ಹ್ಯಾಕ್ ಮಾಡುವ ಕೊಂಡಿಯಾಗಿರುತ್ತದೆ.. 


ಆದ್ದರಿಂದ ನೀವು ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ವಂಚಕರು ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುವ ಸಾಧ್ಯತೆಗಳು ತುಂಬಾ ಹೆಚ್ಚು. SMS ಮೂಲಕ ನಿಮಗೆ ಕಳುಹಿಸಲಾದ ಲಿಂಕ್‌ಗಳು ಸಂಪೂರ್ಣವಾಗಿ ನಕಲಿ ಮತ್ತು ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಡಿ.


ನಿಮ್ಮ ಮೊಬೈಲ್ ಕಳೆದು ಹೋದರೆ, ಮೊಬೈಲ್ ಫೋನ್‌ನಲ್ಲಿರುವ ಯುಪಿಐ ಆ್ಯಪ್ ಮೂಲಕ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕದಿಯುವ ಸಾಧ್ಯತೆಯಿದೆ. ಹಾಗಾಗಿ ಮೊಬೈಲ್ ಫೋನ್ ಕಳೆದು ಹೋದರೆ ತಕ್ಷಣವೇ ಯುಪಿಐ ಐಡಿಯನ್ನು ಬ್ಲಾಕ್ ಮಾಡಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.