Google Pay users can soon make payment using NFC: ಗೂಗಲ್ ಪೇ (Google Pay) ತನ್ನ ಅಪ್ಲಿಕೇಶನ್‌ನಲ್ಲಿ ಪಾವತಿ ವಿಧಾನಗಳನ್ನು ಹೆಚ್ಚಿಸುತ್ತಿದೆ. ಇದು UPI(Unified Payment Interface) ನೊಂದಿಗೆ ಆರಂಭವಾಗಿತ್ತು. ಇದರ ನಂತರ ಬಳಕೆದಾರರಿಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಅಪ್ಲಿಕೇಶನ್‌ಗೆ ಸೇರಿಸಲು ಅಪ್ಲಿಕೇಶನ್ ಅನುಮತಿಸಿದೆ. ಈಗ ಕಂಪನಿಯು (Google) ಶೀಘ್ರದಲ್ಲೇ ತನ್ನ ಪಾವತಿ ಅಪ್ಲಿಕೇಶನ್‌ನಲ್ಲಿ NFC ಬಳಸಿ ಪಾವತಿಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

NFC ಸಂಪರ್ಕ ರಹಿತ ಪೇಮೆಂಟ್ ಮಾಡುವ ಅನುಮತಿ ನೀಡುತ್ತದೆ. ಇದರಲ್ಲಿ ಬಳಕೆದಾರರಿಗೆ ತಮ್ಮ ಕಾರ್ಡ್ ಸ್ವೈಪ್ ಮಾಡುವ ಅವಶ್ಯಕತೆ ಬೀಳುವುದಿಲ್ಲ. ಬಳಕೆದಾರರು ಕೇವಲ ತಮ್ಮ NFC ಕ್ಷಮತೆ ಹೊಂದಿರುವ ಡಿವೈಸ್ ಅನ್ನು POS ಯಂತ್ರದ ಬಳಿ ಇಟ್ಟು ವ್ಯವಹಾರವನ್ನು ಅಧಿಕೃತಗೊಳಿಸುವ ಅವಶ್ಯಕತೆ ಇದೆ.


Android Police ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಗೂಗಲ್ ಪೆ ಶೀಘ್ರದಲ್ಲಿಯೇ ಒಂದು NFC ಸೇವೆ ಆರಂಭಿಸುವ ಸಾಧ್ಯತೆ ಇದ್ದು, ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಸಪೋರ್ಟ್ ಪೇಜ್ ಗೆ ತಿಳಿಸಿದೆ.


ಸಪೋರ್ಟ್ ಪೇಜ್ ಪ್ರಕಾರ, ಬಳಕೆದಾರರು ಪೇಮೆಂಟ್ ಯಂತ್ರದ ಮೇಲೆ ತಮ್ಮ ಫೋನ್ ಟ್ಯಾಪ್ ಮಾಡಿದಾಗ, ಗೂಗಲ್ ಪೆ (Google Pay) ಆಪ್ ಸ್ವಯಂಚಾಲಿತವಾಗಿ ತೆರೆದುಕೊಳ್ಳಲಿದೆ ಮತ್ತು ಬಳಕೆದಾರರು ತಮ್ಮ ಹಣ ಪಾವತಿಗಾಗಿ 'Proceed' ಆಯ್ಕೆಯ ಮೇಲೆ ಕ್ಲಿಕ್ಕಿಸಬೇಕಾಗಲಿದೆ. ಪ್ರಸ್ತುತ ಕೇವಲ ಪಾಯಿನ್ ಲೈನ್ ಟರ್ಮಿನಲ್ ಗಳು ಮಾತ್ರ NFC ಆಪ್ಶನ್ ಸಪೋರ್ಟ್ ಮಾಡುತ್ತವೆ.


ಇದನ್ನೂ ಓದಿ- WhatsApp New Feature:ಶೀಘ್ರದಲ್ಲಿಯೇ WhatsApp ಪರಿಚಯಿಸುತ್ತಿದೆ ಈ ಹೊಸ ವೈಶಿಷ್ಟ್ಯ, ಬಳಕೆದಾರರಿಗೇನು ಲಾಭ?


ಎನ್‌ಎಫ್‌ಸಿ-ಶಕ್ತಗೊಂಡ ವಹಿವಾಟುಗಳು ಹೆಚ್ಚು ಅರ್ಥಗರ್ಭಿತ ಮತ್ತು ಅನುಕೂಲಕರವಾಗಿವೆ. ಇಂಟರ್ನೆಟ್ ಸಂಪರ್ಕವನ್ನು ಬಳಸದೆ ವಹಿವಾಟುಗಳನ್ನು ಅನುಮತಿಸುವುದರಿಂದ ಅನೇಕ ಫಿನ್‌ಟೆಕ್ ಕಂಪನಿಗಳು ಎನ್‌ಎಫ್‌ಸಿ ಪಾವತಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.


ಇದನ್ನೂ ಓದಿ- Made in India App: ವಾಟ್ಸಾಪ್, ಟ್ವಿಟರ್‌ಗೆ ಟಕ್ಕರ್ ನೀಡುತ್ತಿರುವ ಟಾಪ್ 5 ಮೇಡ್ ಇನ್ ಇಂಡಿಯಾ ಆ್ಯಪ್‌ಗಳಿವು


ಇದೆ ವರ್ಷದ ಮಾರ್ಚ್ ತಿಂಗಳಿನಲ್ಲಿ ಆಕ್ಸಿಸ್ ಬ್ಯಾಂಕ್ ಕೂಡ ಹಲವು ಡಿವೈಸ್ ಗಳನ್ನೂ ಬಿಡುಗಡೆಗೊಳಿಸಿದ್ದು, ಅವು ತಮ್ಮ ಗ್ರಾಹಕರಿಗೆ NFC ಬಳಸಿ ಸಂಪರ್ಕ ರಹಿತ ಹಣ ಪಾವತಿಗೆ ಅನುಮತಿ ನೀಡುತ್ತವೆ. ಈ ಸಾಧನಗಳಲ್ಲಿ WristBand, Keychains ಹಾಗೂ Loop ಹೆಸರಿನ ಚಿಕ್ಕದಾದ ಡಿವೈಸ್ ಶಾಮೀಲಾಗಿವೆ. ಇವುಗಳನ್ನು ಬಳಕೆದಾರರು ತಮ್ಮ ವಾಚ್ ಬೆಲ್ಟ್ ಮೇಲೆ ಅಳವಡಿಸಬಹುದು ಮತ್ತು ಈ ಎಲ್ಲಾ ಡಿವೈಸ್ ಗಳು ಗ್ರಾಹಕರ ಬ್ಯಾಂಕ್ ಖಾತೆಯ ಜೊತೆಗೆ ಸಂಪರ್ಕ ಹೊಂದಿವೆ.


ಇದನ್ನೂ ಓದಿ- WhatsAppನಿಂದ ಹೊಸ ವೈಶಿಷ್ಟ್ಯ ಪರಿಚಯ, ಬಳಕೆದಾರರಿಗೇನು ಲಾಭ?


ಪ್ರಸ್ತುತ ಯಾವುದೇ ಓರ್ವ ಬಳಕೆದಾರ ತಮ್ಮ ಪಿನ್ ಸಂಖ್ಯೆಯನ್ನು ನಮೂದಿಸದೆಯೇ ರೂ.5000 ವರೆಗಿನ NFC ವಹಿವಾಟು ನಡೆಸಬಹುದಾಗಿದೆ. ಈ ಮಿತಿ ದಾಟಿದ ಬಳಿಕ ಗ್ರಾಹಕರು ತಮ್ಮ ಪಿನ್ ಸಂಖ್ಯೆ ಬಳಕೆ ಮಾಡಿ ಪೇಮೆಂಟ್ ಅನ್ನು ಪ್ರಮಾಣೀಕರಿಸುವ ಅವಶ್ಯಕತೆ ಇದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.