ನವದೆಹಲಿ: Google WifiNanScan App - ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ ಗೂಗಲ್ ಹೊಸ ಆಪ್ ವೊಂದನ್ನು ಬಿಡುಗಡೆ ಮಾಡಿದೆ. ಗೂಗಲ್ ನ ಈ ನೂತನ ಅಪ್ಪ್ಲಿಕೆಶನ್ ಹೆಸರು WifiNanScan. ಈ ಆಪ್ ನ ವಿಶೇಷತೆ ಎಂದರೆ, ಇಂಟರ್ನೆಟ್ ಹಾಗೂ ಬ್ಲೂ ಟೂಥ್ ಸಂಪರ್ಕ ಇಲ್ಲದೆಯೂ ಕೂಡ ಡಿವೈಸಸ್ ಗಳನ್ನು ಪರಸ್ಪರ ಕನೆಕ್ಟ್ ಮಾಡಬಹುದು. ಅಂದರೆ, ನಿಮ್ಮ ಫೋನ್ ನಲ್ಲಿ ನೆಟ್ವರ್ಕ್ ಇಲ್ಲದೆ ಇದ್ದರೂ ಕೂಡ ವೈಫೈ ಸಂಬಂಧಿತ ಎಲ್ಲ ಕಾರ್ಯಗಳನ್ನು ನೀವು ಈ ಆಪ್ ಸಹಾಯದಿಂದ ಮಾಡಬಹುದು.  Wifi Aware ಅಪ್ಲಿಕೇಶನ್‌ನ ಸಹಾಯದಿಂದ, ಇಂಟರ್ನೆಟ್ ಸಂಪರ್ಕವಿಲ್ಲದೆ ಯಾವುದೇ ರೆಸ್ಟೋರೆಂಟ್‌ನಲ್ಲಿ ಸೀಟ್ ಬುಕಿಂಗ್ ಮತ್ತು ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸಲು ನಿಮಗೆ ಸಾಧ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ನೀವು Google Play Store ನಿಂದ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಪ್ರಸ್ತುತ, ಈ ಅಪ್ಲಿಕೇಶನ್ ಅನ್ನು ಡೆವಲಪರ್‌ಗಳಿಗಾಗಿ ತಯಾರಿಸಲಾಗಿದ್ದು, ಇದರಿಂದ ಅವರು ವೈಫೈ ಅವೇರ್‌ನೊಂದಿಗೆ ಪ್ರಯೋಗಗಳನ್ನು ಮಾಡಬಹುದು.


COMMERCIAL BREAK
SCROLL TO CONTINUE READING

ಏನಿದು  Wifi Aware ?
 Wifi Aware ಒಂದು Neighbour Awareness Networkig ತಂತ್ರಜ್ಞಾನವಾಗಿದೆ. ಇದು ಯಾವುದೇ ಬಾಹ್ಯ ಸಾಧನದ ಸಹಾಯವಿಲ್ಲದೆ ಒಂದು ಸ್ಮಾರ್ಟ್‌ಫೋನ್ ಅನ್ನು ಇನ್ನೊಂದಕ್ಕೆ ಸಂಪರ್ಕಿಸಲು ಇದು ಸಹಾಯ ಮಾಡುತ್ತದೆ. ಈ ಪ್ರೋಟೋಕಾಲ್ ಆಂಡ್ರಾಯ್ಡ್ 8.0 ಮತ್ತು ಅದಕ್ಕಿಂತ ಹೆಚ್ಚಿನ ಓಎಸ್ ಆವೃತ್ತಿಯಲ್ಲಿರುವ ಎಲ್ಲಾ ಸಾಧನಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅವುಗಳ ನಡುವೆ ಯಾವುದೇ ರೀತಿಯ ಸಂಪರ್ಕವಿಲ್ಲದೆ ಪರಸ್ಪರ ನೇರವಾಗಿ ಕಂಡುಹಿಡಿಯುವ ಮತ್ತು ಸಂಪರ್ಕಿಸುವ ಸೌಲಭ್ಯವನ್ನು ಒದಗಿಸುತ್ತದೆ. 


9to5Google ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಆಂಡ್ರಾಯ್ಡ್ 8 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯನ್ನು ಬೆಂಬಲಿಸುವ ಆಯ್ದ ಸ್ಮಾರ್ಟ್‌ಫೋನ್‌ ಗಳು ಮಾತ್ರ WifiNanScan ಅಪ್ಲಿಕೇಶನ್  ಬಳಸಬಹುದಾಗಿದೆ. 


ಇದನ್ನೂ ಓದಿ-Google's Year In Search: ವಾರ್ಷಿಕ Search Report ಜಾರಿಗೊಳಿಸಿದ Google, WHF Jobs ಹಾಗೂ e-Coursesಗಳ ಅತಿ ಹೆಚ್ಚು ಹುಡುಕಾಟ


ಈ ಅಪ್ಪ್ಲಿಕೆಶನ್ ಲಾಭಗಳೇನು?
- ಈ ಅಪ್ಲಿಕೇಶನ್ ಬಳಸುವ ನೆಟ್‌ವರ್ಕ್ ಸಹಾಯದಿಂದ, ನೀವು ಡಾಕ್ಯುಮೆಂಟ್‌ಗಳನ್ನು ಸುರಕ್ಷಿತವಾಗಿ ಪ್ರಿಂಟರ್‌ಗೆ ಕಳುಹಿಸಬಹುದು. ಯಾವುದೇ ನೆಟ್‌ವರ್ಕ್ ಲಾಗಿನ್ ಇಲ್ಲದೆ ಇದೆಲ್ಲವೂ ಸಂಭವಿಸಲಿದೆ.


- ಇಂಟರ್ನೆಟ್ ಸಂಪರ್ಕವಿಲ್ಲದೆ ನೀವು ಯಾವುದೇ ರೆಸ್ಟೋರೆಂಟ್‌ನಲ್ಲಿ ಸೀಟ್ ಕಾಯ್ದಿರಿಸಬಹುದು. ಇಂಟರ್ನೆಟ್ ಸಂಪರ್ಕದಿಂದ ಇದೆಲ್ಲವನ್ನೂ ಮಾಡಬಹುದು. ರೆಸ್ಟೋರೆಂಟ್ ಬಂದ್ ಇರುವಾಗಲೂ ಕೂಡ ಇದು ಸಾಧ್ಯವಾಗಲಿದೆ.


- ಶಾಲೆಯಲ್ಲಿ ಸ್ವಯಂಚಾಲಿತವಾಗಿ ಚೆಕ್ ಇನ್ ಹಾಗೂ ರೋಲ್ ಕಾಲ್ ಮಾಡಬಹುದು.


ಇದನ್ನೂ ಓದಿ-Gmail App New Feature: ಇನ್ಮುಂದೆ Gmailನಲ್ಲಿ e-Mail Address ಅನ್ನು Copy ಅಥವಾ Remove ಮಾಡುವುದು ಇನ್ನಷ್ಟು ಸುಲಭವಾಗಿದೆ


- ಏರ್ಪೋರ್ಟ್ ಸಿಕ್ಯೋರಿಟಿ, ಕಸ್ಟಮ್, ಡಿಮಿಗ್ರೆಶನ್ ನಲ್ಲಿ ನೀವು ಯಾವುದೇ ರೀತಿಯ ಐಡಿ ಇಲ್ಲದೆ ಚೆಕ್ ಇನ್ ಮಾಡಬಹುದು.


-Wifi Aware ಆಪ್ ಸಹಾಯದಿಂದ ನೀವು ಯಾವುದೇ ಇಂಟರ್ನೆಟ್ ಕನೆಕ್ಷನ್ ಇಲ್ಲದೆ ರೆಸ್ಟೋರೆಂಟ್ ಸೀಟ್, ಸಿನಿಮಾ ಟಿಕೆಟ್ ಬುಕ್ ಮಾಡಬಹುದು.


- ಈ ಆಪ್ ಒಂದು ಮೀಟರ್ ನಿಂದ 15 ಮೀಟರ್ ಅಂತರದವರೆಗೆ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ-YouTube: ಭಾರತದ ಯೂಟ್ಯೂಬರ್​​ಗಳಿಗೆ 'ಬಿಗ್ ಶಾಕ್' ನೀಡಿದ ಗೂಗಲ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.