Google Play Store Removes Popular Indian Apps: ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಭಾರತದ ಅನೇಕ ಜನಪ್ರೇಯ ಆಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ. ಈ ಆಪ್‌ಗಳು ಗೂಗಲ್‌ಗೆ ಸೇವಾ ಶುಲ್ಕವನ್ನು ಪಾವತಿಸಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಈ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಎಂಬ ಮಾಹಿತಿ ಇದೆ. ಇಲ್ಲಿ ಕೆಲವು ಭಾರತೀಯ ಸ್ಟಾರ್ಟ್‌ಅಪ್‌ಗಳು ಗೂಗಲ್‌ನ ಶುಲ್ಕ ರಚನೆಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಸುಪ್ರೀಂ ಕೋರ್ಟ್ ಕೂಡ ಈ ವಿಚಾರವಾಗಿ ತೀರ್ಪು ನೀಡಿತ್ತು. ವಿಷಯ ಏನು ತಿಳಿದುಕೊಳ್ಳೋಣ ಬನ್ನಿ, (Technology News In Kannada)


COMMERCIAL BREAK
SCROLL TO CONTINUE READING

ಆಂಗ್ಲ ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಗೂಗಲ್ 99 ಎಕರ್ಸ್, ಆಲ್ಟ್ ಬಾಲಾಜಿ(ALTBalaji), ಭಾರತ್ ಮ್ಯಾಟ್ರಿಮೋನಿ (Bharat Matrimony), ಕುಕು ಎಫ್‌ಎಂ, ನೌಕ್ರಿ ಡಾಟ್ ಕಾಮ್ (Noukri.Com),  ಶಾದಿ ಡಾಟ್ ಕಾಮ್, ಸ್ಟೇಜ್, ಟ್ರೂಲಿ ಮ್ಯಾಡ್ಲಿ, ಸ್ಟೇಜ್ ಒಟಿಟಿ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ತೆಗೆದುಹಾಕಿದೆ. ಗೂಗಲ್ ನ ಬಿಲ್ಲಿಂಗ್ ನೀತಿಯ ವಿರುದ್ಧ ಹಲವು ಸ್ಟಾರ್ಟಪ್ ಕಂಪನಿಗಳು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದವು. ಫೆಬ್ರವರಿ 9 ರಂದು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಈ ಕುರಿತು ವಿಚಾರಣೆ ನಡೆಸಿತ್ತು. ಕಂಪನಿಗಳ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕದಂತೆ ರಕ್ಷಿಸುವ ಅರ್ಜಿಗೆ ಮಧ್ಯಂತರ ಆದೇಶವನ್ನು ನೀಡಲು ಪೀಠವು ನಿರಾಕರಿಸಿದೆ.


ಗೂಗಲ್ ಏಕೆ ಕ್ರಮ ಕೈಗೊಂಡಿತು?
ಗೂಗಲ್ ತನ್ನ ಪ್ಲೇ ಸ್ಟೋರ್ ಬಳಸುವ ನೀತಿಯಲ್ಲಿ ಬದಲಾವಣೆಗಳನ್ನು ಮಾಡಿದೆ. ಇದರಿಂದಾಗಿ ಗೂಗಲ್ ಸೇವಾ ಶುಲ್ಕವನ್ನು ಶೇ.11ರಿಂದ ಶೇ.26ಕ್ಕೆ ಹೆಚ್ಚಿಸಿದೆ. ಬಳಿಕ ಸೇವಾ ಶುಲ್ಕವನ್ನು ಪಾವತಿಸದ ಕಂಪನಿಗಳ ವಿರುದ್ಧ ಕ್ರಮದ ಭಾಗವಾಗಿ ಅವುಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲು ಗೂಗಲ್ ನಿರ್ಧರಿಸಿದೆ. ಈ ಹಿಂದೆ, ದೇಶದ ಆಂಟಿಟ್ರಸ್ಟ್ ಪ್ರಾಧಿಕಾರವು ಹಳೆಯ ವ್ಯವಸ್ಥೆಯನ್ನು ಮುಕ್ತಾಯಗೊಳಿಸುವಂತೆ ಆದೇಶಿಸಿತ್ತು.


ಇದನ್ನೂ ಓದಿ-Google Maps ನಲ್ಲೂ ಬಂತು ಈ ವೈಶಿಷ್ಟ್ಯ, ಸ್ಕ್ರೀನ್ ಲಾಕ್ ಆದರೂ ರಸ್ತೆ ಕಾಣಿಸಲಿದೆ!


ಕ್ರಮದ ಬಗ್ಗೆ ಗೂಗಲ್ ಸ್ಪಷ್ಟೀಕರಣ ಏನು? 
ವರದಿಯೊಂದರೆ ಪ್ರಕಾರ, ಈ ವಿಷಯಕ್ಕೆ ಸಂಬಂಧಿಸಿದಂತೆ, ಅನೇಕ ಪ್ರಸಿದ್ಧ ಸಂಸ್ಥೆಗಳು ಮತ್ತು ಕಂಪನಿಗಳು ತನ್ನ ಬಿಲ್ಲಿಂಗ್ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಗೂಗಲ್ ಹೇಳಿದೆ. ಕೆಲವು ಕಂಪನಿಗಳು ಮಾರಾಟಕ್ಕೆ ಅನ್ವಯವಾಗುವ ಸೇವಾ ಶುಲ್ಕವನ್ನು ಪಾವತಿಸುತ್ತಿಲ್ಲ ಎಂದು ಗೂಗಲ್ ಹೇಳಿದೆ. ಪ್ಲೇ ಸ್ಟೋರ್‌ನಿಂದ ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಗೂಗಲ್ ಹಿಂಜರಿಯುವುದಿಲ್ಲ ಎಂದು ಈ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದಂತೆ ಗೂಗಲ್ ಈಗಾಗಲೇ ಹೇಳಿದೆ.


ಇದನ್ನೂ ಓದಿ-Windows 11 ಇನ್ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿದೆ, ಮೈಕ್ರೋಸಾಫ್ಟ್ ನಿಂದ ಹೊಸ ಅಪ್ಡೇಟ್ ಬಿಡುಗಡೆ!


ಕಂಪನಿಗಳು ಹೇಳಿದ್ದೇನು?
ಭಾರತ್ ಮ್ಯಾಟ್ರಿಮೋನಿಯ ಮೂಲ ಕಂಪನಿಯು ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ತೆಗೆದುಹಾಕಲಾದ ಸುದ್ದಿಯನ್ನು ಖಚಿತಪಡಿಸಿದೆ. ಮ್ಯಾಟ್ರಿಮೊನಿ ಡಾಟ್ ಕಾಮ್ (Matrimony .Com) ಸಂಸ್ಥಾಪಕ ಮುರುಗವೇಲ್ ಜಾನಕಿರಾಮನ್ ಗೂಗಲ್ ನ ನಡೆಯನ್ನು ಭಾರತೀಯ ಇಂಟರ್ನೆಟ್ ಗೆ ಕರಾಳ ದಿನ ಎಂದು ಹೇಳಿದ್ದಾರೆ. ಅವರ ಆ್ಯಪ್‌ಗಳನ್ನು ಒಂದೊಂದಾಗಿ ಡಿಲಿಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. (google removes popular indian apps from its play store )


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ