ಗೂಗಲ್ ತರುತ್ತಿದೆ ಹೊಸ ಮೆಸೇಜಿಂಗ್ ಆಪ್ ! ಹೊಸ ಹೊಸ ಫೀಚರ್ ನೊಂದಿಗೆ WhatsAppಗೆ ಭಾರೀ ಟಕ್ಕರ್ !
ಗೂಗಲ್ ಇತ್ತೀಚೆಗೆ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಇವುಗಳಲ್ಲಿ ಮೆಸೇಜ್ ಮ್ಯಾನೇಜ್ಮೆಂಟ್, ವೀಡಿಯೊ ಕರೆಗಳು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುವ ಸೌಲಭ್ಯವಿದೆ.
ಬೆಂಗಳೂರು : ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಾದ WhatsApp ಮತ್ತು Signalಗೆ ಟಕ್ಕರ್ ನೀಡುವ ಹೊಸ ಸಂದೇಶ ಅಪ್ಲಿಕೇಶನ್ ಅನ್ನು Google ಹೊರತರುತ್ತಿದೆ. ಈ ಅಪ್ಲಿಕೇಶನ್ RCS ಅನ್ನು ಬೆಂಬಲಿಸುತ್ತದೆ. ಇದರಿಂದಾಗಿ ಇದು ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಗೂಗಲ್ ಇತ್ತೀಚೆಗೆ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಇವುಗಳಲ್ಲಿ ಮೆಸೇಜ್ ಮ್ಯಾನೇಜ್ಮೆಂಟ್, ವೀಡಿಯೊ ಕರೆಗಳು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುವ ಸೌಲಭ್ಯವಿದೆ. ಈ ವೈಶಿಷ್ಟ್ಯಗಳು WhatsApp ಮತ್ತು Signalನಲ್ಲಿ ಇಲ್ಲಿಯವರೆಗೆ ಲಭ್ಯವಿಲ್ಲ.
ವಾಯ್ಸ್ ನೋಟ್ ಫೀಚರ್ಸ್ :
ಗೂಗಲ್ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇದನ್ನು ವಾಯ್ಸ್ ನೋಟ್ ಎಂದು ಕರೆಯಲಾಗುತ್ತದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಸಣ್ಣ ಸಂದೇಶಗಳನ್ನು ರೆಕಾರ್ಡ್ ಮಾಡಲು ಮತ್ತು ಅವುಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ಸಂದೇಶಗಳನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ರೆಕಾರ್ಡ್ ಮಾಡಬಹುದು. ಇಲ್ಲಿ ಮೆಸೇಜ್ ಟೈಪ್ ಮಾಡುವ ಬದಲು ವಾಯ್ಸ್ ರೆಕಾರ್ಡ್ ಮಾಡಿದರೆ ಸಾಕಾಗುತ್ತದೆ.
ಇದನ್ನೂ ಓದಿ : ಹೆಲಿಪ್ಯಾಡ್, ಗೋಲ್ಡನ್ ಬಾತ್ ರೂಂ, ಐಷಾರಾಮಿ ರೂಮ್ಸ್ ಒಳಗೊಂಡ ಈ ಐಷಾರಾಮಿ ಸೂಪರ್‌ಯಾಚ್ ಎಂತಹವರನ್ನೂ ಬೆರಗುಗೊಳಿಸುತ್ತೆ!
ವರದಿಯ ಪ್ರಕಾರ, ವಾಯ್ಸ್ ನೋಟ್ ನಲ್ಲಿ ನಾಯ್ಸ್ ಕ್ಯಾನ್ಸಲ್ ಮಾಡುವ ವೈಶಿಷ್ಟ್ಯವನ್ನು ಸೇರಿಸುವ ಬಗ್ಗೆಯೂ ಗೂಗಲ್ ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯವು ರೆಕಾರ್ಡ್ ಮಾಡಿದ ಸಂದೇಶದಿಂದ ಹಿನ್ನೆಲೆಯಲ್ಲಿ ಕೇಳಿ ಬರುವ ಶಬ್ದ ಅಂದರೆ ಬ್ಯಾಕ್ ಗ್ರೌಂಡ್ ನಾಯ್ಸ್ ಅನ್ನು ತೆಗೆದು ಹಾಕುತ್ತದೆ. ಈ ಮೂಲಕ ಬಳಕೆದಾರರು ಸ್ಪಷ್ಟ ಧ್ವನಿಯನ್ನು ಕೇಳುವುದು ಸಾಧ್ಯವಾಗುತ್ತದೆ.
ನಾಯ್ಸ್ ಕ್ಯಾನ್ಸಲೇಶನ್ ಫೀಚರ್ (Noice Cancellation Feature) :
Google Message ಅಪ್ಲಿಕೇಶನ್‌ನ ಬೀಟಾ ಆವೃತ್ತಿಗೆ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಅನ್ನು ಸೇರಿಸಲಾಗುತ್ತಿದೆ. ರೆಕಾರ್ಡ್ ಮಾಡಿದ ಆಡಿಯೊದಿಂದ ಹಿನ್ನೆಲೆ ಶಬ್ದವನ್ನು ತೆಗೆದುಹಾಕಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು ಡೆಡಿಕೆಟೆಡ್ ಬಟನ್ ರೂಪದಲ್ಲಿ ಕೆಲಸ ಮಾಡುತ್ತದೆ. ಈ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ, ಆಡಿಯೊ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ ಮತ್ತು ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಕೂಡಾ ಆಕ್ಟಿವ್ ಆಗುತ್ತದೆ. ಪ್ರಸ್ತುತ, ಈ ವೈಶಿಷ್ಟ್ಯವು ಟೆಸ್ಟಿಂಗ್ ಹಂತದಲ್ಲಿದೆ. ಆದರೆ ಶೀಘ್ರದಲ್ಲೇ ಇದು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ :ವಾಟ್ಸ್ ಆಪ್ ನಲ್ಲಿ ಸ್ಟೇಟಸ್ ಬಳಸುವವರಿಗೊಂದು ಮಹತ್ವದ ಮಾಹಿತಿ, ಈ ಹೊಸ ಅಪ್ಡೇಟ್ ನಿಮಗೆ ತಿಳಿದಿರಲಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ