Google Update: ಹಿಂದಿ ಭಾಷೆಯಲ್ಲಿ ಎರಡು ಫ್ಯಾಕ್ಟ್ ಚೆಕ್ ಟೂಲ್ ಗಳನ್ನು ಬಿಡುಗಡೆ ಮಾಡಿದ ಗೂಗಲ್, ಲಾಭ ಏನು? ಇಲ್ಲಿ ತಿಳಿದುಕೊಳ್ಳಿ!
Google Features: ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು Google ಎರಡು ಎರಡು ಫ್ಯಾಕ್ಟ್ ಚೆಕ್ ಟೂಲ್ಗಳು (Google Fact Checking Tools) ಹಿಂದಿ ಭಾಷೆಯಲ್ಲಿ ಪರಿಚಯಿಸಿದೆ. `About This Image` ಮತ್ತು `About This Page` ವೈಶಿಷ್ಟ್ಯಗಳು ಇದೀಗ ಹಿಂದಿ ಸೇರಿದಂತೆ ವಿಶ್ವಾದ್ಯಂತದ 40 ಹೊಸ ಭಾಷೆಗಳಲ್ಲಿ ಲಭ್ಯವಾಗಿರಲಿವೆ ಎಂದು ಗೂಗಲ್ ಘೋಷಿಸಿದೆ (Technology News In Kannada).
Google Fact Check Tools In Hindi: ತಂತ್ರಜ್ಞಾನದ ದೈತ್ಯ ಕಂಪನಿ ಗೂಗಲ್‌ನ ಎರಡು ಫ್ಯಾಕ್ಟ್ ಚೆಕ್ ಟೂಲ್‌ಗಳನ್ನು ಹಿಂದಿ ಭಾಷೆಯಲ್ಲಿ ಪರಿಚಯಿಸಿದೆ. "About This Page" ಮತ್ತು "About This Image" ವೈಶಿಷ್ಟ್ಯಗಳು ಇದೀಗ ಹಿಂದಿ ಸೇರಿದಂತೆ ವಿಶ್ವಾದ್ಯಂತದ 40 ಹೊಸ ಭಾಷೆಗಳಲ್ಲಿ ಲಭ್ಯ ಇರಲಿವೆ ಎಂದು Google ಘೋಷಿಸಿದೆ. Google Search ನಲ್ಲಿ ಕಂಡುಬರುವ ವಿಷಯದ ಹಿನ್ನೆಲೆಯನ್ನು ಪರಿಶೀಲಿಸಲು ಈ ಟೂಲ್ ಗಳು (Google Fact Check Tool In Hindi) ಬಳಕೆದಾರರಿಗೆ ಸಹಾಯ ಮಾಡಲಿವೆ. ಈ ವೈಶಿಷ್ಟ್ಯಗಳು ಬಳಕೆದಾರರಿಗೆ ಬಹಳ ಉಪಯುಕ್ತ ಸಾಬೀತಾಗಲಿವೆ. ಬನ್ನಿ ಹೇಗೆ ತಿಳಿದುಕೊಳ್ಳೋಣ, (Technology News In Kannada)
ವೈಶಿಷ್ಟ್ಯಗಳ ಪ್ರಯೋಜನಗಳು (Google About This Page Fact Check Toos)
"About This Page" ವೈಶಿಷ್ಟ್ಯವು ವೆಬ್‌ಸೈಟ್‌ಗೆ ಭೇಟಿ ನೀಡುವ ಮೊದಲು ಅದರ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇನ್ನೊಂದೆಡೆ, "About This Image" ವೈಶಿಷ್ಟ್ಯವು ಆನ್‌ಲೈನ್‌ನಲ್ಲಿ ಕಂಡುಬರುವ ಚಿತ್ರದ ಮೂಲ ಮತ್ತು ಮಾಹಿತಿಯನ್ನು ತ್ವರಿತವಾಗಿ ಪರಿಶೀಲಿಸಲು ಬಳಕೆದಾರರಿಗೆ ಸಹಾಯ ಮಾಡಲಿದೆ. ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ "ಕಳೆದ ವರ್ಷ ಇಂಗ್ಲಿಷ್‌ನಲ್ಲಿ ಜಾಗತಿಕವಾಗಿ ಆರಂಭಿಸಲಾಗಿರುವ ಟೂಲ್ ಗಳು ಇದೀಗ ಫ್ರೆಂಚ್, ಜರ್ಮನ್, ಹಿಂದಿ, ಇಟಾಲಿಯನ್, ಜಪಾನೀಸ್, ಕೊರಿಯನ್, ಪೋರ್ಚುಗೀಸ್, ಸ್ಪ್ಯಾನಿಷ್ ಮತ್ತು ವಿಯೆಟ್ನಾಮೀಸ್ ಸೇರಿದಂತೆ 40 ಹೆಚ್ಚುವರಿ ಭಾಷೆಗಳಲ್ಲಿ ಲಭ್ಯವಾಗುತ್ತಿವೆ." ಎಂದು ಹೇಳಿದೆ (google introduces two fact check tools in hindi).
ಈ ಟೂಲ್ ಗಳು ಆನ್‌ಲೈನ್ ವಿಷಯವನ್ನು ಹೆಚ್ಚು ನಂಬಲು ಬಳಕೆದಾರರಿಗೆ ಸಹಾಯ ಮಾಡಲಿವೆ ಎಂದು ಗೂಗಲ್ ಹೇಳಿದೆ. "ನೀವು ಚಿತ್ರವನ್ನು ಪರಿಶೀಲಿಸುತ್ತಿರಲಿ ಅಥವಾ ಆನ್‌ಲೈನ್ ಲೇಖನವನ್ನು ಓದುತ್ತಿರಲಿ, ಈ ಟೂಲ್ ಗಳು ನಿಮಗೆ ಆನ್‌ಲೈನ್ ವಿಷಯದಲ್ಲಿ ಹೆಚ್ಚಿನ ವಿಶ್ವಾಸವನ್ನು ಹೊಂದಲು ಸಹಾಯ ಮಾಡುವ ಮಾಹಿತಿಯನ್ನು ನೀಡುತ್ತವೆ" ಎಂದು Google ಹೇಳಿದೆ (Google About This Image Fact Check Tool)
ಭಾರತದಲ್ಲಿ ಚುನಾವಣೆಗೆ ಗೂಗಲ್ ಸಿದ್ಧತೆ (Google Tools For Lok Sabha Elections 2024)
ಕಳೆದ ತಿಂಗಳು, googal search ನಲ್ಲಿ ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಕಡಿಮೆ ಮಾಡಲು ಗೂಗಲ್ ಹಲವಾರು ಕ್ರಮಗಳನ್ನು ಘೋಷಿಸಿತ್ತು. ಇದರ ಅಡಿಯಲ್ಲಿ, ಡೀಪ್‌ಫೇಕ್‌ಗಳಂತಹ (Fake Videos) ಆನ್‌ಲೈನ್ ತಪ್ಪು ಮಾಹಿತಿಯನ್ನು ತ್ವರಿತವಾಗಿ ಪತ್ತೆಹಚ್ಚಲು Google News Publisher ಮತ್ತು Fact Check ಕೆಲಸ ಮಾಡುತ್ತದೆ. ಪರಿಶೀಲನಾ ಪ್ರಕ್ರಿಯೆಯನ್ನು ಸುಲಭಗೊಳಿಸಲು "ಫ್ಯಾಕ್ಟ್ ಚೆಕ್ ಎಕ್ಸ್‌ಪ್ಲೋರರ್" ನಂತಹ ಟೂಲ್ ಗಳನ್ನು ಕೂಡ ಬಳಸಲಾಗುತ್ತದೆ. ಅಲ್ಲದೆ, ಕಂಪನಿಯು ತನ್ನ AI ಚಾಟ್‌ಬಾಟ್ ಜೆಮಿನಿ ಯಾವುದೇ ಚುನಾವಣೆ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ