GooglePay New Feature: ಗೂಗಲ್ ತನ್ನ ಹಣ  ಪಾವತಿ (Digital Payment) ಪ್ಲಾಟ್‌ಫಾರ್ಮ್ ಗೂಗಲ್ ಪೇ (Google Pay) ಅನ್ನು ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಕಂಪನಿಯು ಇದೀಗ ಈ ಅಪ್ಲಿಕೇಶನ್‌ಗೆ (Payment App) ಇನ್ನೂ 4 ಹೊಸ ವೈಶಿಷ್ಟ್ಯಗಳನ್ನು (Google Pay New Features) ಸೇರಿಸಲಿದೆ. ತನ್ನ ವಾರ್ಷಿಕ ಕಾರ್ಯಕ್ರಮ ಗೂಗಲ್ ಫಾರ್ ಇಂಡಿಯಾದಲ್ಲಿ, ಕಂಪನಿಯು ಈ ಹೊಸ ವೈಶಿಷ್ಟ್ಯಗಳ ಬಗ್ಗೆ ಗುರುವಾರ ತಿಳಿಸಿದೆ. ಈ ಹೊಸ ವೈಶಿಷ್ಟ್ಯಗಳು ಗೂಗಲ್ ಪೇಗೆ ಸೇರ್ಪಡೆಯಾಗುವುದರೊಂದಿಗೆ ಅಪ್ಲಿಕೇಶನ್ ಬಳಕೆ ಇನ್ನಷ್ಟು ಸುಲಭವಾಗಲಿದೆ. ಹಾಗಾದರೆ 4 ಹೊಸ ವೈಶಿಷ್ಟ್ಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

1. ಮಾತನಾಡುವ ಮೂಲಕ ಹಣ ಪಾವತಿ (Speech to Text) - ಈ ವೈಶಿಷ್ಟ್ಯದ ಜೋಡಣೆಯಾಗುವುದರಿಂದ ನೀವು ಹಣ ಪಾವತಿಗಳನ್ನು ಮಾಡಲು ತುಂಬಾ ಸುಲಭವಾಗಲಿದೆ. ಪ್ರಸ್ತುತ, ಪಾವತಿ ಮಾಡಲು, ಒಬ್ಬರು ತಮ್ಮ ಖಾತೆ ಸಂಖ್ಯೆ, UPI ಸಂಖ್ಯೆ ಅಥವಾ ಇತರ ಮಾಹಿತಿಯನ್ನು ಟೈಪ್ ಮಾಡಬೇಕು. ಆದರೆ ಈ ವೈಶಿಷ್ಟ್ಯದ ಸೇರ್ಪಡೆಯಿಂದ ನೀವು ಮಾತನಾಡುವ ಮೂಲಕ ಖಾತೆಯ ಸಂಖ್ಯೆಯನ್ನು ಫೀಡ್ ಮಾಡಲು ಸಾಧ್ಯವಾಗಲಿದೆ. ಆದರೆ ಇದಕ್ಕಾಗಿ ನೀವು ಆಯ್ಕೆ ಮಾಡಿದ ಭಾಷೆಯಲ್ಲಿಯೇ ಮಾತನಾಡಬೇಕು.


2. ಬಿಲ್ ಇಬ್ಭಾಗ (Bill Split) - ಈ ಹೊಸ ವೈಶಿಷ್ಟ್ಯವು ಕೂಡ ತನ್ನಷ್ಟಕ್ಕೆ ತಾನೇ ವಿಶಿಷ್ಟವಾಗಿದೆ. ಇದರ ಅಡಿಯಲ್ಲಿ, ನೀವು ಏಕಕಾಲದಲ್ಲಿ ಅನೇಕ ಸಂಪರ್ಕಗಳಿಗೆ ಹಣವನ್ನು ಕಳುಹಿಸಲು ಸಾಧ್ಯವಾಗಲಿದೆ. ಇದು ಗುಂಪು ಪಾವತಿಯಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನೀವು ನಿಮ್ಮ ಸ್ನೇಹಿತರ ನಡುವೆ ಖರ್ಚುಗಳನ್ನು ಹಂಚಬಹುದು. ನೀವು 4 ಸ್ನೇಹಿತರಲ್ಲಿ 200-200 ರೂಪಾಯಿಗಳನ್ನು ಕಳುಹಿಸಬೇಕು ಎಂದು ಭಾವಿಸೋಣ. ಅಂತಹ ಸಂದರ್ಭದಲ್ಲಿ, ನೀವು ಪಾವತಿ ವಿಭಾಗದಲ್ಲಿ ಒಟ್ಟು ರೂ 800 ಅನ್ನು ಟೈಪ್ ಮಾಡುತ್ತೀರಿ. ಇದರ ನಂತರ, ಮುಂದಿನ ಆಯ್ಕೆಯಲ್ಲಿ, ಇದನ್ನು ಕಳುಹಿಸಬೇಕಾದ 4 ಜನರ ಹೆಸರನ್ನು ನೀವು ಆಯ್ಕೆ ಮಾಡುತ್ತೀರಿ. ನಾಲ್ಕು ಹೆಸರುಗಳನ್ನು ಆಯ್ಕೆ ಮಾಡಿದ ನಂತರ, ನೀವು ಪಿನ್ ನಮೂದಿಸಿದ ತಕ್ಷಣ, 200-200 ರೂಪಾಯಿಗಳು ಈ ನಾಲ್ಕು ಸಂಪರ್ಕಗಳಿಗೆ ಹೋಗುತ್ತದೆ. ಕಂಪನಿಯು ಇತ್ತೀಚೆಗೆ ಗುಂಪು ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಆಯ್ಕೆಯು ಅದರಲ್ಲಿ ಕಾಣಿಸಲಿದೆ.


ಇದನ್ನೂ ಓದಿ-Whatsapp: ವಾಟ್ಸಾಪ್‌ನ ಈ ಸಿಂಪಲ್ ಟ್ರಿಕ್‌ನೊಂದಿಗೆ, ನೀವು ಕೆಲವೇ ಸೆಕೆಂಡುಗಳಲ್ಲಿ ಹಣ ಕಳುಹಿಸಿ


3. ಹಿಂಗ್ಲಿಶ್ (Hinglish) - ಈ ವೈಶಿಷ್ಟ್ಯವನ್ನು ಪ್ರಾರಂಭಿಸುವ ಹಿಂದಿನ ಕಂಪನಿಯ ಉದ್ದೇಶವು ಆಡುಮಾತಿನಲ್ಲಿ ಹಿಂಗ್ಲಿಷ್ ಬಳಸುವ ಭಾರತದ 350 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಗುರಿಯಾಗಿಸುವುದಾಗಿದೆ. ಆದರೂ ಈ ವೈಶಿಷ್ಟ್ಯವು ಮುಂದಿನ ವರ್ಷಕ್ಕೆ ಬರಲಿದೆ. ಇದರಲ್ಲಿ, ನೀವು ಹಣ ಪಾವತಿ ಮಾಡಲು ಹೋದಾಗ, ಈ ಭಾಷೆಯ ಅಡಿಯಲ್ಲಿ ನೀವು ಈ ರೀತಿಯ (Jinhe Paisa Bhejna hai unki details daalein) ಎಂಬ ಆಯ್ಕೆಯನ್ನು ನೋಡುತ್ತೀರಿ.


ಇದನ್ನೂ ಓದಿ-PM Modi Big Announcement- ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ: ಪ್ರಧಾನಿ ಮೋದಿ ಮಹತ್ವದ ಘೋಷಣೆ


4. ಮೈ ಶಾಪ್ (My Shop) - ಇದರ ಅಡಿಯಲ್ಲಿ, ಆದಷ್ಟು ಹೆಚ್ಚು ಅಂಗಡಿಕಾರರನ್ನು ಅಥವಾ ವ್ಯಾಪಾರಿಗಳನು ತನ್ನ ಪ್ಲಾಟ್ಫಾರಂಗೆ  ಸೇರಿಸುವ ಮೂಲಕ ತನ್ನ ವ್ಯಾಪಾರವನ್ನು ಹೆಚ್ಚಿಸುವುದು ಗೂಗಲ್ ಯೋಜನೆಯಾಗಿದೆ. ಇದರಿಂದ ಅಂಗಡಿ ಮಾಲೀಕರು ತಮ್ಮ ಅಂಗಡಿಯನ್ನು Google Pay ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲು ಸಾಧ್ಯವಾಗಲಿದೆ. ಅಂದರೆ, ಅವನು ತನ್ನ ಅಂಗಡಿಯಲ್ಲಿನ ಸರಕುಗಳನ್ನು ಇಲ್ಲಿ ಪಟ್ಟಿ ಮಾಡಬಹುದು. ಇಲ್ಲಿಂದ Google Pay ಬಳಕೆದಾರರು ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ, ಈ ವಿಭಾಗದಲ್ಲಿ ಅಂಗಡಿಯವನು ತನ್ನ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಸಹ ಸಾಧ್ಯವಾಗಲಿದೆ.


ಇದನ್ನೂ ಓದಿ-ಒಂದು ವಿಶಿಷ್ಟ ಪ್ರಯೋಗಕ್ಕೆ ಮುಂದಾದ ಬಿಜೆಪಿ : ನಿಮ್ಮ ನಗರದಲ್ಲಿ ಬಾಡಿಗೆಗೆ ಮನೆಗೆ ಬರಲಿದ್ದಾರೆ ಈ  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.