E-Textile Technology: ಇದು ತಂತ್ರಜ್ಞಾನ ಯುಗ. ಜಗತ್ತಿನಲ್ಲಿ ಇಂದು, ತಂತ್ರಜ್ಞಾನವು ನಾವು ಊಹಿಸಲೂ ಸಾಧ್ಯವಾಗದಷ್ಟು ದೂರ ಹೋಗಿದೆ, ಕೆಲವು ತಂತ್ರಜ್ಞಾನಗಳು ನಮ್ಮ ಜೀವನವನ್ನೇ ಬದಲಾಯಿಸಿವೆ. ಪ್ರಸ್ತುತ ಸ್ಮಾರ್ಟ್‌ಫೋನ್ ನಮ್ಮೆಲ್ಲರ ಜೀವನಾಡಿ ಎಂದರೂ ತಪ್ಪಾಗಲಾರದು.  ಸ್ಮಾರ್ಟ್‌ಫೋನ್ ಅತಿಯಾದ ಬಳಕೆಯಿಂದ ಫೋನಿನ ಚಾರ್ಜ್ ಬಹಳ ಬೇಗ ಖಾಲಿಯಾಗುತ್ತದೆ. ಹಾಗಾಗಿ, ಯಾವಾಗಲೂ  ಸ್ಮಾರ್ಟ್‌ಫೋನ್ ಜೊತೆಗೆ ಚಾರ್ಜರ್ ಅನ್ನು ಹೊತ್ತೊಯ್ಯುವುದು ಕೂಡ ಅನಿವಾರ್ಯ. ಆದರೆ, ಇನ್ನು ಮುಂದೆ ನಿಮಗೆ ಈ ಗೊಡವೆ ಇರುವುದಿಲ್ಲ. ಮಾರುಕಟ್ಟೆಯಲ್ಲಿ E-Textile ಎಂಬ ಹೊಸ ತಂತ್ರಜ್ಞಾನ ಬಂದಿದ್ದು ನಿಮ್ಮ ಬಟ್ಟೆಗಳಿಂದಲೇ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಹುದಾಗಿದೆ. ವಿಶೇಷ ಎಂದರೆ, ಕಣ್ಣು ಮಿಟುಕಿಸುವುದರೊಳಗೆ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಫುಲ್ ಆಗುತ್ತೆ...! 


COMMERCIAL BREAK
SCROLL TO CONTINUE READING

ಏನಿದು ಇ-ಟೆಕ್ನಾಲಜಿ :
ಇ-ಟೆಕ್ಸ್ಟೈಲ್ ವಾಸ್ತವವಾಗಿ ವಿಶೇಷವಾದ ಬಟ್ಟೆಯಾಗಿದ್ದು ಅದು ಸಾಮಾನ್ಯ ಬಟ್ಟೆಗಳಿಗಿಂತ ತುಂಬಾ ಭಿನ್ನವಾಗಿದೆ. ಈ ಬಟ್ಟೆ ಕೇವಲ ಧರಿಸಲು ಮಾತ್ರವಲ್ಲ ಅದರ ನೈಜ ಬಳಕೆಯ ಬಗ್ಗೆ ತಿಳಿದರೆ ನೀವು ಆಶ್ಚರ್ಯಚಕಿತರಾಗಬಹುದು. ವಾಸ್ತವವಾಗಿ ಈ ಬಟ್ಟೆಯು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಲ್ಲದು. ಈ ಬಟ್ಟೆಯು ಸೌರ ಶಕ್ತಿಯನ್ನು ತನ್ನೊಳಗೆ ಉಳಿಸುತ್ತದೆ ಮತ್ತು ನೀವು ಬಯಸಿದಾಗ ಅದನ್ನು ಬಳಸಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಹುದು. ಇದು ದೊಡ್ಡ ಬಟ್ಟೆ ಆಗಿದ್ದು, ಹೆಚ್ಚು ಸೌರ ಶಕ್ತಿಯನ್ನು ಅದು ತನ್ನೊಳಗೆ ಸಂಗ್ರಹಿಸುತ್ತದೆ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಹೆಚ್ಚಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. 


ಇದನ್ನೂ ಓದಿ- WhatsApp Rules: ವಾಟ್ಸಾಪ್‌ನಲ್ಲಿ ಮಿಸ್ ಆಗಿ ಇಂತಹ ಸಂದೇಶ ಕಳುಹಿಸಿದರೂ ಜೈಲು ಪಾಲಾಗುತ್ತೀರಿ, ಹುಷಾರ್!


ಈ ತಂತ್ರಜ್ಞಾನ ಎಲ್ಲಿಂದ ಬಂತು ?
ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ವಿಶೇಷ ಬಟ್ಟೆಯನ್ನು ಸಿದ್ಧಪಡಿಸಿದ್ದಾರೆ. ಇದು ಇಲ್ಲಿಯವರೆಗೆ ಕೇವಲ ಫ್ಯಾಂಟಸಿಯಂತಿತ್ತು ಆದರೆ ಈಗ ಅದು ನಿಜವಾಗಿದೆ. ಈ ವಿಶೇಷ ಫ್ಯಾಬ್ರಿಕ್ ಸೌರ ಶಕ್ತಿಯನ್ನು ತನ್ನೊಳಗೆ ಸಂಗ್ರಹಿಸುತ್ತದೆ, ಅದನ್ನು ನಿಮ್ಮ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಬಳಸಬಹುದು. ಈ ಗ್ಯಾಜೆಟ್‌ಗಳು ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳು ಮತ್ತು ಇಯರ್‌ಬಡ್‌ಗಳನ್ನು ಒಳಗೊಂಡಿವೆ. 


ಇದನ್ನೂ ಓದಿ- ಬ್ಯಾಂಕ್ ಗ್ರಾಹಕರೇ ಎಚ್ಚರ! ಈ ಒಂದು ಸಣ್ಣ ತಪ್ಪಿನಿಂದ ಚಿಟಿಕೆಯಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಖಾತೆ


ಈ ಬಟ್ಟೆಯಲ್ಲಿ ಸೌರ ಕೋಶಗಳನ್ನು ಅಳವಡಿಸಲಾಗಿದೆ:
ಈ ವಿಶೇಷ ಫ್ಯಾಬ್ರಿಕ್ ಸೌರ ಶಕ್ತಿಯನ್ನು ರಕ್ಷಿಸುತ್ತದೆ ಮತ್ತು ಇದಕ್ಕಾಗಿ ವಿಜ್ಞಾನಿಗಳು 1,200 ಸಣ್ಣ ದ್ಯುತಿವಿದ್ಯುಜ್ಜನಕ ಕೋಶಗಳನ್ನು (ಸೌರ ಫಲಕಗಳು) ಬಳಸಿದ್ದಾರೆ. ಸೌರಶಕ್ತಿಯು ಅದರೊಳಗೆ ಚೆನ್ನಾಗಿ ಸಂಗ್ರಹವಾಗಲು ಇದು ಕಾರಣವಾಗಿದೆ. ಇದನ್ನು ಬಳಸಿಕೊಂಡು ನಿಮ್ಮ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಬಹುದು. ಈ ಫ್ಯಾಬ್ರಿಕ್ 400 ಮಿಲಿವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಆದ್ದರಿಂದ ನೀವು ನಿಮ್ಮ ಗ್ಯಾಜೆಟ್‌ಗಳನ್ನು ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈಗ ಈ ತಂತ್ರಜ್ಞಾನದ ಕೆಲಸ ನಡೆಯುತ್ತಿದೆ ಆದರೆ ಭವಿಷ್ಯದಲ್ಲಿ ಇದು ಎಲ್ಲರಿಗೂ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.