Google Chrome: ಭಾರತ ಸರ್ಕಾರದ ಕಂಪ್ಯೂಟರ್ ಭದ್ರತಾ ತಂಡವು ಗೂಗಲ್ ಕ್ರೋಮ್ ಮತ್ತು ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್‌ಗಳಲ್ಲಿ ದೋಷದ ಬಗ್ಗೆ ಎಚ್ಚರಿಕೆ ನೀಡಿದೆ. ಬಳಕೆದಾರರ ಸೂಕ್ಷ್ಮ ಡೇಟಾವನ್ನು ಕದಿಯಬಹುದು. ಬಳಕೆದಾರರ ಮಾಹಿತಿಯನ್ನು ಪಡೆಯಲು ಹ್ಯಾಕರ್‌ಗಳಿಗೆ ಅವಕಾಶ ಮಾಡಿಕೊಡುವ ಬ್ರೌಸರ್‌ಗಳಲ್ಲಿ CERT-In ಕೆಲವು ನಿರ್ಣಾಯಕ ದೋಷಗಳನ್ನು ಕಂಡುಹಿಡಿದಿದೆ. ಸಿಇಆರ್‌ಟಿ-ಇನ್ ವೆಬ್‌ಸೈಟ್ ಪ್ರಕಾರ, ಈ ದೋಷದೊಂದಿಗೆ ಬಳಕೆದಾರರ ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು. ಅಲ್ಲದೇ ಬ್ರೌಸರ್‌ನ ಮೇಲೆ ನಿಯಂತ್ರಣವನ್ನು ಪಡೆಯಬಹುದು ಎಂದು ಎಚ್ಚರಿಕೆ ನೀಡಿದೆ.


COMMERCIAL BREAK
SCROLL TO CONTINUE READING

CERT-In ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್‌ ಬಗ್ಗೆ ಸಹ ಇದೇ ರೀತಿಯ ಎಚ್ಚರಿಕೆಯನ್ನು ನೀಡಿದೆ. ಇದರಲ್ಲಿ ಹೆಚ್ಚಿನ ಅಪಾಯದ ದೋಷವನ್ನು ಗುರುತಿಸಲಾಗಿದೆ. ಎಲ್ಲಾ ಬಳಕೆದಾರರಿಗೆ ತಮ್ಮ ಸೆಕ್ಯಟಿರಿಟಿಯನು ಅಪ್ಡೇಟ್‌ ಮಾಡಲು ಸಲಹೆ ನೀಡಲಾಗಿದೆ.


ಇದನ್ನೂ ಓದಿ: ಹುಡುಗರು ಅಥವಾ ಹುಡುಗಿಯರು.. ಯಾರು ಹೆಚ್ಚು ಬುದ್ಧಿವಂತರು? ಕೊನೆಗೂ ಸಿಕ್ಕಿತು ಉತ್ತರ


ಲಿನಕ್ಸ್ ಮತ್ತು ಮ್ಯಾಕ್‌ನಲ್ಲಿ 120.0.6099.62 ಗಿಂತ ಹಿಂದಿನ ಗೂಗಲ್ ಕ್ರೋಮ್ ಆವೃತ್ತಿಯನ್ನು ಮತ್ತು ವಿಂಡೋಸ್‌ನಲ್ಲಿ 120.0.6099.62/.63 ಗಿಂತ ಹಿಂದಿನ ಗೂಗಲ್ ಕ್ರೋಮ್ ಆವೃತ್ತಿಯನ್ನು ಬಳಸುತ್ತಿರುವ ವ್ಯಕ್ತಿಯು ಪ್ರವೈಸಿ ಅಪಾಯದಲ್ಲಿರಬಹುದು. 120.0.2210.61 ಕ್ಕಿಂತ ಹಳೆಯದಾದ ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್ ಆವೃತ್ತಿಗಳನ್ನು ಬಳಸುವ ವ್ಯಕ್ತಿಗಳು ಸಹ ಡೇಂಜರ್‌ ನಲ್ಲಿದ್ದಾರೆ ಎನ್ನಲಾಗಿದೆ.


ಸ್ಯಾಮ್‌ಸಂಗ್ ಬಳಕೆದಾರರಿಗೂ ಎಚ್ಚರಿಕೆ


ಇತ್ತೀಚೆಗೆ CERT-In ಸ್ಯಾಮ್‌ಸಂಗ್ ಮೊಬೈಲ್ ಫೋನ್ ಬಳಕೆದಾರರಿಗೆ ಹಲವಾರು ಭದ್ರತಾ ದೋಷಗಳ ಬಗ್ಗೆ ಎಚ್ಚರಿಕೆ ನೀಡಿದೆ. ಈ ದೋಷಗಳು ಬಳಕೆದಾರರ ಡೇಟಾ ಮತ್ತು ಸಾಧನಗಳನ್ನು ಅಪಾಯದಲ್ಲಿರಿಸಬಹುದು.


ಇದನ್ನೂ ಓದಿ: 2023 ರಲ್ಲಿ Netflix ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಯಾವುದು ಗೊತ್ತಾ?   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.