ಬೆಂಗಳೂರು: ಪವರ್ಪುಲ್  ಮೋಟಾರ್‌ಸೈಕಲ್‌ಗಳಿಗೆ ಹೆಸರುವಾಸಿಯಾಗಿರುವ ಹಾರ್ಲೆ-ಡೇವಿಡ್‌ಸನ್ ಕಂಪನಿ, ಭಾರತದಲ್ಲಿ ತನ್ನ ಆಯ್ದ ಮೋಟಾರ್‌ಸೈಕಲ್‌ಗಳ ಮೇಲೆ 5.25 ಲಕ್ಷದವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಕಂಪನಿಯ ಪ್ಯಾನ್ ಅಮೇರಿಕಾ 1250 ಸ್ಪೆಷಲ್, ಸ್ಪೋರ್ಟ್‌ಸ್ಟರ್ ಎಸ್ ಮತ್ತು ನೈಟ್‌ಸ್ಟರ್ ಬೈಕ್‌ಗಳ ಮೇಲೆ ಈ ರಿಯಾಯಿತಿ ಲಭ್ಯವಿರುತ್ತದೆ. (Technology News In Kannada)


COMMERCIAL BREAK
SCROLL TO CONTINUE READING

ಪ್ಯಾನ್ ಅಮೇರಿಕಾ 1250 ಮೋಟಾರ್ ಸೈಕಲ್ ಮೇಲೆ 3.25 ಲಕ್ಷ ರುಪಾಯಿ ರಿಯಾಯಿತಿ ಇದೆ. ಇದರಿಂದ ಅದರ ಬೆಲೆ 21.24 ಲಕ್ಷಕ್ಕೆ (ಎಕ್ಸ್ ಶೋ ರೂಂ) ಇಳಿಕೆಯಾಗಲಿದೆ. ಇದರ ವಾಸ್ತವಿಕ ಬೆಲೆ 24.49 ಲಕ್ಷ ರೂ. ಈ ಮೋಟಾರ್ ಸೈಕಲ್ 1,252 ಸಿಸಿ ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಇದು 8,750 rpm ನಲ್ಲಿ 150.9 bhp ಮತ್ತು 6,750 rpm ನಲ್ಲಿ 128 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಹಾರ್ಲೆ ಡೇವಿಡ್‌ಸನ್‌ನ ಸ್ಪೋರ್ಟ್‌ಸ್ಟರ್ ಎಸ್ ಮೇಲೆ 3.25 ಲಕ್ಷ ರೂಪಾಯಿ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಇದರಿಂದ ಅದರ ಬೆಲೆ 18.79 ಲಕ್ಷದಿಂದ 15.54 ಲಕ್ಷಕ್ಕೆ ಇಳಿಕೆಯಾದಂತಾಗಿದೆ. ಇದು ಪ್ಯಾನ್ ಅಮೇರಿಕಾ 1250 ನಂತೆಯೇ ಎಂಜಿನ್ ಸಾಮರ್ಥ್ಯ ಹೊಂದಿದೆ. ಇದು 121 bhp ಮತ್ತು 125 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.


ಇದನ್ನೂ ಓದಿ-WhatsApp Channel ನಲ್ಲಿ ಇನ್ಮುಂದೆ ವಾಯ್ಸ್ ನೋಟ್ ಕೂಡ ಕಳುಹಿಸಬಹುದು, ಹೇಗೆ ಇಲ್ಲಿ ತಿಳಿದುಕೊಳ್ಳಿ!


ಹಾರ್ಲೆ ಡೇವಿಡ್‌ಸನ್‌ನ ನೈಟ್‌ಸ್ಟರ್ ಮೋಟಾರ್‌ಸೈಕಲ್ ಮೇಲೆ ಗರಿಷ್ಠ 5.25 ಲಕ್ಷ ರಿಯಾಯಿತಿ ನೀಡಲಾಗುತ್ತಿದೆ. ಇದರಿಂದ ಅದರ ಬೆಲೆ 12.24 ಲಕ್ಷಕ್ಕೆ ಇಳಿಕೆಯಾಗಿದೆ. ಇದರ ವಾಸ್ತವಿಕ ಬೆಲೆ 17.63 ಲಕ್ಷ ರೂ. ಇದು 975 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 89 bhp ಮತ್ತು 95 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಂಪನಿಯು ಆಮದು ಮಾಡಿಕೊಳ್ಳುವ ಮೋಟಾರ್‌ಸೈಕಲ್‌ಗಳ ಮೇಲೆ ಈ ರಿಯಾಯಿತಿ ಇದೆ. ಇತ್ತೀಚೆಗೆ, ಹಾರ್ಲೆ ಡೇವಿಡ್ಸನ್, ದೊಡ್ಡ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾದ Hero MotoCorp ಸಹಯೋಗದೊಂದಿಗೆ ಕಡಿಮೆ ಬೆಲೆಯ Harley X440 ಮೋಟಾರ್‌ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. Hero MotoCorp ಗ್ರಾಹಕರಿಗೆ Harley-Davidson X440 ವಿತರಣೆಯನ್ನು ಪ್ರಾರಂಭಿಸಿದೆ. ಈ ಮೋಟಾರ್‌ಸೈಕಲ್‌ನ 1,000 ಯುನಿಟ್‌ಗಳನ್ನು ಕಂಪನಿಯ 100 ಡೀಲರ್‌ಶಿಪ್‌ಗಳಲ್ಲಿ ಮಾರಾಟ ಮಾಡಲಾಗಿದೆ. ರಾಜಸ್ಥಾನದ ನೀಮ್ರಾನಾದಲ್ಲಿರುವ ಹೀರೋ ಮೋಟೋಕಾರ್ಪ್‌ನ ಕಾರ್ಖಾನೆಯಲ್ಲಿ ಇದನ್ನು ತಯಾರಿಸಲಾಗುತ್ತಿದೆ. ಇದಕ್ಕಾಗಿ ಕಂಪನಿಯು ಹೊಸ ಬುಕ್ಕಿಂಗ್ ಕೂಡ ಆರಂಭಿಸಿದೆ.


ಇದನ್ನೂ ಓದಿ-ಈ ಕೆಲಸ ಮಾಡಿದ್ರೆ ವಿಕಿಪೀಡಿಯಾಗೆ ಒಂದು ಬಿಲಿಯನ್ ಡಾಲರ್ ಕೊಡುವುದಾಗಿ ಎಲಾನ್ ಮಸ್ಕ್ ಘೋಷಣೆ!


X440 ಅನ್ನು ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ - ಡೆನಿಮ್, ವಿವಿಡ್ ಮತ್ತು ಎಸ್. ಅವುಗಳ ಬೆಲೆಗಳು ರೂ 2,39,500 ರಿಂದ ರೂ 2,79,500 (ಎಕ್ಸ್ ಶೋ ರೂಂ) ನಡುವೆ ಇರುತ್ತದೆ. ಇದು ಹಾರ್ಲೆ ಡೇವಿಡ್‌ಸನ್‌ನ ಅತ್ಯಂತ ಕಡಿಮೆ ಬೆಲೆಯ ಮೋಟಾರ್‌ಸೈಕಲ್ ಆಗಿದೆ. ಇದಕ್ಕಾಗಿ 25 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ಗಳು ಬಂದಿವೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೀರೋ ಮೋಟೋಕಾರ್ಪ್ ತನ್ನ ಉತ್ಪಾದನೆಯನ್ನು ಹೆಚ್ಚಿಸಲಿದೆ.ಈ ಕುದೃತು ಹೇಳಿಕೆ ನೀಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿರಂಜನ್ ಗುಪ್ತಾ ಅವರು, "ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲಾ ವಿತರಣೆಗಳನ್ನು ಪೂರ್ಣಗೊಳಿಸುವುದು ನಮ್ಮ ಪ್ರಯತ್ನವಾಗಲಿದೆ. ಇದಕ್ಕಾಗಿ, ಪೂರೈಕೆ ಸರಪಳಿಯ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ" ಎಂದು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.