WhatsApp: ವಾಟ್ಸಾಪ್‌ನಲ್ಲಿ ಯಾರಾದ್ರೂ ನಿಮ್ಮನ್ನ ಬ್ಲಾಕ್ ಮಾಡಿದ್ದಾರಾ? ಈ ರೀತಿ ಪತ್ತೆ ಹಚ್ಚಿ
WhatsApp Feature: ಫೋನ್ನಲ್ಲಿ ನಂಬರ್ ಬ್ಲಾಕ್ ಮಾಡುವಂತೆಯೇ ವಾಟ್ಸಾಪ್‌ನಲ್ಲಿಯೂ ಸಹ ನಂಬರ್ ಬ್ಲಾಕ್ ಮಾಡುವ ಸೌಲಭ್ಯವಿದೆ. ಅಷ್ಟೇ ಅಲ್ಲ, ಯಾರಾದರೂ ನಿಮ್ಮ ವಾಟ್ಸಾಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರಾ ಎಂಬುದನ್ನೂ ಕೂಡ ನೀವು ಸುಲಭವಾಗಿ ಪತ್ತೆಹಚ್ಚಬಹುದು.
WhatsApp: ಪ್ರಸ್ತುತ, ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿ ಜನಪ್ರಿಯವಾಗಿರುವ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಫೋನ್ನಲ್ಲಿ ನಂಬರ್ ಬ್ಲಾಕ್ ಮಾಡುವಂತೆಯೇ ವಾಟ್ಸಾಪ್‌ನಲ್ಲಿಯೂ ಸಹ ನಂಬರ್ ಬ್ಲಾಕ್ ಮಾಡುವ ಸೌಲಭ್ಯವಿದೆ. ಮಾತ್ರವಲ್ಲ, ಬೇರೆ ಯಾರಾದರೂ ನಿಮ್ಮ ನಂಬರ್ ಅನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದರೆ ಅದನ್ನು ಕೂಡ ಸುಲಭವಾಗಿ ಕಂಡು ಹಿಡಿಯಬಹುದಾಗಿದೆ.
ವಾಸ್ತವವಾಗಿ, ಯಾರಾದರೂ ನಿಮ್ಮನ್ನು ವಾಟ್ಸಾಪ್‌ನಲ್ಲಿ ನಿರ್ಬಂಧಿಸಿದ್ದಾರೆಯೇ ಎಂಬುದನ್ನೂ ಹಲವು ವಿಧಾನಗಳಲ್ಲಿ ಕಂಡು ಹಿಡಿಯಬಹುದು. ಇದನ್ನು ಪರಿಶೀಲಿಸಿರುಯ ವಿಧಾನಗಳೆಂದರೆ...
ವಾಟ್ಸಾಪ್ ಚಾಟ್ನಲ್ಲಿ ಒಂದೇ ಟಿಕ್ ಗೋಚರ:
ಯಾವುದೇ ವ್ಯಕ್ತಿ ನಿಮ್ಮ ನಂಬರ್ ಅನ್ನು ನಿರ್ಬಂಧಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನೂ ತಿಳಿಯಲು ನೀವು ಬಯಸಿದರೆ ಆ ಬಳಕೆದಾರರಿಗೆ ಸಂದೇಶವನ್ನು ಕಳುಹಿಸಿ. ನೀವು ಸಂದೇಶ ಕಳುಹಿಸಿದ ವ್ಯಕ್ತಿ ಆನ್ಲೈನ್ ನಲ್ಲಿ ಇದ್ದರೂ ಕೂಡ ದೀರ್ಘಕಾಲ ಸಂದೇಶದ ಕೆಳಗೆ ಡಬಲ್ ಟಿಕ್ ಬದಲಿಗೆ ಒಂದೇ ಟಿಕ್ ಗೋಚರಿಸಿದರೆ ಅವರು ನಿಮ್ಮ ನಂಬರ್ ಬ್ಲಾಕ್ ಮಾಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ.
ಇದನ್ನೂ ಓದಿ- Google Chrome Features: ಗೂಗಲ್ ಕ್ರೋಮ್‌ನಲ್ಲಿ ಒಮ್ಮೆಗೆ ಮೂರು ವೈಶಿಷ್ಟ್ಯಗಳನ್ನು ಪರಿಚಯಿಸಿದ ಗೂಗಲ್
ವಾಟ್ಸಾಪ್ ಕರೆ:
ನಿಮಗೆಲ್ಲರಿಗೂ ತಿಳಿದಿರುವಂತೆ ವಾಟ್ಸಾಪ್‌ನಲ್ಲಿ ಆಡಿಯೋ-ವಿಡಿಯೋ ಕರೆ ಸೌಲಭ್ಯ ಲಭ್ಯವಿದೆ. ಇದರಿಂದಲೂ ಕೂಡ ನಿಮ್ಮ ನಂಬರ್ ಬ್ಲಾಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. ಇದಕ್ಕಾಗಿ ನೀವು ಆ ಬಳಕೆದಾರರಿಗೆ ವಾಟ್ಸಾಪ್ ವಿಡಿಯೋ/ಆಡಿಯೋ ಕರೆಯನ್ನು ಮಾಡಿ. ಒಂದೊಮ್ಮೆ ನಿಮ್ಮ ಕರೆ ಸಂಪರ್ಕಗೊಳ್ಳದಿದ್ದರೆ ಆ ಬಳಕೆದಾರರು ನಿಮ್ಮ ಸಂಖ್ಯೆಯನ್ನು ನಿರ್ಬಂಧಿಸಿದ್ದಾರೆ ಎಂದರ್ಥ.
ಇದನ್ನೂ ಓದಿ- WhatsApp: ಹ್ಯಾಕರ್‌ಗಳಿಂದ ರಕ್ಷಣೆಗಾಗಿ ವಾಟ್ಸಾಪ್‌ನಲ್ಲಿ ಈ ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿ!
ಗ್ರೂಪ್ ಗೆ ಸೇರಿಸುವುದು:
ಯಾವುದೇ ಬಳಕೆದಾರರು ನಿಮ್ಮನ್ನು ನಿರ್ಬಂಧಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಅವರನ್ನು ವಾಟ್ಸಾಪ್ ಗ್ರೂಪ್ ಗೆ ಸೇರಿಸಲು ಪ್ರಯತ್ನಿಸಿ. ಒಂದೊಮ್ಮೆ ಆ ಬಳಕೆದಾರರು ನಿಮ್ಮ ನಂಬರ್ ಅನ್ನು ಬ್ಲಾಕ್ ಮಾಡಿದ್ದರೆ ನೀವು ಯಾವುದೇ ವಾಟ್ಸಾಪ್ ಗ್ರೂಪ್ ಗೆ ಅವರನ್ನು ಸೇರಿಸಲು ಸಾಧ್ಯವಾಗುವುದಿಲ್ಲ.
ಗಮನಾರ್ಹ ವಿಷಯವೆಂದರೆ, ಮೇಲೆ ತಿಳಿಸಲಾದ ಎಲ್ಲಾ ಚಿಹ್ನೆಗಳು ನಿಮ್ಮ ಸಂಖ್ಯೆಯನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೆಯೇ ಎಂಬುದನ್ನೂ ತಿಳಿಯುವ ವಿಧಾನಗಳಾಗಿದ್ದರೂ ಕೂಡ ಈ ಸೂಚನೆಗಳು ನಿರ್ಣಾಯಕ ಪುರಾವೆಯಾಗಿಲ್ಲ. ಏಕೆಂದರೆ, ವಾಟ್ಸಾಪ್‌ನಲ್ಲಿ ಲಾಸ್ಟ್ ಸೀನ್, ಸ್ಟೇಟಸ್ ಮತ್ತು ಪ್ರೊಫೈಲ್ ಫೋಟೋವನ್ನು ಮರೆಮಾಡುವಂತಹ ಹಲವು ವೈಶಿಷ್ಟ್ಯಗಳು ಲಭ್ಯವಿವೆ. ಈ ವೈಶಿಷ್ಟ್ಯಗಳ ಬಳಕೆಯಿಂದಲೂ ನೀವು ಸಂದೇಶ ಕಳುಹಿಸಿದಾಗ ಸಿಂಗಲ್ ಟಿಕ್ ಗೋಚರಿಸಬಹುದು, ಕರೆ ಸಂಪರ್ಕಗೊಳ್ಳದೆ ಇರಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.