ನವದೆಹಲಿ: ಪ್ರತಿಯೊಬ್ಬರೂ Apple iPhoneಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಆದರೆ ಹೆಚ್ಚಿನ ಬೆಲೆಯ ಕಾರಣ ಯಾರೂ ಅದನ್ನು ಖರೀದಿಸುವುದಿಲ್ಲ. ನೀವು ನಿರಾಸೆಯಾಗುವ ಅವಶ್ಯಕತೆಯಿಲ್ಲ. ಯಾಕಂದ್ರೆ ಐಫೋನ್ ಇದೀಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇತ್ತೀಚೆಗೆ ನವೀಕರಿಸಿದ ಫೋನ್‌ಗಳ ಕ್ರೇಜ್ ಹೆಚ್ಚುತ್ತಿದೆ. ಎಲ್ಲರೂ ಕಡಿಮೆ ಬೆಲೆಯ ನವೀಕರಿಸಿದ ಫೋನ್‌ಗಳ ಕಡೆ ಮುಖಮಾಡಿದ್ದಾರೆ. ನವೀಕರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿ Mobexನ ವೆಬ್‌ಸೈಟ್‌ನಲ್ಲಿ iPhone 12 Pro Max ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.  


COMMERCIAL BREAK
SCROLL TO CONTINUE READING

Apple iPhone 12 Pro ಮ್ಯಾಕ್ಸ್ ಬೆಲೆ ಕಡಿತ


Apple iPhone 12 Pro Max (128GB)ನ ಮೂಲ ಬೆಲೆ129,900 ರೂ.ಇದೆ. ಆದರೆ ಈ ಫೋನ್ Mobexನಲ್ಲಿ 65,999 ರೂ.ಗೆ ಲಭ್ಯವಿದೆ. ಅಂದರೆ ಇದರ ಮೇಲೆ ಸಂಪೂರ್ಣ ಶೇ.49ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ ಮೊಬೆಕ್ಸ್ ನೋ ಕಾಸ್ಟ್ ಇಎಂಐನಲ್ಲಿ ಸಹ ಫೋನ್ ನೀಡುತ್ತಿದೆ. ಎಲ್ಲಾ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ನೊಂದಿಗೆ ಫೋನ್ ಅನ್ನು 6 ತಿಂಗಳವರೆಗೆ No Cost EMIನಲ್ಲಿ ಖರೀದಿಸಬಹುದು. ಇದರರ್ಥ ನೀವು ಯಾವುದೇ ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ.


ಇದನ್ನೂ ಓದಿ: China Claim On Moon: ಚಂದ್ರನ ಮೇಲೆ ಚೀನಾ 'ಕಬ್ಜಾ', ಶೀಘ್ರದಲ್ಲೇ ವಸಾಹತ್ತು ನಿರ್ಮಾಣ ಕಾರ್ಯ ಆರಂಭ!


ಈ Mobex ಪ್ರಮಾಣೀಕೃತ ನವೀಕರಿಸಿದ ಉತ್ಪನ್ನವನ್ನು ಪರಿಣಿತ ವೃತ್ತಿಪರರಿಂದ 65+ ಗುಣಮಟ್ಟದ ಪರಿಶೀಲನೆಗಳಡಿ ಪರೀಕ್ಷಿಸಲಾಗಿರುತ್ತದೆ. ಈ ನವೀಕರಿಸಿದ Apple iPhone 12 Pro Max ಕನಿಷ್ಠ ಬಳಕೆ ಮಾಡಿದ ಅಥವಾ ಯಾವುದೇ ಡ್ಯಾಮೇಜ್ ಇಲ್ಲದ ಫೋನ್ ಆಗಿರುತ್ತದೆ. ಈ ಉತ್ಪನ್ನವು ಎಲ್ಲಾ ಪರಿಕರಗಳೊಂದಿಗೆ ಬರುತ್ತದೆ ಮತ್ತು 1 ವರ್ಷದ Mobex ವಾರಂಟಿ ಸಹ ನಿಮಗೆ ನೀಡಲಾಗುತ್ತದೆ. ಇದು 128 GB ಸ್ಟೋರೇಜ್ ಹೊಂದಿದ್ದು, ಗೋಲ್ಡನ್ ಕಲರ್‍ನಲ್ಲಿದೆ. 


ನವೀಕರಿಸಿದ ಫೋನ್‌ಗಳು ಯಾವುವು?


ನವೀಕರಿಸಿದ ಫೋನ್‌ಗಳು ಮೂಲತಃ ಮಾರಾಟಗಾರರಿಂದ ಮಾರಾಟವಾಗುವ ಫೋನ್‌ಗಳಾಗಿವೆ. ಆದರೆ ಕೆಲವು ದೋಷಗಳು ಅಥವಾ ತಾಂತ್ರಿಕ ಸಮಸ್ಯೆಗಳಿಂದ ಇವುಗಳನ್ನು ಕಂಪನಿಗೆ ಹಿಂತಿರುಗಿಸಲಾಗಿರುತ್ತದೆ. ಈ ಫೋನ್‌ಗಳನ್ನು ನಂತರ ದುರಸ್ತಿ ಮಾಡಿ ಹೊಸದರಂತೆ ರಿಪೇರಿ ಮಾಡಲಾಗುತ್ತದೆ. ನವೀಕರಿಸಿದ ಫೋನ್‌ಗಳು ಹೊಸ ಫೋನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ. ಗಮನಿಸಬೇಕಾದ ವಿಷಯವೆಂದರೆ ನವೀಕರಿಸಿದ ಫೋನ್‍ಗಳನ್ನು ವಿಶ್ವಾಸಾರ್ಹ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು.


ಇದನ್ನೂ ಓದಿ: ಡೆಬಿಟ್ ಕಾರ್ಡ್ ಇಲ್ಲದೆಯೂ UPI PIN ಬದಲಿಸಬಹುದು ! ಇಲ್ಲಿದೆ ಹಂತ ಹಂತದ ವಿವರ


ನವೀಕರಿಸಿದ ಫೋನ್‌ಗಳು ಹೊಸ ಫೋನ್‌ಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿರುತ್ತವೆ. ನವೀಕರಿಸಿದ ಫೋನ್‌ಗಳು ಹೊಸ ಫೋನ್‌ಗಳಿಗಿಂತ ಉತ್ಪಾದನೆಯಲ್ಲಿ ಕಡಿಮೆ ಇಂಗಾಲವನ್ನು ಉತ್ಪಾದಿಸುತ್ತವೆ. ಹೊಸ ಫೋನ್‌ಗಳಿಗಿಂತ ನವೀಕರಿಸಿದ ಫೋನ್‌ಗಳು ಹೆಚ್ಚಿನ ಖಾತರಿಯನ್ನು ಹೊಂದಿರುತ್ತವೆ. ಇನ್ಯಾಕೆ ತಡ ನೀವು ಸಹ ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್ ಖರೀದಿಸಿರಿ.    


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.