WhatsApp Call Record: ಪ್ರಸ್ತುತ ಜಗತ್ತಿನ ಬಹುದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ಅನ್ನು ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರೂ ಕೂಡ ಬಳಸುತ್ತಾರೆ. ವಾಟ್ಸಾಪ್ ಆರಂಭದಲ್ಲಿ ಕೇವಲ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿತ್ತು, ಆದರೆ ಕ್ರಮೇಣ ಹಲವಾರು ಹೊಸ ವೈಶಿಷ್ಟ್ಯಗಳನ್ನು ಇದರಲ್ಲಿ ಸೇರಿಸಲಾಗಿದೆ. 


COMMERCIAL BREAK
SCROLL TO CONTINUE READING

ವಾಟ್ಸಾಪ್ ಆ್ಯಪ್‌ನಲ್ಲಿ ಕರೆ ಮಾಡುವ ವೈಶಿಷ್ಟ್ಯದ ಆಗಮನದೊಂದಿಗೆ ಇದರಲ್ಲಿ ಕಮ್ಯುನಿಕೇಶನ್ ಇನ್ನೂ ಸುಲಭವಾಗಿದೆ. ವಾಟ್ಸಾಪ್ ಬಳಕೆದಾರರು ಈ ಆ್ಯಪ್‌ನಲ್ಲಿ   ಈಗ ಸುಲಭವಾಗಿ ವೀಡಿಯೊ ಮತ್ತು ಆಡಿಯೊ ಕರೆಗಳನ್ನು ಮಾಡಬಹುದು.  ಆದರೆ, ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ ಎಂಬುದು ಹಲವರ ಪ್ರಶ್ನೆಯಾಗಿದೆ. 


ಇದನ್ನೂ ಓದಿ- Truecaller: ಟ್ರೂಕಾಲರ್‌ನಲ್ಲಿ ತಕ್ಷಣವೇ ಡಿಲೀಟ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿ


ನಿಮಗೆಲ್ಲರಿಗೂ ತಿಳಿದಿರುವಂತೆ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ಯಾವುದೇ ಅಧಿಕೃತ ಮಾರ್ಗವಿಲ್ಲ. ಆದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿ ನೀವು ಈ ಕೆಲಸವನ್ನು ಸುಲಭವಾಗಿ ಮಾಡಬಹುದು. 


ನೀವು ನಿಮ್ಮ ಫೋನ್‌ನಲ್ಲಿ ಕ್ಯೂಬ್ ACR, ಕಾಲ್ ರೆಕಾರ್ಡರ್, ಸ್ವಯಂಚಾಲಿತ ಕರೆ ರೆಕಾರ್ಡರ್ ಗಳಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಬಹುದು. 


ಇದನ್ನೂ ಓದಿ- ಡಿಜಿಟಲ್ ಸಾಲ ಎಂಬ ಕರಾಳ ಜಾಲ: ಭಾರತವನ್ನು ಕಾಡುತ್ತಿರುವ ಆತಂಕಕಾರಿ ವಾಸ್ತವದ ಅನಾವರಣ


ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: 
ಹಂತ 1: ನಿಮ್ಮ ಫೋನ್‌ನಲ್ಲಿ ಥರ್ಡ್ ಪಾರ್ಟಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
ಹಂತ 2: ಅಪ್ಲಿಕೇಶನ್ ಅನ್ನು ಓಪೆನ್ ಮಾಡಿ ಸೆಟ್ಟಿಂಗ್‌ಗಳಿಗೆ ಹೋಗಿ.
ಹಂತ 3: ಇಲ್ಲಿ ಕಾಣುವ ಕರೆ ರೆಕಾರ್ಡಿಂಗ್ ಅನ್ನು ಸಕ್ರಿಯಗೊಳಿಸಿ.
ಹಂತ 4:  ವಾಟ್ಸಾಪ್ ಕರೆಗಳನ್ನು ಮಾಡಿ ಅಥವಾ ಸ್ವೀಕರಿಸಿ.
ಹಂತ 5: ಕರೆ ಪ್ರಾರಂಭವಾದ ನಂತರ, ಅಪ್ಲಿಕೇಶನ್ ಸ್ವಯಂಚಾಲಿತವಾಗಿ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡುತ್ತದೆ. ಈ ರೀತಿಯಾಗಿ ನಿಮಗೆ ಅಗತ್ಯವಿದ್ದರೆ ವಾಟ್ಸಾಪ್ ಕರೆಗಳನ್ನು ಸುಲಭವಾಗಿ ರೆಕಾರ್ಡ್ ಮಾಡಬಹುದಾಗಿದೆ. 


ಆದಾಗ್ಯೂ, ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿರುವ ವೈಯಕ್ತಿಕ ಮಾಹಿತಿಗಳಿಗೆ ಅಪಾಯ ತೊಂದೊಡ್ಡಬಹುದಾಗಿರುವುದರಿಂದ ಇಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ ಜಾಗರೂಕರಾಗಿರುವುದು ತುಂಬಾ ಅವಶ್ಯಕ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.