Hero Vida V1 Plus: ಭಾರತದ ಮುಂಚೂಣಿಯ ಆಟೋಮೊಬೈಲ್ ಕಂಪನಿ Hero MotoCorp ಮತ್ತೊಮ್ಮೆ  Vida V1 Plus ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅದರ ಪ್ರೀಮಿಯಂ ಮಾಡೆಲ್ ಅಂದರೆ ವಿ1 ಪ್ರೊಗಿಂತ 30 ಸಾವಿರ ರೂಪಾಯಿ ಅಗ್ಗವಾಗಿದೆ. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್ಇಡಿ ಲೈಟಿಂಗ್ ಸಿಸ್ಟಂ ಹೊಂದಿದೆ. ಲೈವ್ ಟ್ರ್ಯಾಕಿಂಗ್ ಮತ್ತು ವೆಹಿಕಲ್ ಡೈಗ್ನೋಸ್ಟಿಕ್‌ನಂತಹ ವೈಶಿಷ್ಟ್ಯಗಳು ಈ ಸ್ಕೂಟರ್ ನಲ್ಲಿ ಒದಗಿಸಲಾಗಿದೆ. ಇದು ಮೊದಲಿಗಿಂದ ಪವರ್ಫುಲ್ ಮೋಟರ್ ಮತ್ತು ಬ್ಯಾಟರಿಯನ್ನು ಹೊಂದಿದೆ. ಈ ಸ್ಕೂಟರ್ ಉತ್ಪಾದನೆಯನ್ನು ಕೆಲ ತಿಂಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. (Technology News In Kannada)


COMMERCIAL BREAK
SCROLL TO CONTINUE READING

Hero Vida V1 Plus ನ ಬ್ಯಾಟರಿ ಮತ್ತು ವೈಶಿಷ್ಟ್ಯಗಳು
ಹೀರೋ ತನ್ನ ಈ ಹೊಸ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ (Hero Vida V1 Plus Relaunch) 6KW ಉತ್ಪಾದನೆಯೊಂದಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಒದಗಿಸಿದೆ. ಇದು 3.94 kWh ಬ್ಯಾಟರಿಯನ್ನು ಹೊಂದಿದೆ. ಈ ಸ್ಕೂಟರ್ ಕೇವಲ 3.4 ಸೆಕೆಂಡುಗಳಲ್ಲಿ ಗಂಟೆಗೆ ಶೂನ್ಯದಿಂದ 40 ಕಿಲೋಮೀಟರ್ ವೇಗವನ್ನು ಪಡೆಯುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 80 ಕಿಲೋಮೀಟರ್. ಇದರ ರೆಂಜ್ ಸಿಂಗಲ್ ಚಾರ್ಜ್ ನಲ್ಲಿ 110 ಕಿಲೋಮೀಟರ್ ಗಳಾಗಿದೆ.


ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಹೀರೋ ವಿಡಾ ವಿ1 ಪ್ಲಸ್ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಹೊಂದಿದೆ. ಸ್ಮಾರ್ಟ್‌ಫೋನ್ ಸಂಪರ್ಕದ ಜೊತೆಗೆ, ಇದು ಮಲ್ಟಿಪಲ್ ರೈಡಿಂಗ್ ಮೋಡ್‌ಗಳು, ಲೈವ್ ಟ್ರ್ಯಾಕಿಂಗ್, ಜಿಯೋ ಫೆನ್ಸಿಂಗ್ ಮತ್ತು ವೆಹಿಕಲ್ ಡೈಗ್ನೋಸ್ಟಿಕ್ ಕಾರ್ಯತಂತ್ರವನ್ನು  ಒದಗಿಸಲಾಗಿದೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್ಇಡಿ ಲ್ಯಾಂಪ್ ಸಿಸ್ಟಂ ನೀಡಲಾಗಿದೆ. 


ಸ್ಕೂಟರ್ ಬೆಲೆ
ಆಟೋ ಕಂಪನಿ ಹೀರೋ ವಿಡಾ ವಿ1 ಪ್ಲಸ್ ಬೆಲೆಯನ್ನು ರೂ.1.15 ಲಕ್ಷಕ್ಕೆ (ಎಕ್ಸ್ ಶೋ ರೂಂ ಬೆಲೆ) ನಿಗದಿಪಡಿಸಿದೆ. FAME II ಸಬ್ಸಿಡಿ, ರಾಜ್ಯ EV ಸಬ್ಸಿಡಿ ಮತ್ತು ಡೀಲರ್ ರಿಯಾಯಿತಿಯನ್ನು ಅದರ ಮೇಲೆ ಒದಗಿಸಲಾಗುತ್ತದೆ, ಇವೆಲ್ಲವುಗಳ ಬಳಿಕ 1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಇದನ್ನು ನೀವು ಮನೆಗೆ ಕೊಂಡೊಯ್ಯಬಹುದು. ಇದು ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಅಥರ್ 450S, Ola S1 ಏರ್, ಬಜಾಜ್ ಚೇತಕ್, TVS iQube ಮತ್ತು ಸಿಂಪಲ್ ಡಾಟ್ ಒನ್‌ನಂತಹ ಸ್ಕೂಟರ್‌ಗಳಿಗೆ ಕಠಿಣ ಪೈಪೋಟಿ ನೀಡಲಿದೆ.


ಇದನ್ನೂ ಓದಿ-ಸರ್ಕಾರದ ಒತ್ತಡಕ್ಕೆ ಮಣಿದ Google, Playstore ಮರಳಿದ Bharat Matrimony ಸೇರಿದಂತೆ ಭಾರತದ ಜನಪ್ರಿಯ ಆಪ್ ಗಳು!


ಹೀರೋ ಮೇವರಿಕ್ 440 ವಿವರಗಳು
ಹೀರೋ ಕಳೆದ ತಿಂಗಳು ಫೆಬ್ರವರಿಯಲ್ಲಿ ಹೀರೋ ಮೇವರಿಕ್ 440 ಅನ್ನು ಪರಿಚಯಿಸಿತ್ತು. ಈ ಬೈಕು H-ಆಕಾರದ DRL ಜೊತೆಗೆ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಹೊಂದಿದೆ. ಇದು ಸಿಂಗಲ್ ಸೀಟ್ ಹೊಂದಿದೆ. ಬೈಕು ಫೋನ್ ಸಂಪರ್ಕದೊಂದಿಗೆ ಡಿಜಿಟಲ್ ಕನ್ಸೋಲ್ ಅನ್ನು ಹೊಂದಿದೆ. ಇದು ಬಲವಾದ ಸಸ್ಪೆನ್ಷನ್ ಮತ್ತು ಡಿಸ್ಕ್ ಬ್ರೇಕ್ಗಳನ್ನು ಸಹ ಹೊಂದಿದೆ.


ಇದನ್ನೂ ಓದಿ-WhatsApp ನಲ್ಲಿ ಇನ್ಮುಂದೆ ನೀವು ಥರ್ಡ್ ಪಾರ್ಟಿ ಚಾಟ್ ಗಳನ್ನು ನಿರ್ವಹಿಸಬಹುದು, ಬರಲಿದೆ ಹೊಸ ವೈಶಿಷ್ಯ!


ಹೀರೋ ಮೇವರಿಕ್ ಬೈಕ್‌ನ (Hero Mevarik 440) ಇಂಧನ ಟ್ಯಾಂಕ್ ಸಾಮರ್ಥ್ಯ 17 ಲೀಟರ್ ಆಗಿದೆ. ಇದು 440cc ಏರ್/ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಅನ್ನು ಹೊಂದಿದೆ. ಇದು 6000 rpm ನಲ್ಲಿ 26hp ಪವರ್ ಮತ್ತು 4,000rpm ನಲ್ಲಿ 36Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 6-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಈ ಬೈಕ್‌ನ ಆರಂಭಿಕ ಬೆಲೆಯನ್ನು 1.99 ಲಕ್ಷ ರೂ.ಗಳಿಗೆ ಇರಿಸಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.