16 ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಸಿಗುತ್ತಿದೆ ಸ್ಮಾರ್ಟ್ ಫೋನ್ ! Flipkartನಲ್ಲಿ ಭರ್ಜರಿ Offers
Flipkart Big Saving Days sale ಆರಂಭವಾಗಿದೆ.ಐಫೋನ್ 15 ಅನ್ನು ಹೇಗೆ ಅಗ್ಗವಾಗಿ ಖರೀದಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
Flipkart Big Saving Days sale ಆರಂಭವಾಗಿದೆ. Samsung, OPPO ಹೀಗೆ ಅನೇಕ ಕಂಪನಿಗಳ ಫೋನ್‌ಗಳ ಮೇಲೆ ರಿಯಾಯಿತಿ ನೀಡಲಾಗಿದೆ. ಈ ಸೇಲ್ ಪ್ರಾರಂಭವಾದ ತಕ್ಷಣ, ಫ್ಲಿಪ್‌ಕಾರ್ಟ್ ಹೊಸ ಐಫೋನ್, ಐಫೋನ್ 15 ಅನ್ನು ಕೂಡಾ ಡೀಲ್ ನಲ್ಲಿ ಸೇರಿಸಿದೆ. ಬ್ಯಾಂಕ್ ಆಫರ್ ಒಳಗೊಂಡಂತೆ ಇದರ ಬೆಲೆ 65,000 ರೂ.ಗಿಂತ ಅಗ್ಗವಾಗುತ್ತದೆ. ಐಫೋನ್ 15 ಅನ್ನು ಹೇಗೆ ಅಗ್ಗವಾಗಿ ಖರೀದಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 ಡೀಲ್ :
ಸೇಲ್ ನಲ್ಲಿ ಐಫೋನ್ 15 ನಲ್ಲಿ ಭಾರಿ ರಿಯಾಯಿತಿ ನೀಡಲಾಗಿದೆ. ಇದರ ಆರಂಭಿಕ ಬೆಲೆ79,990 ರೂಪಾಯಿ.ಆದರೆ ಈಗ Flipkart ಇದನ್ನು ಕೇವಲ 63,999 ಮಾರಾಟ ಮಾಡುತ್ತಿದೆ.ಅಂದರೆ ಈ ಫೋನ್ ಮೇಲೆ 16,000 ರೂಪಾಯಿಗಳ ರಿಯಾಯಿತಿ ನೀಡಲಾಗುವುದು.ಇದಲ್ಲದೇ, ಫ್ಲಿಪ್‌ಕಾರ್ಟ್ EMI ಮೂಲಕ ಖರೀದಿಸುವುದಾದರೆ 10% ದಷ್ಟು ಹೆಚ್ಚಿನ ರಿಯಾಯಿತಿ ಸಿಗುತ್ತಿದೆ. ಹೀಗಾಗಿ ಈ ಫೋನ್ ಬೆಲೆ 61,749 ರೂ.ಗೆ ಇಳಿಯಲಿದೆ.EMIನಲ್ಲಿ ಈ ಫೋನ್ ಖರೀದಿಸುವುದಾದರೆ 15% ಬಡ್ಡಿ ವಿಧಿಸಲಾಗುತ್ತದೆ.ಐಫೋನ್ 15 ಕಪ್ಪು, ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ : BSNL 4G Services: ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಗುಡ್ ನ್ಯೂಸ್, ಈ ದಿನದಿಂದ ಸಿಗಲಿದೆ 4G ಸೇವೆ
ಐಫೋನ್ 15 ಬಗ್ಗೆ ವಿಶೇಷತೆ :
iPhone 14 ಗಿಂತ iPhone 15 ಉತ್ತಮವಾಗಿದೆ.ಇದು ದುಬಾರಿ ಎಂದೆನೆಸಿದರೂ ಹೊಸ ವೈಶಿಷ್ಟ್ಯಗಳು ಅದನ್ನು ಸರಿದೂಗಿಸುತ್ತದೆ.ದೊಡ್ಡ ಬದಲಾವಣೆಯೆಂದರೆ ಡೈನಾಮಿಕ್ ಐಲ್ಯಾಂಡ್. ಇದು ಮೊದಲು ಐಫೋನ್ 14 ಪ್ರೊ ಮಾದರಿಗಳಲ್ಲಿ ಮಾತ್ರ ಲಭ್ಯವಿತ್ತು.ಬೇರೆ ಬೇರೆ ನೋಟಿಫಿಕೆಶನ್ ಗಳ ಆಧಾರದ ಮೇಲೆ ಅದರ ಗಾತ್ರವನ್ನು ಬದಲಾಯಿಸುವ ವಿಶೇಷ ನಾಚ್ ಆಗಿದೆ. ಇದು ಫೋನ್‌ಗೆ ಹೊಸ ಲುಕ್ ನೀಡುತ್ತದೆ.
ಐಫೋನ್ 15 ಕ್ಯಾಮೆರಾ :
ಐಫೋನ್ 15 A16 ಬಯೋನಿಕ್ ಚಿಪ್ ಅನ್ನು ಹೊಂದಿದೆ.ಈ ಮೂಲಕ ಯಾವುದೇ ಕೆಲಸವನ್ನು ಸುಲಭವಾಗಿ ಮಾಡುವುದು ಸಾಧ್ಯವಾಗುತ್ತದೆ.ಹೆಚ್ಚು ಗ್ರಾಫಿಕ್ಸ್ ಹೊಂದಿರುವ ಗೇಮ್ ಗಳನ್ನೂ ಕೂಡಾ ಸುಲಭವಾಗಿ ಆಡಬಹುದು. ಅಲ್ಲದೆ,ಇದು 12MP ಸೆನ್ಸರ್ ಸ್ಥಳದಲ್ಲಿ ಹೊಸ 48MP ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ : Online Aadhar Service:ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಏನು ಮಾಡಬೇಕು? ಹೊಸ ಆಧಾರ್ ಕೈ ಸೇರಲು ಎಷ್ಟು ದಿನ ಬೇಕು ?
ಐಫೋನ್ 15 ನ ಸ್ಕ್ರೀನ್ 60Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ.ಇದು ಇಂದಿನ ಸಮಯದಲ್ಲಿ ಸ್ವಲ್ಪ ಹಳೆಯ ತಂತ್ರಜ್ಞಾನವಾಗಿದೆ.ಮತ್ತೊಂದೆಡೆ,120Hz ರಿಫ್ರೆಶ್ ದರದೊಂದಿಗೆ ಡಿಸ್ಪ್ಲೇಗಳು Android ಫೋನ್‌ಗಳಲ್ಲಿ ಲಭ್ಯವಿದೆ. ಒಂದು ವೇಳೆ ನಿಮಗೆ iPhone 15 ಖರೀದಿಸುವುದು ಇಷ್ಟವಿಲ್ಲ ಎಂದಾದರೆ Qualcomm Snapdragon 8 Gen 3 ಚಿಪ್‌ಸೆಟ್ ಹೊಂದಿರುವ OnePlus 12 ಮತ್ತು iQOO 12 ಫೋನ್‌ಗಳನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.