OLA ಸ್ಕೂಟರ್ ಗೆ ಟಕ್ಕರ್ ಕೊಡಲು ಮಾರುಕಟ್ಟೆಗೆ ಬಂತು ಹೋಂಡಾ ಆಕ್ಟಿವಾ E ಮತ್ತು QC1 ಎಲೆಕ್ಟ್ರಿಕ್ ಸ್ಕೂಟರ್!
ಹೋಂಡಾ ಆಕ್ಟಿವಾದ ಎರಡು ಎಲೆಕ್ಟ್ರಾನಿಕ್ ಸ್ಕೂಟರ್ ಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಎರಡೂ ಎಲೆಕ್ಟ್ರಿಕ್ ಸ್ಕೂಟರ್ಗಳು ತುಂಬಾ ಶಕ್ತಿಯುತವಾಗಿ ಕಾಣುತ್ತವೆ.
ಬೆಂಗಳೂರು : ಹೋಂಡಾ ಆಕ್ಟಿವಾದ ಯಾವ ಎರಡು ದ್ವಿಚಕ್ರ ವಾಹನಗಳಿಗಾಗಿ ಜನರು ಕಾತರದಿಂದ ಕಾಯುತ್ತಿದ್ದರೋ ಆ ಎರಡೂ ಸ್ಕೂಟರ್ ಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಕಂಪನಿಯು ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಷ್ಟೇ ಅಲ್ಲ, ಕಂಪನಿಯು ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಎರಡೂ ಎಲೆಕ್ಟ್ರಿಕ್ ಸ್ಕೂಟರ್ಗಳು ತುಂಬಾ ಶಕ್ತಿಯುತವಾಗಿ ಕಾಣುತ್ತವೆ.
ಇತರ ಸ್ಕೂಟರ್ ಗಳಿಗಿಂತ ಭಿನ್ನ :
ಮಾರುಕಟ್ಟೆಯಲ್ಲಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ಗಳಿಗಿಂತ ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಭಿನ್ನವಾಗಿಸುವ ಎಲ್ಲಾ ಪ್ರಯತ್ನವನ್ನು ಕಂಪನಿ ಮಾಡಿದೆ. ಹೋಂಡಾ ಆಕ್ಟಿವಾ ಇ ಅನ್ನು ಸ್ವಾಪ್ ಮಾಡಬಹುದಾದ ಬ್ಯಾಟರಿ ಸೆಟಪ್ನೊಂದಿಗೆ ಬಿಡುಗಡೆ ಮಾಡಲಾಗಿದೆ. ಕ್ಯೂಸಿ 1 ಅನ್ನು ಸ್ಥಿರ ಬ್ಯಾಟರಿಯೊಂದಿಗೆ ಪರಿಚಯಿಸಲಾಗಿದೆ.
ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಕೋಲಾಹಲ ಸೃಷ್ಟಿಸಿದ Realmeಯ 16GB RAM, 512GB ಸ್ಟೋರೇಜ್ ಹೊಂದಿರುವ ಪ್ರಬಲ ಫೋನ್!
ಈ ನಗರಗಳಲ್ಲಿ ಮಾರಾಟ :
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಫೆಬ್ರವರಿ 2025 ರಿಂದ ಮೂರು ಪ್ರಮುಖ ಭಾರತೀಯ ನಗರಗಳಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಅಂದರೆ ಮೊದಲ ಹಂತದಲ್ಲಿ ಈ ಸ್ಕೂಟರ್ ಬೆಂಗಳೂರು, NCT ದೆಹಲಿ ಮತ್ತು ಮುಂಬೈನಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.
ಜನವರಿಯಿಂದ ಬುಕಿಂಗ್ ಆರಂಭ :
ಬುಕಿಂಗ್ ಜನವರಿ 2025 ರಲ್ಲಿ ಪ್ರಾರಂಭವಾಗುತ್ತದೆ. ಹೋಂಡಾ ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿ ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ ಬಳಸಿ ಹೋಂಡಾ ಇ: ಸ್ವಾಪ್ ಬ್ಯಾಟರಿ ಹಂಚಿಕೆ ಸೇವೆಯನ್ನು ನೀಡುತ್ತದೆ. ಭಾರತೀಯ ಮಾರುಕಟ್ಟೆಗೆ ನಿರ್ದಿಷ್ಟವಾಗಿ ಮಾದರಿಯನ್ನು ಪರಿಚಯಿಸುತ್ತಿದೆ ಎಂದು ಹೋಂಡಾ ಹೇಳಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ