Honda SP 160 Price & Launch : ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಭಾರತದಲ್ಲಿ ಹೊಸ SP 160 ಅನ್ನು ಬಿಡುಗಡೆ ಮಾಡಿದೆ.  1.17 ಲಕ್ಷ ರೂಪಾಯಿಯ ಆರಂಭಿಕ ಬೆಲೆಯಲ್ಲಿ ಈ ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ. ಬೈಕ್ ಸಿಂಗಲ್ ಡಿಸ್ಕ್ ಮತ್ತು ಟ್ವಿನ್ ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಟ್ವಿನ್ ಡಿಸ್ಕ್ ರೂಪಾಂತರದ ಬೆಲೆ  1.22 ಲಕ್ಷ ರೂಪಾಯಿಗಳು. ಈ ತಿಂಗಳ ಕೊನೆಯಲ್ಲಿ  ಈ ಬೈಕ್ ನ ವಿತರಣೆ ಆರಂಭವಾಗಲಿದೆ. 


COMMERCIAL BREAK
SCROLL TO CONTINUE READING

SP 160 ಮೂಲತಃ SP 125 ರ ಫೇಸ್‌ಲಿಫ್ಟೆಡ್ ಮತ್ತು ದೊಡ್ಡ ಎಂಜಿನ್ ಆವೃತ್ತಿಯಾಗಿದೆ. ಇದು ಒಂದೇ ರೀತಿಯ ಬಾಡಿ ಪ್ಯಾನೆಲ್‌ಗಳು, ವಿ-ಆಕಾರದ ಎಲ್‌ಇಡಿ ಹೆಡ್‌ಲೈಟ್, ಅಗಲವಾದ ಟ್ಯಾಂಕ್, ಹೈ ಟೈಲ್ ಸೆಕ್ಷನ್‌ನೊಂದಿಗೆ ಸಿಂಗಲ್-ಪೀಸ್ ಸೀಟ್, ಸಿಂಗಲ್ ಗ್ರಾಬ್ ರೈಲ್, ಸೈಡ್-ಸ್ಲಂಗ್ ಎಕ್ಸಾಸ್ಟ್ ಮಫ್ಲರ್ ಜೊತೆಗೆ ಕ್ರೋಮ್ ಶೀಲ್ಡ್, ಹೀಗೆ ಒಂದೇ ರೀತಿಯ ವಿನ್ಯಾಸವನ್ನು ಹೊಂದಿದೆ. 


ಇದನ್ನೂ ಓದಿ : Indian Railways ಸಾಮಾನ್ಯ ಟಿಕೆಟ್ ನಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವವರಿಗೊಂದು ಸಂತಸದ ಸುದ್ದಿ !


ಹೋಂಡಾ ಹೊಸ SP 160 ಅನ್ನು 6 ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುತ್ತಿದೆ. ಅವುಗಳೆಂದರೆ - ಮ್ಯಾಟ್ ಡಾರ್ಕ್ ಬ್ಲೂ ಮೆಟಾಲಿಕ್, ಪರ್ಲ್ ಸ್ಪಾರ್ಟನ್ ರೆಡ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಇಗ್ನೈಟ್ ಬ್ಲಾಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಮತ್ತು ಪರ್ಲ್ ಡೀಪ್ ಗ್ರೌಂಡ್ ಗ್ರೇ. 


ಹೋಂಡಾ SP 160 ಎಂಜಿನ್ :
SP 160 162.7 cc ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಅದು 7,500 rpm ನಲ್ಲಿ 13.46 
Bhp ಮತ್ತು 14.58 Nm ಅನ್ನು ಜನರೆಟ್ ಮಾಡುತ್ತದೆ. ಯೂನಿಕಾರ್ನ್‌ಗೆ ಹೋಲಿಸಿದರೆ ಹೆಚ್ಚಿನ  ಹಾರ್ಸ್ ಪವರ್  ಮತ್ತು 0.5 Nm  ಜನರೆಟ್ ಮಾಡಲು ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ. 5-ಸ್ಪೀಡ್ ಗೇರ್ ಬಾಕ್ಸ್ ಮೂಲಕ ಹಿಂದಿನ ಚಕ್ರಕ್ಕೆ ಶಕ್ತಿಯನ್ನು ಕಳುಹಿಸಲಾಗುತ್ತದೆ.


ಇದನ್ನೂ ಓದಿ : Flipkartನಲ್ಲಿ ಭಾರೀ ಆಫರ್ ! 7 Kg ವಾಷಿಂಗ್ ಮೆಷಿನ್ ಬೆಲೆ ಕೇವಲ 4,790 ರೂಪಾಯಿ


ಇದು ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ P150 ಮತ್ತು TVS ಅಪಾಚೆ RTR 160 ವಿರುದ್ಧ ಸ್ಪರ್ಧಿಸಲಿದೆ. ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ನೊಂದಿಗೆ ಬರುತ್ತದೆ. ಇದರ  ಟಾಪ್ ರೂಪಾಂತರವು 276 ಎಂಎಂ ಫ್ರಂಟ್ ಡಿಸ್ಕ್ ಮತ್ತು ಬ್ರೇಕಿಂಗ್ ಗಾಗಿ 220 ಎಂಎಂ  ರಿಯರ್ ಡಿಸ್ಕ್ ಅನ್ನು ಹೊಂದಿದೆ. 


ಬೈಕ್ ಸಿಂಗಲ್ ಚಾನೆಲ್ ABS ನೊಂದಿಗೆ ಬರುತ್ತದೆ. 17 ಇಂಚಿನ  ಅಲಾಯ್ ವ್ಹಿಲ್ ಗಳನ್ನು ನೀಡಲಾಗಿದೆ.  80/100 ಫ್ರಂಟ್  ಮತ್ತು 130/70 ರಿಯರ್ MRF ನೈಲೋಗ್ರಿಪ್ ಟೈರ್‌ಗಳನ್ನು ಅಳವಡಿಸಲಾಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ