ಅಂಧರು ಸ್ಮಾರ್ಟ್‌ಫೋನ್ ಬಳಕೆ ಮಾಡೋದು ಹೇಗೆ? ಅವರಿಗೆ ಸಹಾಯ ಮಾಡುವ ಆಪ್ ಯಾವುದು?
how blind people use mobile: ಸ್ಮಾರ್ಟ್ ಫೋನ್ ಬಳಸಲು ದೃಷ್ಟಿ ಇರುವುದು ಎಷ್ಟು ಮುಖ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. ದೃಷ್ಟಿ ಕಡಿಮೆ ಇರುವವರು ಅಥವಾ ನೋಡಲು ಸಾಧ್ಯವಾಗದ ಜನರು ಸ್ಮಾರ್ಟ್‌ಫೋನ್ ಬಳಸುವುದು ತುಂಬಾ ಕಷ್ಟಕರವಾಗಿರುತ್ತದೆ.
how blind people use mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸ್ಮಾರ್ಟ್ ಫೋನ್ʼಗಳ ಪ್ರಾಮುಖ್ಯತೆ ಸಾಕಷ್ಟು ಹೆಚ್ಚಾಗಿದೆ. ಇದು ಪರಸ್ಪರ ಮಾತನಾಡುವ ಸಾಧನ ಮಾತ್ರವಲ್ಲ, ಮನರಂಜನೆ, ಬ್ಯಾಂಕಿಂಗ್, ಶಾಪಿಂಗ್ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸುತ್ತದೆ. ಆದರೆ, ಈ ತಂತ್ರಜ್ಞಾನದ ಬಳಕೆ ಕಣ್ಣಿಲ್ಲದ ಜನರಿಗೆ ಕೊಂಚ ಕಷ್ಟ. ಆದರೆ ಹೊಸ ಆ್ಯಪ್ʼಗಳು ಮತ್ತು ತಾಂತ್ರಿಕ ಆವಿಷ್ಕಾರಗಳು ಕುರುಡರೂ ಸಹ ಮೊಬೈಲ್ ಬಳಕೆ ಮಾಡುವಂತೆ ಮಾಡಿದೆ. ದೃಷ್ಟಿ ಕಡಿಮೆ ಇರುವವರಿಗೆ ಸ್ಮಾರ್ಟ್‌ಫೋನ್ʼಗಳ ಬಳಕೆಯನ್ನು ಸುಲಭಗೊಳಿಸುವಲ್ಲಿ ಹಲವು ಆ್ಯಪ್ʼಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ಇದನ್ನೂ ಓದಿ: ಮೈಸೂರು ಚಲೋ ಪಾದಯಾತ್ರೆಯಲ್ಲಿ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಸ್ಪಷ್ಟ ಸಂದೇಶ
ಸ್ಮಾರ್ಟ್ ಫೋನ್ ಬಳಸಲು ದೃಷ್ಟಿ ಇರುವುದು ಎಷ್ಟು ಮುಖ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. ದೃಷ್ಟಿ ಕಡಿಮೆ ಇರುವವರು ಅಥವಾ ನೋಡಲು ಸಾಧ್ಯವಾಗದ ಜನರು ಸ್ಮಾರ್ಟ್‌ಫೋನ್ ಬಳಸುವುದು ತುಂಬಾ ಕಷ್ಟಕರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ತಂತ್ರಜ್ಞಾನಗಳು ಮತ್ತು ಅಪ್ಲಿಕೇಶನ್ʼಗಳ ಸಹಾಯದಿಂದ ಏನನ್ನೂ ನೋಡದವರೂ ಸಹ ಸ್ಮಾರ್ಟ್‌ಫೋನ್ʼಗಳನ್ನು ಬಳಸಬಹುದು.
ಸ್ಕ್ರೀನ್ ರೀಡರ್ ಅಪ್ಲಿಕೇಶನ್ʼಗಳು
ಏನನ್ನೂ ನೋಡಲು ಸಾಧ್ಯವಾಗದ ಜನರಿಗೆ ಸ್ಕ್ರೀನ್ ರೀಡರ್ ಅಪ್ಲಿಕೇಶನ್ʼಗಳು ತುಂಬಾ ಉಪಯುಕ್ತವಾಗುತ್ತವೆ. ಈ ಅಪ್ಲಿಕೇಶನ್ʼಗಳು ಸ್ಮಾರ್ಟ್‌ಫೋನ್ ಪರದೆಯಲ್ಲಿನ ಪಠ್ಯವನ್ನು ಶ್ರವ್ಯ ಧ್ವನಿಯಾಗಿ ಪರಿವರ್ತಿಸುತ್ತವೆ. ಇವುಗಳೊಂದಿಗೆ, ಅಂಧ ಬಳಕೆದಾರರು ಸ್ಮಾರ್ಟ್‌ಫೋನ್ʼನಲ್ಲಿ ವಿವಿಧ ವಿಷಯಗಳನ್ನು ಸುಲಭವಾಗಿ ಗುರುತಿಸಬಹುದು. ಈ ಅಪ್ಲಿಕೇಶನ್ʼಗಳು ಬಟನ್ʼಗಳು, ಮೆನುಗಳು ಮತ್ತು ಇತರ ವಿಷಯಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅಂಧರು ಪರದೆಯ ಮೇಲೆ ಬರೆದಿರುವ ಪಠ್ಯವನ್ನು ಕೇಳಿಸಿಕೊಳ್ಳುವ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತಾರೆ.
ನ್ಯಾವಿಗೇಷನ್ ಮತ್ತು ಆಡಿಯೊ ಮಾರ್ಗದರ್ಶಿ ಅಪ್ಲಿಕೇಶನ್ʼಗಳು
ಅಂಧರಿಗೆ ಎಲ್ಲೋ ಪ್ರಯಾಣ ಮಾಡುವುದು ಅಥವಾ ತಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಗುರುತಿಸುವುದು ದೊಡ್ಡ ಸವಾಲಾಗಿದೆ. ಆದರೆ ‘ಸೀಯಿಂಗ್ ಎಐ’ ಮತ್ತು ‘ಬಿ ಮೈ ಐಸ್’ ನಂತಹ ಆ್ಯಪ್ʼಗಳು ಈ ಸಮಸ್ಯೆಗೆ ಪರಿಹಾರ ನೀಡುತ್ತವೆ. ಸೀಯಿಂಗ್ ಎಐ ಅಪ್ಲಿಕೇಶನ್, ಸುತ್ತಮುತ್ತಲಿನ ವಿಷಯಗಳನ್ನು ಮತ್ತು ಏನು ಬರೆಯಲಾಗಿದೆ ಎಂಬುದನ್ನು ಗುರುತಿಸುತ್ತದೆ. ಈ ಎಲ್ಲದರ ಬಗ್ಗೆ ಬಳಕೆದಾರರಿಗೆ ಧ್ವನಿಯ ಮೂಲಕ ಮಾಹಿತಿ ನೀಡುತ್ತದೆ. ಬಿ ಮೈ ಐಸ್ ಅಪ್ಲಿಕೇಶನ್ ವರ್ಚುವಲ್ ಅಸಿಸ್ಟೆಂಟ್ ಸೇವೆಯಾಗಿದ್ದು, ಇದರ ಮೂಲಕ ಅಂಧರು ತಮ್ಮ ಸುತ್ತಮುತ್ತಲಿನ ಜನರನ್ನು ಸಂಪರ್ಕಿಸಬಹುದು.
ವಾಯ್ಸ್ ಅಸಿಸ್ಟೆಂಟ್:
'ಗೂಗಲ್ ಅಸಿಸ್ಟೆಂಟ್' ಮತ್ತು 'ಸಿರಿ' ನಂತಹ ವಾಯ್ಸ್ ಅಸಿಸ್ಟೆಂಟ್ಸ್ ಕುರುಡು ಅಥವಾ ಕಡಿಮೆ ದೃಷ್ಟಿ ಹೊಂದಿರುವ ಜನರಿಗೆ ಸಹಾಯಕವಾಗಿದೆ. ಕರೆಗಳನ್ನು ಮಾಡುವುದು, ಸಂದೇಶಗಳನ್ನು ಕಳುಹಿಸುವುದು ಅಥವಾ ಅಪ್ಲಿಕೇಶನ್ʼಗಳನ್ನು ತೆರೆಯುವಂತಹ ಧ್ವನಿ ಆಜ್ಞೆಗಳ ಮೂಲಕ ಸ್ಮಾರ್ಟ್‌ಫೋನ್ʼನ ವಿವಿಧ ವಿಷಯಗಳನ್ನು ನಿಯಂತ್ರಿಸಲು ಇವು ಸಹಾಯ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ