Smartphone Tips: ಇತ್ತೀಚಿನ ದಿನಗಳಲ್ಲಿ ಜನರ ಜೀವನಾಡಿ ಆಗಿರುವ ಸ್ಮಾರ್ಟ್ಫೋನ್ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಮೊದ ಮೊದಲಿಗೆ ಸೆಲ್ಫಿ ಪ್ರಿಯರಲ್ಲಿ ಮಾತ್ರ ಹೆಚ್ಚು ಜನಪ್ರಿಯವಾಗಿದ್ದ ಸ್ಮಾರ್ಟ್ಫೋನ್ ಪ್ರಸ್ತುತ, ಫುಡ್ ಆರ್ಡರ್ ಮಾಡುವುದರಿಂದ ಹಿಡಿದು ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಲು, ಸೋಶಿಯಲ್ ಮೀಡಿಯಾ ಪರಿಶೀಲಿಸಲು, ಪೇಮೆಂಟ್ ಗಳಿಗಾಗಿ ಹೀಗೆ ಪ್ರತಿಯೊಂದಕ್ಕೂ ಸ್ಮಾರ್ಟ್ಫೋನ್ ಬೇಕೇ ಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಂತಹ ನಿಮ್ಮ ಸ್ಮಾರ್ಟ್ಫೋನ್ ದೀರ್ಘಕಾಲದವರೆಗೆ ಬಾಳಿಕೆ ಬರಬೇಕು ಎಂದು ನೀವು ಬಯಸಿದರೆ ಅದಕ್ಕಾಗಿ ಕೆಲವು ಸಲಹೆಗಳನ್ನು ಅನುಸರಿಸುವುದು ತುಂಬಾ ಅಗತ್ಯ. 


COMMERCIAL BREAK
SCROLL TO CONTINUE READING

ಹೌದು, ನಾವು ಸ್ಮಾರ್ಟ್ಫೋನ್ ಚೆನ್ನಾಗಿ ದೀರ್ಘ ಸಮಯದವರೆಗೆ ಬಾಳಿಕೆ ಬರಬೇಕು ಎಂದು ನೀವು ಬಯಸುವುದಾದರೆ ಅದಕ್ಕಾಗಿ ಕೆಲವು ಟಿಪ್ಸ್ ಅನ್ನು ಅನುಸರಿಸುವುದು ಬಹಳ ಮುಖ್ಯ. ಅದರಲ್ಲಿ ಆಗಾಗ್ಗೆ ಫೋನ್ ರೀಸ್ಟಾರ್ಟ್ ಮಾಡುವುದು ಕೂಡ ಸೇರಿದೆ. ಹಾಗಿದ್ದರೆ, ಸ್ಮಾರ್ಟ್ಫೋನ್ ಅನ್ನು ಎಷ್ಟು ದಿನಗಳಿಗೊಮ್ಮೆ ರೀಸ್ಟಾರ್ಟ್ ಮಾಡಬೇಕು? ಇದರಿಂದ ಏನು ಪ್ರಯೋಜನ ಎಂದು ತಿಳಿಯೋಣ... 


ಇದನ್ನೂ ಓದಿ- ಭವಿಷ್ಯದಲ್ಲಿ ನಿಮಗಾಗುವ ಕಾಯಿಲೆಯ ಬಗ್ಗೆ ಮಾಹಿತಿ ನೀಡಲಿದೆ ಪಿನ್ ಕೋಡ್! ಅದ್ಹೇಗೆ ಸಾಧ್ಯ?


ಸ್ಮಾರ್ಟ್ಫೋನ್ ರೀಸ್ಟಾರ್ಟ್ ಮಾಡುವುದರ ಪ್ರಯೋಜನಗಳೇನು? 
ಸ್ಮಾರ್ಟ್ಫೋನ್ ಅನ್ನು ಆಗಾಗ್ಗೆ ರೀಸ್ಟಾರ್ಟ್ ಮಾಡುವುದರಿಂದ ಬಹಳಷ್ಟು ಪ್ರಯೋಜನಗಳು ಲಭ್ಯವಿವೆ. 
* ನಿಮ್ಮ ಫೋನ್ ಅನ್ನು ನೀವು ರೀಸ್ಟಾರ್ಟ್ ಮಾಡಿದಾಗ ಅದಕ್ಕೂ ಒಂದು ರಿಫ್ರೇಶ್ ಸಿಕ್ಕಂತಾಗುತ್ತದೆ. 
* ನಿಮ್ಮ ಸ್ಮಾರ್ಟ್ಫೋನ್ ಅನ್ನು ಆಗಾಗ್ಗೆ ರೀಸ್ಟಾರ್ಟ್ ಮಾಡುವುದರಿಂದ ಫೋನ್ ದೀರ್ಘಕಾಲದವರೆಗೆ ಸುಗಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. 
* ಇದು ನಿಮ್ಮ ಫೋನ್‌ನ ಮೆಮೊರಿ ಮತ್ತು ಪ್ರೊಸೆಸರ್ ಅನ್ನು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ.
* ಸ್ಮಾರ್ಟ್ಫೋನ್ ಅನ್ನು ರೀಸ್ಟಾರ್ಟ್ ಮಾಡುವುದರಿಂದ ಇದು ಫೋನ್ ಆಗಾಗ್ಗೆ ಸ್ಲೊ ಆಗುವುದು ಅಥವಾ ಹ್ಯಾಂಗ್ ಆಗುವ ಸಾಧ್ಯತೆ ಅನ್ನೂ ಕೂಡ ಕಡಿಮೆ ಮಾಡಬಹುದು. 


ಇದನ್ನೂ ಓದಿ- ಹಾಳಾದ TV, AC ರಿಮೋಟ್‌ ನಿಮಿಷದಲ್ಲೇ ಸರಿಯಾಗುತ್ತೆ, ಈ ಸಣ್ಣ ಟ್ರಿಕ್ ಸಾವಿರಾರು ರೂಪಾಯಿ ಉಳಿಸುತ್ತೆ!


ಸ್ಮಾರ್ಟ್ಫೋನ್ ಅನ್ನು ಎಷ್ಟು ದಿನಗಳಿಗೊಮ್ಮೆ ರೀಸ್ಟಾರ್ಟ್ ಮಾಡಬೇಕು?
ಆಗಾಗ್ಗೆ ಸ್ಮಾರ್ಟ್ಫೋನ್ ರೀಸ್ಟಾರ್ಟ್ ಮಾಡುವುದರಿಂದ ಬಹಳಷ್ಟು ಲಾಭವೇನೋ ಸಿಗುತ್ತೆ. ಆದರೆ, ಅದನ್ನು ಎಷ್ಟು ದಿನಗಳಿಗೊಮ್ಮೆ ರೀಸ್ಟಾರ್ಟ್ ಮಾಡಬೇಕು ಎಂಬ ಬಗ್ಗೆಯೂ ತಿಳಿದಿರಬೇಕು. ಟೆಕ್ ತಜ್ಞರ ಪ್ರಕಾರ, ಸ್ಮಾರ್ಟ್ಫೋನ್‌ಗಳನ್ನು ವಾರಕ್ಕೆ ಕನಿಷ್ಠ ಮೂರು ಬಾರಿ ಆದರೂ ರೀಸ್ಟಾರ್ಟ್ ಮಾಡುವುದರಿಂದ ಇದು ಫೋನ್‌ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಫೋನ್ ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.