ಬೆಂಗಳೂರು: ಮೊದಲೆಲ್ಲಾ ವಾಚ್, ಕೈಗಡಿಯಾರ ಎಂದರೆ ಸಮಯ ತಿಳಿಸುವ ಒಂದು ಸರಳ ಸಾಧನವಾಗಿತ್ತು. ಆದರೆ, ಪ್ರಸ್ತುತ ಈ ಡಿಜಿಟಲ್ ಯುಗದಲ್ಲಿ ಜನರಲ್ಲಿ  ಸ್ಮಾರ್ಟ್‌ವಾಚ್‌ ಕ್ರೇಜ್ ಹೆಚ್ಚಾಗಿದೆ.  ಒಂದು ವಾಕ್ಯದಲ್ಲಿ ಹೇಳುವುದಾದರೆ, ಗಡಿಯಾರವು ಮೈಕ್ರೊಪ್ರೊಸೆಸರ್ ಅನ್ನು ಹೊಂದಿದ್ದಲ್ಲಿ ಅದನ್ನು ಸ್ಮಾರ್ಟ್ ವಾಚ್ ಎಂದು ಕರೆಯಬಹುದು. ಈ ಗಡಿಯಾರಗಳು ತಮ್ಮ ಬಳಕೆದಾರರ ಹೃದಯ ಬಡಿತದಿಂದ ಅವರ ನಿದ್ರೆಯ ಚಕ್ರಗಳವರೆಗೆ ಪ್ರತಿಯೊಂದನ್ನೂ ಮೇಲ್ವಿಚಾರಣೆ ಮಾಡಲು ಅನುಮತಿಸುವ ಸಂವೇದಕಗಳ ಶ್ರೇಣಿಯೊಂದಿಗೆ ಬರುತ್ತವೆ. 


COMMERCIAL BREAK
SCROLL TO CONTINUE READING

ಡಿಜಿಟಲ್ ಸ್ಮಾರ್ಟ್ ವಾಚ್ ಅನ್ನು ಒಮ್ಮುಖಕ್ಕೆ ಪರಿಪೂರ್ಣ ಉದಾಹರಣೆಯಾಗಿ ಉಲ್ಲೇಖಿಸಬಹುದು. ಅದು ಬಳಕೆದಾರರಿಗೆ ತಮ್ಮ ಜೀವನದ ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ.  ಪ್ರಮುಖವಾಗಿ ಮೂರು ಬಗೆಯ ಸ್ಮಾರ್ಟ್‌ವಾಚ್‌ಗಳನ್ನು ಕಾಣಬಹುದು. ಅವು ಯಾವುವು, ಅವುಗಳ ವಿಶೇಷತೆ ಎಂದು ಎಂದು ತಿಳಿಯೋಣ.


ಇದನ್ನೂ ಓದಿ- ವಿದ್ಯುತ್ ಇಲ್ಲದೆ ತಂಪಾದ ಗಾಳಿ ನೀಡುತ್ತೆ ಈ ಫ್ಯಾನ್, ಬೆಲೆಯೂ ಕಡಿಮೆ


ಮೂರು ಬಗೆಯ ಸ್ಮಾರ್ಟ್‌ವಾಚ್‌ಗಳೆಂದರೆ:
>> ಸ್ಮಾರ್ಟ್‌ವಾಚ್ 
>> ಹೈಬ್ರಿಡ್ ಸ್ಮಾರ್ಟ್‌ವಾಚ್
>> ಫಿಟ್‌ನೆಸ್ ಟ್ರ್ಯಾಕರ್‌


ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳು: 
- ಕರೆ 
- ಸಮಯ ಮತ್ತು ದಿನಾಂಕ 
- ಸ್ಟಾಪ್‌ವಾಚ್ 
- ಸ್ಮಾರ್ಟ್ ಅಲಾರಂ
- ಸ್ಮಾರ್ಟ್ ಅಧಿಸೂಚನೆ 
- ಸಂದೇಶ ವಿಮರ್ಶಕ 
- ಸಕ್ರಿಯ ಟ್ರ್ಯಾಕರ್ 
- ಹೃದಯ ಬಡಿತ ಮೇಲ್ವಿಚಾರಣೆ 
- ಬ್ಲೂಟೂತ್ 
- ಸ್ಲೀಪ್ 
- ಸಂಗೀತ ನಿಯಂತ್ರಣ 
- ಕ್ಯಾಮೆರಾ ನಿಯಂತ್ರಣ 


ಹೈಬ್ರಿಡ್ ಸ್ಮಾರ್ಟ್‌ವಾಚ್ ವಿಶೇಷತೆಗಳು:
ಹೈಬ್ರಿಡ್ ಸ್ಮಾರ್ಟ್‌ವಾಚ್‌ ಸ್ಮಾರ್ಟ್ ಫಂಕ್ಷನ್‌ಗಳೊಂದಿಗೆ ಕಾರ್ಯ ನಿರ್ವಹಿಸುವ ಅನಲಾಗ್ ವಾಚ್ ಆಗಿದೆ. ಎಲ್ಲಾ ರೀತಿಯ ಉಪಯುಕ್ತ ಕಾರ್ಯಚಟುವಟಿಕೆಗಳು ಹೈಬ್ರಿಡ್ ವಾಚ್‌ನ ಸಾಂಪ್ರದಾಯಿಕ ನೋಟವನ್ನು ಮರೆಮಾಡುತ್ತವೆ. ಈ ಹೈಬ್ರಿಡ್ ಸ್ಮಾರ್ಟ್‌ವಾಚ್‌ನಲ್ಲಿ ಫೋನ್ ಕರೆಗಳು, ಸಂದೇಶಗಳಂತಹ ಅಧಿಸೂಚನೆಗಳು ಕೂಡ ಲಭ್ಯವಾಗಲಿವೆ.
ಇದರ ಇತರ ವಿಶೇಷತೆಗಳೆಂದರೆ:-
* ಸಮಯ ಮತ್ತು ದಿನಾಂಕದ 
* ಸ್ಟಾಪ್‌ವಾಚ್ 
* ಸ್ಮಾರ್ಟ್ ಅಲಾರಂ 
* ಸ್ಮಾರ್ಟ್ ಅಧಿಸೂಚನೆ 
* ಸಂದೇಶ ವಿಮರ್ಶಕ 
* ಸಕ್ರಿಯ ಟ್ರ್ಯಾಕರ್ 
* ಕರೆ ಮಾಡುವ ವೈಶಿಷ್ಟ್ಯ 
* ಹೃದಯ ಬಡಿತದ ಮೇಲ್ವಿಚಾರಣೆ 
* ಬ್ಲೂಟೂತ್ 
* ಸ್ಲೀಪ್ ಮಾನಿಟರ್
* ಸಂಗೀತ ನಿಯಂತ್ರಣ 
* ಕ್ಯಾಮೆರಾ ನಿಯಂತ್ರಣ 
* ಕ್ಲೌಡ್ ಸಂಪರ್ಕಿತ ಸೌಲಭ್ಯಗಳು ಲಭ್ಯವಾಗಲಿವೆ. 


ಇದನ್ನೂ ಓದಿ- ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಇಂದೇ ಮನೆಗೆ ತನ್ನಿ ಎಲ್ಪಿಜಿ ಗ್ಯಾಸ್ ಡಿಟೆಕ್ಟರ್


ಫಿಟ್‌ನೆಸ್ ಟ್ರ್ಯಾಕರ್‌:
ಫಿಟ್‌ನೆಸ್ ಟ್ರ್ಯಾಕರ್‌ ವ್ಯಕ್ತಿಯ ದೈನಂದಿನ ದೈಹಿಕ ಚಟುವಟಿಕೆಯನ್ನು ದಾಖಲಿಸುವ ಕಂಪ್ಯೂಟರ್ ಅಪ್ಲಿಕೇಶನ್, ಜೊತೆಗೆ ಅವರ ಫಿಟ್‌ನೆಸ್ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಇತರ ಡೇಟಾಗಳನ್ನು ಕಲೆ ಹಾಕುವ ವಾಚ್ ಆಗಿದೆ. ಉದಾಹರಣೆಗೆ ಫಿಟ್‌ನೆಸ್ ಟ್ರ್ಯಾಕರ್‌ ವ್ಯಕ್ತಿ ಎಷ್ಟು ದೂರ ಕ್ರಮಿಸಿದರು. ಎಷ್ಟು ಕ್ಯಾಲೋರಿಗಳು ಕರಗಿವೆ, ಹೃದಯ ಬಡಿತ, ಸ್ಲೀಪ್ ಮಾನಿಟರ್, ಪಠ್ಯ ಸಂದೇಶ ಕಳುಹಿಸುವಿಕೆಯಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.