ನಿಲ್ಲಿಸಿದ ಕಾರಿನಲ್ಲಿ AC ಹಾಕಿದ್ರೆ 1 ಗಂಟೆಯಲ್ಲಿ ಎಷ್ಟು ಇಂಧನ ಖರ್ಚಾಗುತ್ತೆ? ಮೈಲೇಜ್’ನಲ್ಲೂ ಇಳಿಕೆಯಾಗುತ್ತಾ?
Car AC Facts: ಎಸಿಯ ಕಂಪ್ರೆಸರ್ ನ್ನು ಬೆಲ್ಟ್ ಮೂಲಕ ಎಂಜಿನ್‌ಗೆ ಸಂಪರ್ಕಿಸಲಾಗುತ್ತದೆ. ಅಂದರೆ, ಎಂಜಿನ್ ಚಾಲನೆಯಲ್ಲಿರುವಾಗ ಮಾತ್ರ ಕಾರಿನ ಎಸಿ ಕಾರ್ಯನಿರ್ವಹಿಸುತ್ತದೆ. ನೀವು AC ಅನ್ನು ಆನ್ ಮಾಡಿದಾಗ, ಎಂಜಿನ್ ಗೆ ಜೋಡಿಸಲಾದ ಬೆಲ್ಟ್ AC ಕಂಪ್ರೆಸರ್ ಅನ್ನು ತಿರುಗಿಸುತ್ತದೆ.
Car AC Facts: ಬೇಸಿಗೆಯ ಸಂದರ್ಭದಲ್ಲಿ ಕಾರಿನಲ್ಲಿ ಎಸಿ ಇಲ್ಲದೆ ಪ್ರಯಾಣಿಸುವುದು ತುಂಬಾ ಕಷ್ಟಕರ. ಬಿಸಿಲಿನ ಸುಡು ತಡೆಯಲಾಗದೆ ಕಾರು ಕೂಡ ತುಂಬಾ ಬಿಸಿಯಾಗುತ್ತದೆ. ಆದರೆ, AC ಆನ್ ಆಗಿರುವುದರಿಂದ, ಎಂಜಿನ್ ಹೆಚ್ಚು ಇಂಧನವನ್ನು ಬಳಸುತ್ತದೆ. ಜೊತೆಗೆ ಇದು ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಗ್ರಹ ಗೋಚರದಿಂದ ಈ ರಾಶಿಯವರ ಲೈಫೇ ಚೇಂಜ್! ಐಷಾರಾಮಿ ಜೀವನ- ಎರಡೂ ಕೈಗಳಿಂದ ಬಾಚುವಷ್ಟು ಧನಪ್ರಾಪ್ತಿ!
ಎಸಿಯ ಕಂಪ್ರೆಸರ್ ನ್ನು ಬೆಲ್ಟ್ ಮೂಲಕ ಎಂಜಿನ್‌ಗೆ ಸಂಪರ್ಕಿಸಲಾಗುತ್ತದೆ. ಅಂದರೆ, ಎಂಜಿನ್ ಚಾಲನೆಯಲ್ಲಿರುವಾಗ ಮಾತ್ರ ಕಾರಿನ ಎಸಿ ಕಾರ್ಯನಿರ್ವಹಿಸುತ್ತದೆ. ನೀವು AC ಅನ್ನು ಆನ್ ಮಾಡಿದಾಗ, ಎಂಜಿನ್ ಗೆ ಜೋಡಿಸಲಾದ ಬೆಲ್ಟ್ AC ಕಂಪ್ರೆಸರ್ ಅನ್ನು ತಿರುಗಿಸುತ್ತದೆ. ಆಗ AC ಕೆಲಸ ಮಾಡಲು ಪ್ರಾರಂಭಿಸುತ್ತದೆ. ಆದರೆ, ಇದು ಸಾಮಾನ್ಯಕ್ಕಿಂತ ಹೆಚ್ಚಿನ ಲೋಡ್ ಅನ್ನು ಎಂಜಿನ್ ನಲ್ಲಿ ಇರಿಸುತ್ತದೆ, ಇದರಿಂದಾಗಿ ಇಂಧನ ಬಳಕೆ ಹೆಚ್ಚಾಗುತ್ತದೆ.
ಎಸಿ ಹಾಕಿಕೊಂಡು ಕಾರನ್ನು ಓಡಿಸುವುದರಿಂದ ಮೈಲೇಜ್ ಶೇಕಡಾ 5-6 ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಹೆದ್ದಾರಿಯಲ್ಲಿ ಕಾರು ಓಡಿಸುತ್ತಿದ್ದರೆ ಮತ್ತು ಎಸಿ ಆನ್ ಆಗಿದ್ದರೆ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಮತ್ತೊಂದೆಡೆ, ಕಾರು ನಗರದಲ್ಲಿ ಅಥವಾ ಜನದಟ್ಟಣೆಯ ಪ್ರದೇಶದಲ್ಲಿ ಓಡುತ್ತಿದ್ದರೆ ಮತ್ತು ಎಸಿ ಆನ್ ಆಗಿದ್ದರೆ, ಮೈಲೇಜ್ ಶೇಕಡಾ 5-7 ರಷ್ಟು ಕಡಿಮೆಯಾಗಬಹುದು. ನಿಮ್ಮ ಕಾರು AC ಇಲ್ಲದೆ 15kmpl ಮೈಲೇಜ್ ನೀಡಿದರೆ, AC ಆನ್ ಮಾಡಿದ ನಂತರ, ಮೈಲೇಜ್ 14kmpl ಅಥವಾ 13kmpl ಆಗಿರುತ್ತದೆ.
ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರ್ತಿಯನ್ನೇ ಗುಟ್ಟಾಗಿ ಮದುವೆಯಾದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್’ಮನ್! ಫೋಟೋಸ್ ನೋಡಿ
ಎಸಿ ಆನ್ ಮಾಡಿದಾಗ ಎಷ್ಟು ಇಂಧನವನ್ನು ಖರ್ಚು ಆಗುತ್ತದೆ ಎಂಬುದು ಕಾರಿನ ಎಂಜಿನ್ ಅನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ಸಾಮಾನ್ಯ ಹ್ಯಾಚ್ ಬ್ಯಾಕ್ ಕಾರುಗಳ ಬಗ್ಗೆ ಮಾತನಾಡುವುದಾದರೆ, 1 ಲೀಟರ್ ನಿಂದ 1.2 ಲೀಟರ್‌ಗಳವರೆಗೆ ವೆಚ್ಚವಾಗಬಹುದು .ಆದರೆ ಎಂಜಿನ್ ಸ್ಥಿತಿ ಮತ್ತು ಎಸಿ ಸ್ಥಿತಿಯೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.