Smartphone Blast: ಸ್ಮಾರ್ಟ್‌ಫೋನ್ ಅನ್ನು ಮಿಸ್ ಆಗಿ ಈ ರೀತಿ ಬಳಸಿದರೂ ಬಾಂಬ್ನಂತೆ ಬ್ಲಾಸ್ಟ್ ಆಗುತ್ತೆ ಹುಷಾರ್!
Smartphone Blast: ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿರುವ ಬಗ್ಗೆ ಹಲವು ವರದಿಗಳು ಬಂದಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಇಂದು ನಾವು ನಿಮಗೆ ಅಂತಹ ಸಲಹೆಗಳನ್ನು ಹೇಳಲಿದ್ದೇವೆ, ಇದರಿಂದಾಗಿ ನೀವು ಸ್ಮಾರ್ಟ್‌ಫೋನ್‌ನಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.
Smartphone Blast: ಸ್ಮಾರ್ಟ್‌ಫೋನ್ ಬ್ಲಾಸ್ಟ್‌ನ ಹಲವಾರು ವರದಿಗಳಿವೆ. ಕೆಲವೊಮ್ಮೆ ಬ್ಯಾಟರಿಯಿಂದಾಗಿ ಮತ್ತು ಕೆಲವೊಮ್ಮೆ ಹೆಚ್ಚು ಬಿಸಿಯಾಗುವುದರಿಂದ ಫೋನ್ ಸ್ಫೋಟಗೊಳ್ಳುತ್ತದೆ. ಜನರು ಸಾಮಾನ್ಯವಾಗಿ ಇಂತಹ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದನ್ನು ತಪ್ಪಿಸುತ್ತಾರೆ. ಆದಾಗ್ಯೂ, ಇದು ಪ್ರತಿ ಬಾರಿ ಸ್ಮಾರ್ಟ್‌ಫೋನ್‌ನಲ್ಲಿನ ದೋಷದಿಂದಾಗಿ ಸಂಭವಿಸುವುದಿಲ್ಲ. ಕೆಲವೊಮ್ಮೆ ಬಳಕೆದಾರರಿಂದಾಗಿ ಈ ಘಟನೆಗಳೂ ಮುನ್ನೆಲೆಗೆ ಬರುತ್ತವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದು ಅವಶ್ಯಕ. ವಾಸ್ತವವಾಗಿ, ನಮ್ಮ ಅಜಾಗರೂಕತೆ, ನಾವು ಮಾಡುವ ಕೆಲವು ತಪ್ಪುಗಳಿಂದಾಗಿಯೂ ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಬಹುದು. ಇದನ್ನು ತಪ್ಪಿಸಲು ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಅವಶ್ಯಕವಾಗಿದೆ.
ಇಂದು ನಾವು ನಿಮಗೆ ಅಂತಹ ಕೆಲವು ಟಿಪ್ಸ್ ನೀಡಲಿದ್ದೇವೆ. ಇವುಗಳನ್ನು ಅನುಸರಿಸುವುದರಿಂದ ಸ್ಮಾರ್ಟ್‌ಫೋನ್‌ನಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.
ಸ್ಮಾರ್ಟ್‌ಫೋನ್ ಅನ್ನು ಶಾಖದಿಂದ ರಕ್ಷಿಸುವುದು ಅವಶ್ಯಕ:
ನೀವು ಹೊರಾಂಗಣದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಮೇಜಿನ ಮೇಲೆ ಇರಿಸಿದರೆ ಅಥವಾ ಗಂಟೆಗಳ ಕಾಲ ಹಾಗೆ ಬಿಟ್ಟರೆ, ಸೂರ್ಯನ ಶಾಖದಿಂದ ಸ್ಮಾರ್ಟ್‌ಫೋನ್ ತುಂಬಾ ಬಿಸಿಯಾಗಲು ಪ್ರಾರಂಭಿಸುತ್ತದೆ. ಈ ಶಾಖದಿಂದಾಗಿ, ಸ್ಮಾರ್ಟ್‌ಫೋನ್‌ನ ಬ್ಯಾಟರಿಯಲ್ಲಿ ಒತ್ತಡವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಬಳಿಕ ನೀವು ಸ್ಮಾರ್ಟ್‌ಫೋನ್ ಬಳಸಿದರೆ ಆ ಸಮಯದಲ್ಲಿ ಪ್ರೊಸೆಸರ್‌ನ ಶಾಖದಿಂದಾಗಿ ಅದು ಇನ್ನೂ ಬಿಸಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುವ ಸಾಧ್ಯತೆ ಇದ್ರುತ್ತದೆ. ಇದನ್ನು ತಪ್ಪಿಸಲು ಸ್ಮಾರ್ಟ್‌ಫೋನ್ ಹೀಟ್ ಆಗದಂತೆ ನಿಗಾವಹಿಸಿ.
ಇದನ್ನೂ ಓದಿ- ಸ್ಮಾರ್ಟ್‌ಫೋನ್‌ನಲ್ಲಿ ಆತಂಕ ಸೃಷ್ಟಿಸಿವೆ ಈ 13 ಆಪ್‌ಗಳು! ನಿಮ್ಮ ಫೋನ್‌ನಲ್ಲಿಯೂ ಇದ್ದರೆ ಕೂಡಲೇ ಡಿಲೀಟ್ ಮಾಡಿ
ಗಂಟೆಗಟ್ಟಲೆ ಜೇಬಿನಲ್ಲಿ ಇಡುವುದು:
ಸ್ಮಾರ್ಟ್‌ಫೋನ್ ಅನ್ನು ಗಂಟೆಗಟ್ಟಲೆ ಜೇಬಿನಲ್ಲಿ ಇಡುವುದರಿಂದ ಅದು ತುಂಬಾ ಬೇಗ ಬಿಸಿಯಾಗುತ್ತದೆ. ಜೇಬಿನಲ್ಲಿ ಸ್ಮಾರ್ಟ್‌ಫೋನ್ ಜೊತೆಗೆ ಇತರ ವಸ್ತುಗಳನ್ನು ಇದುವುದರಿಂದಲೂ ಅದು ಇನ್ನೂ ವೇಗವಾಗಿ ಬಿಸಿಯಾಗಲು ಪ್ರಾರಂಭಿಸುತ್ತದೆ. ಇದು ಸ್ಮಾರ್ಟ್‌ಫೋನ್ ಬಿಸಿಯಾಗಲು ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿಯೂ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುತ್ತದೆ.
ಇದನ್ನೂ ಓದಿ- ಟ್ವಿಟರ್‌ನಲ್ಲಿ ದೊಡ್ಡ ಬದಲಾವಣೆ ಮಾಡಿದ ಎಲೋನ್ ಮಸ್ಕ್!
ರಾತ್ರಿಯಿಡೀ ಚಾರ್ಜ್ ಹಾಕುವುದು:
ಹಲವರು ತಮ್ಮ ಸ್ಮಾರ್ಟ್‌ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಗೆ ಹಾಕಿ ಹಾಗೆಯೇ ಬಿಡುತ್ತಾರೆ. ಇದರಿಂದ ಬ್ಯಾಟರಿ ಮೇಲೆ ಒತ್ತಡ ಹೆಚ್ಚಾಗುತ್ತದೆ. ಶಾಖ ಹೆಚ್ಚಾದಾಗ ಅದು ಸ್ಫೋಟಗೊಳ್ಳುವ ಸಾಧ್ಯತೆ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.