How To Clean Smartphone Screen: ಸ್ಮಾರ್ಟ್ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್ ಸಲಹೆ
How To Clean Smartphone Screen: ಹಲವು ಬಾರಿ ಸ್ಮಾರ್ಟ್ಫೋನ್ ಬಳಸುವಾಗ ಅದರ ಸ್ಕ್ರೀನ್ ತುಂಬಾ ಕೊಳಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಸ್ಮಾರ್ಟ್ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಬಹುದು.
How To Clean Smartphone Screen: ಸ್ಮಾರ್ಟ್ಫೋನ್ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ಒಂದು ಕ್ಷಣ ಸ್ಮಾರ್ಟ್‌ಫೋನ್ ಇಲ್ಲದಿದ್ದರೂ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಹಾಗಾಗಿಯೇ ಹೊರಗೆ ಮಾತ್ರವಲ್ಲ, ಮನೆಯಲ್ಲಿಯೂ ಕೆಲಸ ಮಾಡುವಾಗ ನಾವು ನಮ್ಮ ಸ್ಮಾರ್ಟ್‌ಫೋನ್ ಅನ್ನು ನಮ್ಮೊಂದಿಗೆ ಇರಿಸಿಕೊಳ್ಳುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್‌ನ ಪರದೆಯು ಅನೇಕ ಬಾರಿ ಕೊಳಕಾಗುತ್ತದೆ (Smartphone Screen Clean) ಮತ್ತು ಅದು ಚೆನ್ನಾಗಿ ಕಾಣುವುದಿಲ್ಲ. ಈ ವೇಳೆ ಬಹುತೇಕ ಬಳಕೆದಾರರು ಒದ್ದೆಯಾದ ಕೈಗಳಿಂದ ಸ್ಮಾರ್ಟ್‌ಫೋನ್ ಸ್ಕ್ರೀನ್ ಅನ್ನು ಕ್ಲೀನ್ ಮಾಡುತ್ತಾರೆ. ಆದರೆ, ಇದು ಸರಿಯಲ್ಲ. ಇದರಿಂದ ಫೋನ್ ಹಾಳಾಗಬಹುದು. ಅದಕ್ಕಾಗಿಯೇ ಇಂದು ನಾವು ನಿಮಗಾಗಿ ಕೆಲವು ಸಲಹೆಗಳನ್ನು (Smartphone Tips and Tricks) ತಂದಿದ್ದೇವೆ, ಅದರ ಸಹಾಯದಿಂದ ನೀವು ಫೋನ್ ಪರದೆಯನ್ನು ಚಿಟಿಕೆಯಲ್ಲಿ ಸ್ವಚ್ಛಗೊಳಿಸಬಹುದು.
ಮೃದುವಾದ ಬಟ್ಟೆಯಿಂದ ಸ್ಮಾರ್ಟ್‌ಫೋನ್ ಸ್ಕ್ರೀನ್ ಸ್ವಚ್ಚಗೊಳಿಸಿ:
ಸ್ಮಾರ್ಟ್‌ಫೋನ್ ಪರದೆಯನ್ನು ಸ್ವಚ್ಛಗೊಳಿಸಲು (Smartphone Screen Clean) ಹೆಚ್ಚಿನ ಬಳಕೆದಾರರು ಟಿಶ್ಯೂ ಪೇಪರ್ ಅನ್ನು ಬಳಸುತ್ತಾರೆ. ಆದರೆ ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಲು ಮೃದುವಾದ ಬಟ್ಟೆಯನ್ನು ಬಳಸುವುದು ಉತ್ತಮ, ಏಕೆಂದರೆ ಮೃದುವಾದ ಬಟ್ಟೆಯಿಂದ ಸ್ಮಾರ್ಟ್‌ಫೋನ್ ಸ್ಕ್ರೀನ್ ಸ್ವಚ್ಚಗೊಳಿಸದಾಗ ಸ್ಕ್ರಾಚಿಂಗ್ ಅಪಾಯವಿರುವುದಿಲ್ಲ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಮೈಕ್ರೋ ಫೈಬರ್ ಬಟ್ಟೆಯನ್ನೂ ಬಳಸಬಹುದು.
ಇದನ್ನೂ ಓದಿ- IPL 2022 ಅನ್ನು ಮೊಬೈಲ್‌ನಲ್ಲಿ ಲೈವ್ ವೀಕ್ಷಿಸಲು ಬಯಸುವಿರಾ? ಈ ಯೋಜನೆಗಳೊಂದಿಗೆ ಫ್ರೀ ಆಗಿ ಪಡೆಯಿರಿ ಡಿಸ್ನಿ+ ಹಾಟ್‌ಸ್ಟಾರ್
ಶುಚಿಗೊಳಿಸುವ ದ್ರವವನ್ನು ಬಳಸಿ:
ಫೋನ್‌ನ (Phone) ಕೊಳಕು ಪರದೆಯನ್ನು ಸ್ವಚ್ಛಗೊಳಿಸಲು, ನೀರಿನ ಬದಲಿಗೆ ಶುದ್ಧೀಕರಣ ದ್ರವವನ್ನು ಬಳಸಿ. ನೀವು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಶುಚಿಗೊಳಿಸುವ ದ್ರವಗಳನ್ನು ಕಾಣಬಹುದು. ಬಟ್ಟೆಯ ಮೇಲೆ ಕೆಲವು ಹನಿ ದ್ರವವನ್ನು ಹಾಕುವ ಮೂಲಕ ನೀವು ಪರದೆಯನ್ನು ಸ್ವಚ್ಛಗೊಳಿಸಬಹುದು.
ಇದನ್ನೂ ಓದಿ- ನಿಮ್ಮ ಮೊಬೈಲ್‌ನಿಂದ ಈ ಅಪ್ಲಿಕೇಶನ್ ಅನ್ನು ತಕ್ಷಣವೇ ಡಿಲೀಟ್ ಮಾಡಿ.!
ಟೂತ್‌ಪೇಸ್ಟ್ ಕೂಡ ಉತ್ತಮ ಪರಿಹಾರವಾಗಿದೆ:
ಅಂದಹಾಗೆ, ಟೂತ್‌ಪೇಸ್ಟ್ ಕೂಡ ಫೋನ್‌ನ ಪರದೆಯನ್ನು ಸ್ವಚ್ಛಗೊಳಿಸಬಹುದು ಎಂದು ತಿಳಿದರೆ, ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ ಕೊಳಕು ಸ್ಕ್ರೀನ್ ಅನ್ನು ಕ್ಲೀನ್ ಮಾಡಲು ಇದು ಉತ್ತಮ ಪರಿಹಾರವಾಗಿದೆ. ಇದಕ್ಕಾಗಿ, ನೀವು ಟೂತ್‌ಪೇಸ್ಟ್ ಅನ್ನು ಪರದೆಯ ಮೇಲೆ ನಿಧಾನವಾಗಿ ಉಜ್ಜಿ ಮತ್ತು ನಂತರ ಅದನ್ನು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. ಇದರೊಂದಿಗೆ ಪರದೆಯು ಸ್ವಚ್ಛವಾಗಿರುತ್ತದೆ ಮತ್ತು ಯಾವುದೇ ಗೀರುಗಳಿರುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.