ಫೇಸ್‌ಬುಕ್‌ನಲ್ಲಿ ವೀಕ್ಷಣೆ ಇತಿಹಾಸವನ್ನು ಡಿಲೀಟ್ ಮಾಡಲು ಇಲ್ಲಿದೆ ಸುಲಭ ಮಾರ್ಗ
Facebook: ಪ್ರಸ್ತುತ ಮನರಂಜನೆಗಾಗಿ ಹಲವಾರು ವೇದಿಕೆಗಳು ಲಭ್ಯವಿವೆ. ಅಂತಹ ಪ್ಲಾಟ್ಫಾರ್ಮ್ಗಳಲ್ಲಿ ಫೇಸ್‌ಬುಕ್ ಕೂಡ ಒಂದು. ಫೇಸ್‌ಬುಕ್‌ನಲ್ಲಿ ಹಲವಾರು ವಿಡಿಯೋಗಳು ಲಭ್ಯವಿದ್ದು ಬಳಕೆದಾರರು ಬೇಕೆಂದಾಗ ಅವುಗಳನ್ನು ವೀಕ್ಷಿಸಬಹುದು. ಬಳಕೆದಾರರು ಯಾವ ಸಮಯದಲ್ಲಿ ಯಾವ ವಿಡಿಯೋವನ್ನು ವೀಕ್ಷಿಸಿದ್ದಾರೆ ಎಂಬ ಮಾಹಿತಿ ಫೇಸ್ಬುಕ್ನ ವಾಚ್ ಹಿಸ್ಟರಿಯಲ್ಲಿ ಲಭ್ಯವಿರುತ್ತದೆ.
How To Delete Facebook History: ಈ ತಂತ್ರಜ್ಞಾನ ಯುಗದಲ್ಲಿ ವಿಶ್ವದಾದ್ಯಂತ ಕೋಟ್ಯಾಂತರ ಜನರು ಫೇಸ್‌ಬುಕ್‌ಗೆ ಸಂಪರ್ಕ ಹೊಂದಿದ್ದಾರೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಚಾಟಿಂಗ್ ನಿಂದ ಹಿಡಿದು ಆಡಿಯೋ ಮತ್ತು ವಿಡಿಯೋ ಕಾಲಿಂಗ್ ವರೆಗೆ ಹಲವು ವೈಶಿಷ್ಟ್ಯಗಳು ಲಭ್ಯವಿವೆ. ಅಷ್ಟೇ ಅಲ್ಲ, ಇದರಲ್ಲಿ ಸಾವಿರಾರು ವೈಶಿಷ್ಟ್ಯಗಳು ಲಭ್ಯವಿದ್ದು ಬಳಕೆದಾರರು ಸುಲಭವಾಗಿ ವಿಡಿಯೋಗಳನ್ನು ವೀಕ್ಷಿಸಬಹುದು. ಮಾತ್ರವಲ್ಲ, ತಮಗಿಷ್ಟವಾದ ವೀಡಿಯೋವನ್ನು ಹುಡುಕಲು ಸರ್ಚ್ ಸೌಲಭ್ಯವೂ ಲಭ್ಯವಿದೆ. ಇದರಲ್ಲಿ ನಿಮ್ಮಿಷ್ಟದ ವೀಡಿಯೋವನ್ನು ಹುಡುಕಿ ವೀಕ್ಷಿಸಬಹುದು. ಇದು ಅಪ್ಲಿಕೇಶನ್‌ನಲ್ಲಿ ವೀಕ್ಷಣೆ ಇತಿಹಾಸವನ್ನು ರಚಿಸುತ್ತದೆ. ನಿಮಗೆ ಬೇಕೆಂದರೆ ಈ ವಾಚ್ ಹಿಸ್ಟರಿಯನ್ನು ನೀವು ಸುಲಭವಾಗಿ ಅಳಿಸಬಹುದು.
ಹೌದು, ನೀವು ಫೇಸ್‌ಬುಕ್‌ನಲ್ಲಿ (Facebook) ಏನನ್ನು ವೀಕ್ಷಿಸುತ್ತೀರಿ ಎಂಬುದು ಬೇರೆಯವರಿಗೆ ತಿಳಿಯಬಾರದು ಎಂದು ಬಯಸಿದರೆ ಫೇಸ್‌ಬುಕ್‌ನಲ್ಲಿ ನಿಮ್ಮ ವೀಕ್ಷಣೆ ಇತಿಹಾಸವನ್ನು ಅಳಿಸಬಹುದು. ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಫೇಸ್‌ಬುಕ್ ವಾಚ್ ಹಿಸ್ಟರಿಯನ್ನು ಡಿಲೀಟ್ (Facebook Watch History Delete) ಮಾಡಲು ಅನುಸರಿಸಬೇಕಾದ ಸುಲಭ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ...
ಇದನ್ನೂ ಓದಿ- ಅಂತಾರಾಷ್ಟ್ರೀಯ ಯುಪಿಐ ಪಾವತಿ: PhonePe, GPayಗೆ ಟಕ್ಕರ್ ನೀಡಿದ ವಾಟ್ಸಾಪ್
ವಾಸ್ತವವಾಗಿ, ಆಂಡ್ರಾಯ್ಡ್ (Android) ಮತ್ತು ಐಫೋನ್ (iPhone) ಎರಡರಲ್ಲೂ ಫೇಸ್‌ಬುಕ್‌ನಲ್ಲಿ ವೀಕ್ಷಣೆ ಇತಿಹಾಸವನ್ನು ಡಿಲೀಟ್ ಮಾಡುವ ವಿಧಾನ (How To Delete Facebook History) ಒಂದೇ ರೀತಿಯಾಗಿರುತ್ತದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:
* ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಅನ್ನು ತೆರೆಯಿರಿ.
* ಫೇಸ್‌ಬುಕ್‌ನಲ್ಲಿ ಮೇಲ್ಭಾಗದ ಬಲ ಮೂಲೆಯಲ್ಲಿ ಕಾಣಿಸುವ ಮೂರು ಸಾಲುಗಳ ಮೇಲೆ ಕ್ಲಿಕ್ ಮಾಡಿ, ಇದರಲ್ಲಿ ಪ್ರೊಫೈಲ್ ಆಯ್ಕೆಗೆ ಹೋಗಿ.
* ನಂತರ ಸ್ಕ್ರಾಲ್ ಡೌನ್ ಮಾಡಿ.
* ಇದರಲ್ಲಿ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆಗೆ ಹೋಗಿ ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ.
* ನಂತರ ಫೇಸ್‌ಬುಕ್ ಮಾಹಿತಿಯಲ್ಲಿ ಚಟುವಟಿಕೆ ಲಾಗ್ ಮೇಲೆ ಕ್ಲಿಕ್ ಮಾಡಿ.
* ಇದರಲ್ಲಿ ನೀವು ವೀಕ್ಷಿಸಿದ ವಿಡಿಯೋಗಳ ಲಿಸ್ಟ್ ಅನ್ನು ಕಾಣಬಹುದು. ನಿಮಗೆ ಬೇಕೆಂದರೆ ಇವುಗಳನ್ನು ಒಂದೊಂದಾಗಿ ಡಿಲೀಟ್ ಮಾಡಬಹುದು. ಇಲ್ಲವೇ, ಎಲ್ಲಾ ವಿಡಿಯೋಗಳನ್ನು ಒಟ್ಟಿಗೆ ಅಳಿಸಬಹುದು.
ಇದನ್ನೂ ಓದಿ- WhatsApp Feature: ವಾಟ್ಸಾಪ್‌ನಲ್ಲಿ ಬರಲಿದೆ ಹೊಸ ಪ್ರೈವೆಸಿ ಫೀಚರ್, ಏನಿದರ ವೈಶಿಷ್ಟ್ಯ?
ಫೇಸ್‌ಬುಕ್‌ನಲ್ಲಿ ವೀಕ್ಷಣೆ ಇತಿಹಾಸದ ಹೊರತಾಗಿ ಲೈವ್ ವಿಡಿಯೋ ವೀಕ್ಷಣೆ ಹಿಸ್ಟರಿಯನ್ನು ಕೂಡ ಅಳಿಸಬಹುದಾಗಿದೆ. ಇದಕ್ಕೂ ಕೂಡ ಮೇಲೆ ತಿಳಿಸಿದಂತೆ ವೀಕ್ಷಣೆ ಇತಿಹಾಸವನ್ನು ಅಳಿಸುವಂತೆಯೇ ಲೈವ್ ಸೆಶನ್ ಅನ್ನು ಸಹ ಡಿಲೀಟ್ ಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.