ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳಂತೆ ಯೂಟ್ಯೂಬ್ ಮ್ಯೂಸಿಕ್‌ನಲ್ಲಿ ಪಿಸಿಯಲ್ಲೂ ಹಾಡುಗಳನ್ನು ಡೌನ್‌ಲೋಡ್ ಮಾಡಬಹುದು
YouTube Music: ಯೂಟ್ಯೂಬ್ ಮ್ಯೂಸಿಕ್ ಈಗ ತನ್ನ ಪ್ರೀಮಿಯಂ ಬಳಕೆದಾರರಿಗೆ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ನಂತೆ ಪಿಸಿಯಲ್ಲೂ ಹಾಡುಗಳನ್ನು ಡೌನ್‌ಲೋಡ್ ಮಾಡುವ ಅವಕಾಶ ಕಲ್ಪಿಸಿದೆ.
YouTube Music: ಯೂಟ್ಯೂಬ್ ಮ್ಯೂಸಿಕ್ ತನ್ನ ಪ್ರೀಮಿಯಂ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಯೂಟ್ಯೂಬ್ ಮ್ಯೂಸಿಕ್‌ನಲ್ಲಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳಂತೆ, ಆಫ್‌ಲೈನ್ ಸಂಗೀತ ಮತ್ತು ಪಾಡ್‌ಕ್ಯಾಸ್ಟ್ ಡೌನ್‌ಲೋಡ್ ಆಯ್ಕೆಯನ್ನು ನೀಡುತ್ತಿದೆ. ಇದರ ಸಹಾಯದಿಂದ ಗ್ರಾಹಕರು ತಮ್ಮ ನೆಚ್ಚಿನ ಹಾಡುಗಳನ್ನು ಪಿಸಿಗಳಲ್ಲೂ ಡೌನ್‌ಲೋಡ್ ಮಾಡಲು ಮತ್ತು ಅವುಗಳನ್ನು ಆಫ್‌ಲೈನ್ ಆಲಿಸಲು ಅನುಕೂಲವಾಗಿವೆ. ಯಾವುದೀ ವೈಶಿಷ್ಟ್ಯ? ಪಿಸಿಗಳಲ್ಲಿ ಹಾಡುಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯೋಣ...
9to5Google ಪ್ರಕಾರ, ಡೆಸ್ಕ್‌ಟಾಪ್ ವೆಬ್ ಬಳಕೆದಾರರು ಇದೀಗ ತಮ್ಮ ನೆಚ್ಚಿನ ಸಂಗೀತ ಮತ್ತು ಪ್ಲೇಪಟ್ಟಿಗಳನ್ನು ಡೌನ್‌ಲೋಡ್ ಮಾಡಬಹುದು. ಇಂಟರ್ನೆಟ್ (Internet) ಸಂಪರ್ಕವನ್ನು ಹೊಂದಿಲ್ಲದಿರುವಾಗಲೂ ತಮ್ಮ ನೆಚ್ಚಿನ ಗೀತೆಗಳನ್ನು ಆಲಿಸಬಹುದು. ಆದರೆ, ಯೂಟ್ಯೂಬ್ ಮ್ಯೂಸಿಕ್‌ನ ಈ ಹೊಸ ವೈಶಿಷ್ಟ್ಯವು ಪ್ರೀಮಿಯಂ ಬಳಕೆದಾರರಿಗಷ್ಟೇ ಲಭ್ಯವಿದೆ ಎಂಬುದು ಗಮನಾರ್ಹ ಸಂಗತಿ.
ಲಭ್ಯವಿರುವ ಮಾಹಿತಿಯ ಪ್ರಕಾರ, ಸದ್ಯ ಯೂಟ್ಯೂಬ್ (Youtube) ಈ ವೈಶಿಷ್ಟ್ಯವನ್ನು ಡೆಸ್ಕ್‌ಟಾಪ್‌ಗಳಲ್ಲಿ ಪರೀಕ್ಷಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಯೂಟ್ಯೂಬ್ ಮ್ಯೂಸಿಕ್ ಆಫ್‌ಲೈನ್ ಆಲಿಸುವ ವೈಶಿಷ್ಟ್ಯವನ್ನು ಪರಿಚಯಿಸಬಹುದು ಎಂಬ ನಿರೀಕ್ಷೆಯಿದೆ.
ಇದನ್ನೂ ಓದಿ- ಅಮೆಜಾನ್‌ನ ಹೊಸ ಅಪ್ಲಿಕೇಶನ್‌ನಲ್ಲಿ ಅಂಗೈ ಸ್ಕ್ಯಾನ್ ಮಾಡಿದ್ರೆ ಪೂರ್ಣಗೊಳ್ಳುತ್ತೇ ಪೇಮೆಂಟ್!
ಪಿಸಿಯಲ್ಲೂ ಸಾಂಗ್ ಡೌನ್‌ಲೋಡ್ ಮಾಡಬಹುದು!
ಯೂಟ್ಯೂಬ್ ಮ್ಯೂಸಿಕ್‌ನ (Youtube Music) ಸೈಡ್‌ಬಾರ್‌ನಲ್ಲಿರುವ ಲೈಬ್ರರಿಯಲ್ಲಿ ಈ ವೈಶಿಷ್ಟ್ಯ ಲಭ್ಯವಿದೆ. "ಹೊಸತು! ಆಫ್‌ಲೈನ್‌ನಲ್ಲಿ ಸಂಗೀತವನ್ನು ಕೇಳಲು ಡೌನ್‌ಲೋಡ್ ಮಾಡಿ" ಎಂಬ ಸಂದೇಶವನ್ನು ಸ್ವೀಕರಿಸಿದ್ದರೆ ಯೂಟ್ಯೂಬ್ ಮ್ಯೂಸಿಕ್‌ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಆಫ್‌ಲೈನ್ ಆಲಿಸಲು ನಿಮ್ಮ ಮೆಚ್ಚಿನ ಹಾಡುಗಳನ್ನು ಸಹ ನೀವು ಡೌನ್‌ಲೋಡ್ ಮಾಡಬಹುದು.
ಬಳಕೆದಾರರು ವೆಬ್‌ನಲ್ಲಿ ವೈಶಿಷ್ಟ್ಯವನ್ನು ಕಾನ್ಫಿಗರ್ ಮಾಡುವ ಮೂಲಕ ಈ ವೈಶಿಷ್ಟ್ಯವನ್ನು ಬಳಸಬಹುದಾಗಿದೆ. ಅದರ ಜೊತೆಗೆ, ಡೆಸ್ಕ್‌ಟಾಪ್ ಬಳಕೆದಾರರು ಮೊಬೈಲ್ ಅಪ್ಲಿಕೇಶನ್‌ನಂತೆಯೇ ಪ್ರತಿ 30 ದಿನಗಳಿಗೊಮ್ಮೆ ತಮ್ಮ ಸಾಧನವನ್ನು ಇಂಟರ್ನೆಟ್‌ಗೆ ಸಂಪರ್ಕಿಸದಿದ್ದರೆ ಆಫ್‌ಲೈನ್ ಡೌನ್‌ಲೋಡ್‌ಗಳು ಮುಕ್ತಾಯಗೊಳ್ಳುತ್ತವೆ.
ಇದನ್ನೂ ಓದಿ- Youtube: ನಾಲ್ಕರಲ್ಲಿ ಒಬ್ಬ ಯೂಟ್ಯೂಬ್ ರಚನೆಕಾರರು ಗಳಿಸುತ್ತಿದ್ದಾರೆ ಲಕ್ಷ-ಲಕ್ಷ ಹಣ! ಕಂಪನಿ ಹೇಳಿದ್ದೇನು?
ಯೂಟ್ಯೂಬ್ ಮ್ಯೂಸಿಕ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಹಾಡುಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
* ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಯೂಟ್ಯೂಬ್ ಮ್ಯೂಸಿಕ್ ವೆಬ್ ಅಪ್ಲಿಕೇಶನ್ ತೆರೆಯಿರಿ.
* ನಂತರ, ಆಲ್ಬಮ್‌ನ ಅಥವಾ ಸಿಂಗಲ್‌ನ ಪುಟಕ್ಕೆ ಹೋಗಿ.
* "ಲೈಬ್ರರಿಗೆ ಉಳಿಸು" ಮತ್ತು ಮೂರು-ಡಾಟ್ ಡ್ರಾಪ್‌ಡೌನ್ ಮೆನು ಆಯ್ಕೆಗಳ ನಡುವೆ ಲಭ್ಯವಿರುವ ಡೌನ್‌ಲೋಡ್ ಬಟನ್‌ಗಾಗಿ ಹುಡುಕಿ.
* ಈಗ, ನಿಮ್ಮ ಡೆಸ್ಕ್‌ಟಾಪ್‌ಗೆ ಆಲ್ಬಮ್ ಅಥವಾ ಸಿಂಗಲ್ ಅನ್ನು ಉಳಿಸಲು ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.