ನವದೆಹಲಿ : ಫೋನ್ ಕಳೆದುಹೋದಾಗ ಅಥವಾ ಹಾನಿಗೊಳಗಾದಾಗ ಅದರ ಸಂಖ್ಯೆಯನ್ನು ಹೇಗೆ ಕಂಡುಹಿಡಿಯುವುದು ಎನ್ನುವುದೇ ದೊಡ್ಡ ಸವಾಲಾಗಿರುತ್ತದೆ. ಯಾಕೆಂದರೆ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಅಷ್ಟೂ ನಂಬರ್ ಗಳನ್ನು ಮತ್ತೆ ಪಡೆಯುವುದು ಬಹಳ ಕಷ್ಟದ ಕೆಲಸ. ಆದರೆ ಈಗ  ಸಮಸ್ಯೆಗೂ ಪರಿಹಾರ ಇದೆ. ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಎಲ್ಲಾ ನಂಬರ್ ಗಳನ್ನು ಮತ್ತೆ ಪಡೆಯಬಹುದು.  


COMMERCIAL BREAK
SCROLL TO CONTINUE READING

Gmail ಅಕೌಂಟ್ ಅಗತ್ಯ : 
ನಿಮ್ಮ ಸಂಪರ್ಕ ಸಂಖ್ಯೆಯನ್ನು ಮತ್ತೆ ಪಡೆಯಲು Gmail ಖಾತೆಯನ್ನು ಹೊಂದಿರಬೇಕು. ನೀವು ಒಂದು ವೇಳೆ, Gmail ಖಾತೆಯನ್ನು ಹೊಂದಿಲ್ಲದಿದ್ದರೆ, ಮೊದಲು Gmail ಖಾತೆಯನ್ನು ರಚಿಸಿ. ಇದರ ನಂತರ ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ ನಿಮ್ಮ Gmail ಖಾತೆಗೆ ಲಾಗ್ ಇನ್ ಆಗಬೇಕು.


ಇದನ್ನೂ ಓದಿ : ಡೌನ್ ಲೋಡ್ ಮಾಡಿಕೊಳ್ಳುವ ಮೊದಲು ತಿಳಿದುಕೊಳ್ಳಿ ಏನಿದು GB WhatsApp? ಇಲ್ಲವಾದರೆ ಭಾರೀ ನಷ್ಟವಾದೀತು


Gmail  ಕಾಂಟಾಕ್ಟ್ ಗೆ  ಸಿಂಕ್ ಮಾಡಿ : 
Gmail ಕಾಂಟಾಕ್ಟ್ ಗಳನ್ನು ನಿರಂತರವಾಗಿ ಸಿಂಕ್ ಮಾಡಿ. ಇದರೊಂದಿಗೆ, ನೀವು ಸೇರಿಸುವ ಯಾವುದೇ ಹೊಸ ನಂಬರ್ ಗಳು ಫೋನ್‌ನಲ್ಲಿ ಅಪ್ ಡೆಟ್ ಆಗುತ್ತದೆ. ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು Contact Backup ಆನ್ ಮಾಡಿ. ಸೆಟ್ಟಿಂಗ್‌ಗಳಲ್ಲಿ Account and Sync  ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ Gmail ಖಾತೆಯನ್ನು ಆಕ್ಟಿವೇಟ್ ಮಾಡಿ. ಇದರ ನಂತರ ನಿಮ್ಮ ಫೋನ್‌ನ ಎಲ್ಲಾ ಸಂಖ್ಯೆಗಳು  Gmail ನಲ್ಲಿ ಬ್ಯಾಕಪ್ ಆಗುತ್ತದೆ.


ಕಾಂಟಾಕ್ಟ್ ಗಳು ಎಲ್ಲಿ ಕಾಣಿಸುತ್ತವೆ : 
Google ನ ಹೋಂ ಪೇಜ್ ನ ಬಲಭಾಗದಲ್ಲಿರುವ Gmail ಬಳಿ ಇರುವ Contacts  ಪ್ಶನ್ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನಿಮ್ಮ ಸ್ಕ್ರೀನ್ ಮೇಲೆ ಕಾಂಟಾಕ್ಟ್ ನಂಬರ್ ಕಾಣಿಸಲು ಆರಂಭವಾಗುತ್ತದೆ. ಈ ಎಲ್ಲಾ ನಂಬರ್ ಗಳನ್ನು ಬ್ಯಾಕಪ್ ಮಾಡಬಹುದು. ಇಲ್ಲಿ ನಿಮಗೆ ಕಾಂಟಾಕ್ಟ್ ನಬಂರ್ ಅನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಸಹ ನೀಡಲಾಗುವುದು.


ಇದನ್ನೂ ಓದಿ : Google-Facebook ಅಧಿಕಾರಿಗಳಿಗೆ Shashi Tharoor ನೇತೃತ್ವದ ಸಂಸದೀಯ ಸಮಿತಿಯ ಬುಲಾವ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.