How To Get Confirm Train Ticket : ನಮ್ಮ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ರೈಲುಗಳಲ್ಲಿ ಹೆಚ್ಚುತ್ತಿರುವ ಜನಸಂದಣಿಯಿಂದಾಗಿ, ಕನ್ಫರ್ಮ್ ರೈಲು ಟಿಕೆಟ್ ಪಡೆಯುವುದು ಕಷ್ಟಕರವಾಗಿದೆ. ಹಬ್ಬ ಹರಿದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ. ಅನೇಕ ಬಾರಿ ಜನರು ತಿಂಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬೇಕು. ಯಾರಾದರೂ ಇದ್ದಕ್ಕಿದ್ದಂತೆ ಎಲ್ಲೋ ಹೋಗಬೇಕಾದರೆ, ತತ್ಕಾಲ್ ಟಿಕೆಟ್‌ಗಳ ಮೇಲಿನ ಅವಲಂಬನೆ ಹೆಚ್ಚಾಗುತ್ತದೆ. ಆದರೆ ಅದಕ್ಕೂ ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕು. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಲೇ ಇದೆ. ಆದರೆ ಟಿಕೆಟ್ ಬುಕಿಂಗ್ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ.


COMMERCIAL BREAK
SCROLL TO CONTINUE READING

ಸಾಮಾನ್ಯ ಪ್ರಯಾಣಿಕರಿಗೆ ತುಂಬಾ ತೊಂದರೆದಾಯಕ ಪ್ರಕ್ರಿಯೆ : 
ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯು ಸಾಮಾನ್ಯ ಪ್ರಯಾಣಿಕರಿಗೆ ಅಷ್ಟು ಸುಲಭವಲ್ಲ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಆರಂಭವಾದ ತಕ್ಷಣ ಟಿಕೆಟ್ ಏಜೆಂಟ್ ಗಳು ವಿಶೇಷ ಸಾಫ್ಟ್ ವೇರ್ ಬಳಸಿ ಹೆಚ್ಚಿನ ಸೀಟುಗಳನ್ನು ಬುಕ್ ಮಾಡುತ್ತಾರೆ. ಇದರಿಂದ ಜನ ಸಾಮಾನ್ಯರಿಗೆ ಟಿಕೆಟ್ ಬುಕ್ ಮಾಡುವ ಅವಕಾಶ ಸಿಗುತ್ತಿಲ್ಲ. ಅವರ ಪ್ರಕ್ರಿಯೆಯು ಪೂರ್ಣಗೊಳ್ಳುವ ಹೊತ್ತಿಗೆ, ಸೀಟ್ ಖಾಲಿ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಇದಲ್ಲದೇ ತತ್ಕಾಲ್ ಟಿಕೆಟ್ ದರ ಕೂಡಾ  ಸಾಮಾನ್ಯ ಟಿಕೆಟ್ ಗಿಂತ ಹೆಚ್ಚಾಗಿರುತ್ತದೆ. ಇದರಿಂದ ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ.


ಇದನ್ನೂ ಓದಿ : OLA ಸ್ಕೂಟರ್ ಗೆ ಟಕ್ಕರ್ ಕೊಡಲು ಮಾರುಕಟ್ಟೆಗೆ ಬಂತು ಹೋಂಡಾ ಆಕ್ಟಿವಾ E ಮತ್ತು QC1 ಎಲೆಕ್ಟ್ರಿಕ್ ಸ್ಕೂಟರ್!


ರೈಲ್ವೆಯ ಪ್ರಸ್ತುತ ಟಿಕೆಟ್ ಸೇವೆ :
ಕೆಲವೊಮ್ಮೆ ಇದ್ದಕ್ಕಿದ್ದಂತೆ ಎಲ್ಲೋ ಹೋಗಬೇಕಾಗಬಹುದು, ಆಗ ತುರ್ತಾಗಿ  ರೈಲು ಟಿಕೆಟ್ ಪಡೆಯುವುದು ಸಾಧ್ಯವಾಗುವುದಿಲ್ಲ. ಆದರೆ ರೈಲ್ವೆಯಲ್ಲಿ ಒಂದು ನಿಯಮವಿದೆ. ಅದರ ಪ್ರಕಾರ ರೈಲು ಹೊರಡುವ ಸ್ವಲ್ಪ ಸಮಯದ ಮೊದಲು  ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅದು ಕೂಡಾ ಕನ್ಫರ್ಮ್ ಟಿಕೆಟ್. ಈ ಸೌಲಭ್ಯವನ್ನು ರೈಲ್ವೆಯ ಕರೆಂಟ್ ಟಿಕೆಟ್ ಬುಕಿಂಗ್ ಎಂದು ಕರೆಯಲಾಗುತ್ತದೆ. ಈ ಸೌಲಭ್ಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ. 


ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಕರೆಂಟ್ ಟಿಕೆಟ್ ಬುಕ್ಕಿಂಗ್ :


ಈ ಸೌಲಭ್ಯದ ಮೂಲಕ, ರೈಲಿನಲ್ಲಿ ಖಾಲಿ ಇರುವ ಸೀಟುಗಳನ್ನು ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗೆ ನೀಡಲಾಗುತ್ತದೆ. ಈ ಟಿಕೆಟ್‌ಗಳನ್ನು ರೈಲು ಹೊರಡುವ ಸ್ವಲ್ಪ ಮೊದಲು ನೀಡಲಾಗುತ್ತದೆ. ಇದರಿಂದಾಗಿ ರೈಲಿನ ಎಲ್ಲಾ ಸೀಟುಗಳು ಭರ್ತಿಯಾಗುವುದಲ್ಲದೆ, ಪ್ರಯಾಣಿಕರು ಕೂಡಾ ಕೊನೆಯ ಕ್ಷಣದಲ್ಲಿ ಸುಲಭವಾಗಿ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 IRCTC ಯಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು : 
ಕರೆಂಟ್ ಟಿಕೆಟ್‌ಗಳನ್ನು ಬುಕ್ ಮಾಡಲು ಎರಡು ಮಾರ್ಗಗಳಿವೆ. ಮೊದಲ ವಿಧಾನದಲ್ಲಿ, IRCTC ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಎರಡನೆಯದಾಗಿ, ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ಗೆ ಹೋಗಿ ಟಿಕೆಟ್‌ಗಳನ್ನು ಖರೀದಿಸಬಹುದು. ರೈಲು ಹೊರಡುವ ಮೂರರಿಂದ ನಾಲ್ಕು ಗಂಟೆಗಳ ಮೊದಲು, ಕರೆಂಟ್ ಟಿಕೆಟ್‌ಗಳು ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಎರಡೂ ವಿಧಾನಗಳ ಮೂಲಕ ಕಂಡುಹಿಡಿಯಬಹುದು.  ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಕರೆಂಟ್ ಟಿಕೆಟ್ ಅನ್ನು ಬುಕ್ ಮಾಡಬಹುದು. ಇದರ ಅಡಿಯಲ್ಲಿ, ರೈಲು ಹೊರಡುವ 5 ರಿಂದ 10 ನಿಮಿಷಗಳ ಮುಂಚಿತವಾಗಿ ಟಿಕೆಟ್ ಗಳನ್ನು ಬುಕ್ ಮಾಡಬಹುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ