Birth Certificate : ನಿಮ್ಮ ಜನನ ಪ್ರಮಾಣಪತ್ರ ಕಳೆದು ಹೋಗಿದ್ದರೆ ಅನೇಕ ಸರ್ಕಾರಿ ಕೆಲಸಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಈ ಡಾಕ್ಯುಮೆಂಟ್ ವ್ಯಕ್ತಿಯ ಜನ್ಮ, ಗುರುತು ಮತ್ತು ಪೌರತ್ವದ ಪುರಾವೆಯಾಗಿದೆ.ಭಾರತದಲ್ಲಿ,ಈ ದಾಖಲೆಯನ್ನು ಜನನ ಮತ್ತು ಮರಣ ನೋಂದಣಿ ಕಾಯಿದೆ,1969ರ ಅಡಿಯಲ್ಲಿ ನೀಡಲಾಗಿದೆ.ಈ ಕಾಯಿದೆಯ ಪ್ರಕಾರ,ಪ್ರತಿ ಮಗುವಿನ ಜನನವನ್ನು ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಪುರಸಭೆಯಲ್ಲಿ 21 ದಿನಗಳಲ್ಲಿ ನೋಂದಾಯಿಸಬೇಕು.ಜನನ ಪ್ರಮಾಣಪತ್ರ ಕಳೆದು ಹೋದರೆ, ಅದರ ನಕಲಿ ಪ್ರತಿಯನ್ನು ಆನ್‌ಲೈನ್‌ನಲ್ಲಿ  ಪಡೆಯಬಹುದು. 


COMMERCIAL BREAK
SCROLL TO CONTINUE READING

ಜನನ ಪ್ರಮಾಣಪತ್ರದ ನಕಲು ಪ್ರತಿಯನ್ನು ಪಡೆಯಲು ಅಗತ್ಯವಿರುವ ದಾಖಲೆಗಳು:
ಅರ್ಜಿದಾರರ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ 
ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ 
ಜನ್ಮ ಪ್ರಮಾಣಪತ್ರದ ಕಳೆದು ಹೋದ ಬಗ್ಗೆ ಅಫಿಡವಿಟ್
ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು


ಇದನ್ನೂ ಓದಿ : ಬೇಸಿಗೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ತುಂಬಾ ಹೀಟ್ ಆಗ್ತಿದ್ಯಾ? ಈ ಟಿಪ್ಸ್ ಅನುಸರಿಸಿ


ಜನನ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಪಡೆಯಲು ಅಗತ್ಯ ಪ್ರಕ್ರಿಯೆ :  


೧.ಮೊದಲನೆಯದಾಗಿ,ನೀವು ನಿಮ್ಮ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಪುರಸಭೆಯ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಜನನ ಪ್ರಮಾಣಪತ್ರದ ನಕಲಿ ಪ್ರತಿಗಾಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಬೇಕು. 
೨. ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಲಗತ್ತಿಸಿ.
೩. ಅರ್ಜಿ ನಮೂನೆಯ ಹಾರ್ಡ್ ಕಾಪಿಯನ್ನು ನಿಮ್ಮ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಶನ್ ಅಥವಾ ಪುರಸಭೆಯ ಕಚೇರಿಗೆ ಸಲ್ಲಿಸಿ.
೪. ಅರ್ಜಿ ಶುಲ್ಕವನ್ನು ಪಾವತಿಸಿ.
೫. ಅರ್ಜಿ ಶುಲ್ಕವನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಪಾವತಿಸಬಹುದು.


ಅಪ್ಲಿಕೇಶನ್ ಸ್ಥಿತಿ ಪರಿಶೀಲನೆ : 
ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ನಿಮ್ಮ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಪುರಸಭೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು,ನಿಮಗೆ ನಿಮ್ಮ ಅಪ್ಲಿಕೇಶನ್ ಸಂಖ್ಯೆಯ ಅಗತ್ಯವಿರುತ್ತದೆ. 


ಇದನ್ನೂ ಓದಿ : ನೀರಿನ ಸ್ಪ್ರೇ ಜೊತೆಗೆ ತಂಪು ಗಾಳಿ ನೀಡುತ್ತದೆ ಈ ಫ್ಯಾನ್ ! ಎಸಿಯ ಅಗತ್ಯವೇ ಇಲ್ಲ


ಜನನ ಪ್ರಮಾಣಪತ್ರದ ನಕಲು ಪ್ರತಿಯನ್ನು ಪಡೆಯುವುದು : 
ನಿಮ್ಮ ಅರ್ಜಿಯನ್ನು ಒಮ್ಮೆ ಅನುಮೋದಿಸಿದ ನಂತರ, ನಿಮ್ಮ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಪುರಸಭೆಯ ಕಚೇರಿಯಿಂದ ನೀವು ಜನನ ಪ್ರಮಾಣಪತ್ರದ ನಕಲು ಪ್ರತಿಯನ್ನು (Duplicate Copy) ಪಡೆಯಬಹುದು. 
ಜನನ ಪ್ರಮಾಣಪತ್ರದ ನಕಲು ಪ್ರತಿಯನ್ನು ಪಡೆಯಲು,ಅರ್ಜಿ ಸಂಖ್ಯೆ ಮತ್ತು ಗುರುತಿನ ಚೀಟಿಯ ಅಗತ್ಯವಿರುತ್ತದೆ. 


ಜನನ ಪ್ರಮಾಣಪತ್ರದ ನಕಲು ಪ್ರತಿಗಾಗಿ ಅರ್ಜಿ ಶುಲ್ಕ :
ಜನನ ಪ್ರಮಾಣಪತ್ರದ ನಕಲು ಪ್ರತಿಗಾಗಿ ಅರ್ಜಿ ಶುಲ್ಕವನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಸಾಮಾನ್ಯವಾಗಿ,ಜನನ ಪ್ರಮಾಣಪತ್ರದ ನಕಲು ಪ್ರತಿಗಾಗಿ 50 ರಿಂದ 100 ರವರೆಗೆ ಶುಲ್ಕ ಪಾವತಿಸಬೇಕು. 


ಜನನ ಪ್ರಮಾಣಪತ್ರದ ನಕಲು ಪ್ರತಿಯನ್ನು ಪಡೆಯಲು ಸಮಯ ಮಿತಿ :
ಜನನ ಪ್ರಮಾಣಪತ್ರದ ನಕಲು ಪ್ರತಿಯನ್ನು ಪಡೆಯಲು ಸಮಯ ಮಿತಿಯನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ.ಸಾಮಾನ್ಯವಾಗಿ, ಜನನ ಪ್ರಮಾಣಪತ್ರದ ನಕಲು ಪ್ರತಿ 15 ರಿಂದ 30 ದಿನಗಳಲ್ಲಿ ಸಿಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.