ರೈಲ್ವೇ ನಿಲ್ದಾಣದಲ್ಲಿ ಹೀಗೆ ಪಡೆದುಕೊಳ್ಳಿ ಫ್ರೀ ವೈ-ಫೈ ಕನೆಕ್ಷನ್ !5G ಸ್ಪೀಡ್ ನಲ್ಲಿ ಡೌನ್ಲೋಡ್ ಆಗುವುದು HD ಸಿನಿಮಾ
How to connect free Wi-Fi at railway stations: ದೇಶದ ಅನೇಕ ರೈಲು ನಿಲ್ದಾಣಗಳಲ್ಲಿ ಫ್ರೀ ವೈ-ಫೈ ಸೇವೆ ಲಭ್ಯವಿದೆ. ಆದರೆ ಇದರ ಪ್ರಯೋಜನ ಪಡೆಯುವುದು ಹೇಗೆ ಎನ್ನುವ ಮಾಹಿತಿ ಪ್ರಯಾಣಿಕರಿಗೆ ಇಲ್ಲ.
How to connect free Wi-Fi at railway stations : ಇತ್ತೀಚಿನ ದಿನಗಳಲ್ಲಿ ಪ್ರಯಾಣದ ವೇಳೆಯಲ್ಲಿಯೂ ಇಂಟರ್ನೆಟ್ ಬೇಕಾಗುತ್ತದೆ.ಭಾರತದ ಅನೇಕ ದೊಡ್ಡ ರೈಲು ನಿಲ್ದಾಣಗಳು ಪ್ರಯಾಣಿಕರಿಗೆ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ಈ ಸೌಲಭ್ಯವನ್ನು ಹೇಗೆ ಬಳಸುವುದು ಎನ್ನುವ ಮಾಹಿತಿ ಪ್ರಯಾಣಿಕರಿಗೆ ಇರುವುದಿಲ್ಲ.
ರೈಲು ನಿಲ್ದಾಣದಲ್ಲಿ ಉಚಿತ ವೈ-ಫೈ :
ಎಲ್ಲಾ ನಿಲ್ದಾಣಗಳಲ್ಲಿಲ್ಲದಿದ್ದರೂ, ಹೆಚ್ಚಿನ ದೊಡ್ಡ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಲಭ್ಯವಿದೆ.ಈ ಸೌಲಭ್ಯವನ್ನು ಗೂಗಲ್ ಮತ್ತು ರೈಲ್‌ಟೆಲ್ (ರೈಲ್ವೆಯ ಟೆಲಿಕಾಂ ಕಂಪನಿ) ಜಂಟಿಯಾಗಿ ಪ್ರಾರಂಭಿಸಿದೆ.ಸರ್ಕಾರದ 'ಡಿಜಿಟಲ್ ಇಂಡಿಯಾ' ಯೋಜನೆಯ ಅಡಿಯಲ್ಲಿ ಇದನ್ನು ಆರಂಭಿಸಲಾಗಿದೆ.
ಇದನ್ನೂ ಓದಿ : BSNL 4G SIM ಖರೀದಿಸುವ ಮುನ್ನ ನಿಮ್ಮ ಏರಿಯಾದಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗುತ್ತದೆಯೇ ಎಂದು ಹೀಗೆ ಚೆಕ್ ಮಾಡಿ !
ಉಚಿತ ವೈ-ಫೈ ಸೌಲಭ್ಯ ಪಡೆಯುವುದು ಹೇಗೆ? :
ಹಂತ 1: ನಿಮ್ಮ ಫೋನ್‌ನ ವೈ-ಫೈ ಸೆಟ್ಟಿಂಗ್‌ಗಳನ್ನು ಓಪನ್ ಮಾಡಿ.
ಹಂತ 2: ನೆಟ್‌ವರ್ಕ್‌ಗಳಿಗಾಗಿ ಸರ್ಚ್ ಮಾಡಿ.
ಹಂತ 3: ನಿಮ್ಮ ಬ್ರೌಸರ್‌ನಲ್ಲಿ railwire.co.in ಗೆ ಹೋಗಿ.
ಹಂತ 4: ನಿಮ್ಮ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 5: ನಿಮ್ಮ ಮೊಬೈಲ್‌ಗೆ ಒನ್ ಟೈಮ್ ಪಾಸ್‌ವರ್ಡ್ (OTP) ಬರುತ್ತದೆ.
ಹಂತ 6: ಕನೆಕ್ಷನ್ ಅನ್ನು ಆಕ್ಟಿವ್ ಮಾಡಲು OTPಯನ್ನು ಬಳಸಿ.
ಹಂತ 7: ಈಗ ರೈಲ್‌ವೈರ್‌ನ ಉಚಿತ ವೈ-ಫೈ ಸೇವೆ ನಿಮಗೆ ಲಭ್ಯವಾಗುತ್ತದೆ.
ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಒದಗಿಸುವುದು ದೇಶದಾದ್ಯಂತ ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನದ ಭಾಗವಾಗಿದೆ.ಡಿಜಿಟಲ್ ಅಂತರ ಕಡಿಮೆಯಾಗಿ ಸಾರ್ವಜನಿಕ ಸ್ಥಳಗಳಲ್ಲಿಯೂ ಇಂಟರ್ನೆಟ್ ಸಿಗುವಂತಾಗಲು ಗೂಗಲ್ ನಂತಹ ಕಂಪನಿಗಳ ಸಹಯೋಗದಲ್ಲಿ ಈ ಕೆಲಸ ಮಾಡಲಾಗುತ್ತಿದೆ.ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಲಭ್ಯವಿದ್ದು, ಪ್ರಯಾಣಿಕರು ತಮ್ಮ ವೈಟಿಂಗ್ ಪಿರಿಯಡ್ ಅನ್ನು ಆರಾಮಾಗಿ ಕಳೆಯಬಹುದು.ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಬಹುದು, ಆನ್‌ಲೈನ್‌ನಲ್ಲಿ ಕೆಲಸ ಮಾಡಬಹುದು ಅಥವಾ ಸರಳವಾಗಿ ಇಂಟರ್ನೆಟ್ ಬ್ರೌಸ್ ಮಾಡಬಹುದು.
ಇದನ್ನೂ ಓದಿ : Google Pay ನಿಂದ ಟ್ರಾನ್ಸಾಕ್ಷನ್ ಹಿಸ್ಟರಿ ಡಿಲೀಟ್ ಮಾಡುವ ಸಿಂಪಲ್ ಟ್ರಿಕ್ ಇಲ್ಲಿದೆ ನೋಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.