GPay ಬಳಸುವಾಗ ಈ ಸಲಹೆ ಅನುಸರಿಸಿದ್ರೆ ಅತಿ ಹೆಚ್ಚು ಕ್ಯಾಶ್‌ಬ್ಯಾಕ್ ಪಡೆಯಬಹುದು!
Google Pay Cashback : ಇಂದು ಅನೇಕ ಜನರು Google Pay ಅನ್ನು ಹಣ ವರ್ಗಾವಣೆ, ಬಿಲ್ ಪೇ ಮಾಡಲು ಬಳಸುತ್ತಿದ್ದಾರೆ. ಇದೊಂದು ಅತ್ಯಂತ ವೇಗದ ಮತ್ತು ಸುಲಭ ಆನ್‌ಲೈನ್ ಪೇಮೆಂಟ್ ಮಾರ್ಗವಾಗಿದೆ.
Google Pay Cashback : ಇಂದು ಅನೇಕ ಜನರು Google Pay ಅನ್ನು ಹಣ ವರ್ಗಾವಣೆ, ಬಿಲ್ ಪೇ ಮಾಡಲು ಬಳಸುತ್ತಿದ್ದಾರೆ. ಇದೊಂದು ಅತ್ಯಂತ ವೇಗದ ಮತ್ತು ಸುಲಭ ಆನ್‌ಲೈನ್ ಪೇಮೆಂಟ್ ಮಾರ್ಗವಾಗಿದೆ. Google Pay ಸಹಾಯದಿಂದ, ನೀವು ಸುರಕ್ಷಿತ ರೀತಿಯಲ್ಲಿ ಜನರ ಖಾತೆಗಳಿಗೆ ಹಣವನ್ನು ಕಳುಹಿಸಬಹುದು. ಈ Google Pay ನಲ್ಲಿ ಹಣ ಪಾವತಿ ಮಾಡುವಾಗ ಹಲವಾರು ಬಾರಿ ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಆದರೆ ಪ್ರತಿ ಬಾರಿಯೂ ಈ ಕ್ಯಾಶ್‌ಬ್ಯಾಕ್ ಬರುವುದಿವಿಲ್ಲ. ಹಲವು ಬಾರಿ ಈ ಕ್ಯಾಶ್‌ಬ್ಯಾಕ್ ನಮಗೆ ಲಭಿಸುವುದಿಲ್ಲ. ಆದರೆ ಈ ಸಲಹೆ ಅನುಸರಿಸಿದ್ರೆ ಅತಿ ಹೆಚ್ಚು ಕ್ಯಾಶ್‌ಬ್ಯಾಕ್ ಪಡೆಯಬಹುದು.
ಇದನ್ನೂ ಓದಿ: ಮನೆಯಲ್ಲಿ 700 ರೂಪಾಯಿ ಬೆಲೆಯ ಈ ಸಾಧನ ಅಳವಡಿಸಿದರೆ ಸಾಕು ಅರ್ಧಕ್ಕಿಂತ ಕಡಿಮೆ ಬರುವುದು ವಿದ್ಯುತ್ ಬಿಲ್
ಇಂದು ನಾವು ನಿಮಗೆ GPay ನಲ್ಲಿ ಕ್ಯಾಶ್ ಬ್ಯಾಕ್ ಹೇಗೆ ಪಡೆಯಬೇಕೆಂಬ ಟ್ರಿಕ್ಸ್‌ಗಳನ್ನು ಹೇಳಲಿದ್ದೇವೆ. ಈ ಸಲಹೆಗಳನ್ನು ಪಾಲಿಸುವುದರಿಂದ ನೀವು ಸಹ ಅತಿ ಹೆಚ್ಚು ಕ್ಯಾಶ್‌ಬ್ಯಾಕ್ ಪಡೆಯಬಹುದು. ನೀವು ಒಬ್ಬರೇ ಒಬ್ಬರು ಬಳಕೆದಾರರಿಗೆ ಹಲವಾರು ಬಾರಿ ಪಾವತಿಸುವುದರಿಂದ ಹೆಚ್ಚು ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ ಎಂದು ನೀವು ಭಾವಿಸಿದರೆ ಅದು ತಪ್ಪು. ವಾಸ್ತವವಾಗಿ, ಹೆಚ್ಚು ಕ್ಯಾಶ್‌ಬ್ಯಾಕ್ ಪಡೆಯಲು, ಬೇರೆ ಬೇರೆ ಬಳಕೆದಾರರಿಗೆ ಪಾವತಿಸಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ಕ್ಯಾಶ್‌ಬ್ಯಾಕ್ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ನೀವು ಸಹ ಉತ್ತಮ ಕ್ಯಾಶ್‌ಬ್ಯಾಕ್ ಪಡೆಯಲು ಬಯಸಿದರೆ ₹100 ರಿಂದ ₹1000 ರವರೆಗಿನ ಹೆಚ್ಚಿನ ಬಿಲ್ ಪೇ ಮಾಡಿ, ಇದರಿಂದ ನೀವು ಉತ್ತಮ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಲ್ಲದೇ Google Pay ನಲ್ಲಿ ಕಾಲಕಾಲಕ್ಕೆ ಆಫರ್‌ಗಳಿರುತ್ತವೆ. ಅವುಗಳ ಸಹಾಯದಿಂದ ನೀವು ಬಿಲ್ ಪೇ ಮಾಡಬೇಕು. ಆಗ ನಿಮಗೆ ಹೆಚ್ಚಿನ ಕ್ಯಾಶ್‌ಬ್ಯಾಕ್ ಪಡೆಯಲು ಸಾಧ್ಯ.
ಇದನ್ನೂ ಓದಿ: ಐಫೋನ್ 13 ಪ್ರೊ ಮ್ಯಾಕ್ಸ್‌ನಲ್ಲಿ ಬಂಪರ್ ರಿಯಾಯಿತಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.