Hotel Room Scam: ಹೋಟೆಲ್ ಕೊಠಡಿಗಳು ಇಂದು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿವೆ, ಆದರೂ ಕೂಡ ಇನ್ನೂ ಹಲವು ಎಂಎಂಎಸ್ ಪ್ರಕರಣಗಳು ಮುನ್ನೆಲೆಗೆ ಬರುತ್ತಲೇ ಇವೆ, ಹೋಟೆಲ್ ಒಳಗೆ ಕ್ಯಾಮೆರಾಗಳನ್ನು ಬಚ್ಚಿಟ್ಟು ಮತ್ತು ಜನರ ಖಾಸಗಿ ಚಲನವಲನಗಳ ವೀಡಿಯೊಗಳನ್ನು ಮಾಡುವ ಮೂಲಕ ಜನರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಪ್ರಕರಣಗಳಿಂದಾಗಿ ಜನರು ಹೋಟೆಲ್‌ಗೆ ಹೋಗಲು ಭಯಪದುವಂತಹ ಸ್ಥಿತಿ ಎದುರಾಗಿದೆ. ನೀವೂ ಕೂಡ ಕೆಲಸ ಅಥವಾ ಪ್ರಯಾಣಕ್ಕೆ ಸಂಬಂಧಿಸಿದಂತೆ ಹೋಟೆಲ್‌ಗಳಿಗೆ ಭೇಟಿ ನೀಡುತ್ತಿದ್ದರೆ, ಇಂದು ನಾವು ನಿಮಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡುತ್ತಿದ್ದೇವೆ, ಈ ಸಲಹೆಗಳನ್ನು ಅನುಸರಿಸಿ ನೀವು m.m.s ಹಗರಣಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-WhatsApp ನಲ್ಲಿ ಇನ್ಮುಂದೆ ಯಾರು ಈ ಕೆಲ್ಸಾ ಮಾಡ್ಲಿಕ್ಕಾಗಲ್ಲ, ಬರ್ತಿದೆ ಹೊಸ ವೈಶಿಷ್ಟ್ಯ


ಹಿಡನ್ ಕ್ಯಾಮರಾ ಡಿಟೆಕ್ಟರ್ ತುಂಬಾ ಸಹಕಾರಿಯಾಗಿದೆ
ನೀವು ಅಮೆಜಾನ್‌ನಲ್ಲಿ ಹಿಡನ್ ಕ್ಯಾಮೆರಾ ಡಿಟೆಕ್ಟರ್ ಅನ್ನು ಸುಲಭವಾಗಿ ಖರೀದಿಸಬಹುದು. ಇದು ಕೈಗೆಟುಕುವ ದರದಲ್ಲಿ ಸಿಗುವ ಒಂದು ಉತ್ತಮ ಗ್ಯಾಜೆಟ್ ಆಗಿದೆ ಮತ್ತು ಇದರಿಂದ ನೀವು ಯಾವುದೇ ಕೋಣೆಯಲ್ಲಿ  ಅಡಗಿಸಿಟ್ಟ ಗುಪ್ತ ಕ್ಯಾಮೆರಾವನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇದರ ಬೆಲೆ ಸುಮಾರು ₹ 2500 ರಿಂದ ₹ 4000 ವರೆಗೆ ಇರುತ್ತದೆ. ಇದು ನಿಮ್ಮ ಜೇಬಿನಲ್ಲಿ ಹೊಂದಿಕೊಳ್ಳುವ ರೀತಿಯಲ್ಲಿರುತ್ತದೆ. ಗಾತ್ರದಲ್ಲಿ ಸ್ಮಾರ್ಟ್‌ಫೋನ್‌ಗಿಂತ ಚಿಕ್ಕದಾಗಿರುವ ಈ ಗ್ಯಾಜೆಟ್ ಬಳಸಲು ತುಂಬಾ ಸುಲಭವಾಗಿದೆ. ಇದು ಬ್ಯಾಟರಿ ಚಾಲಿತವಾಗಿದೆ ಮತ್ತು ಹೋಟೆಲ್ ಕೋಣೆಯಲ್ಲಿ ನೀವು ಯಾವುದೇ ಗುಪ್ತ ಕ್ಯಾಮೆರಾವನ್ನು ಕೇವಲ ಒಂದು ಬಟನ್ ಟಚ್ ಮಾಡುವುದರಿಂದ ಪತ್ತೆಹಚ್ಚಬಹುದು. 


ಇದನ್ನೂ ಓದಿ-ತಪ್ಪಿ ಯಾವುದೋ ಖಾತೆಗೆ ಹಣ ವರ್ಗಾವಣೆಯಾದರೆ ಮರಳಿ ಪಡೆಯುವುದು ಹೇಗೆ? ಗ್ರಾಹಕರ ಮುಂದಿರುವ ಆಯ್ಕೆಗಳು ಏನು ?


ಇಂತಹ ರೆಡ್ ಲೈಟ್ ನಿಂದ ಜಾಗ್ರತೆ ವಹಿಸಿ
ಯಾವುದೇ ಒಂದು ಹೋಟೆಲ್ ಕೋಣೆಗೆ ನೀವು ಚೆಕ್-ಇನ್ ಮಾಡಿದಾಗ, ಆ ಕೋಣೆಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಬಳಿ ಒಂದು ವೇಳೆ ಹಿಡನ್ ಕ್ಯಾಮೆರಾ ಡಿಟೆಕ್ಟರ್ ಸಾಧನ ಇಲ್ಲದಿದ್ದರೆ, ನೀವು ಕೋಣೆಯಲ್ಲಿ ಕನ್ನಡಿಗಳನ್ನು ಮೊದಲು ಪರೀಕ್ಷಿಸಬೇಕು, ಅಲ್ಲಿ ಯಾವುದೇ ರೀತಿಯ ಕೆಂಪು ದೀಪ ಮಿಟುಕಿಸುವುದನ್ನು ನೀವು ನೋಡಿದರೆ, ತಕ್ಷಣ ಎಚ್ಚೆತ್ತುಕೊಳ್ಳಿ ಮತ್ತು ನೀವು ತಕ್ಷಣ ಮಾಡಬೇಕಾದ ಕೆಲಸ ಎಂದರೆ ಆ ಹೋಟೆಲ್ ನಿಂದ ನೀವು ಹೊರಗೆ ಹೋಗಿ. ಕೆಂಪು ದೀಪವನ್ನು ಮಿಟುಕಿಸುವುದು ಎಂದರೆ ಅಲ್ಲಿ ಕ್ಯಾಮೆರಾ ಇನ್ಸ್ಟಾಲ್ ಮಾಡಲಾಗಿದೆ ಎಂದರ್ಥ ಮತ್ತು ಕ್ಯಾಮೆರಾ ಆನ್ ಆಗಿರುವಾಗ ಅದರ ಪವರ್ ಲೈಟ್ ಆನ್ ಆಗುತ್ತದೆ ಮತ್ತು ಅದು ಮಿಟುಕಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ತಕ್ಷಣ ಪೋಲೀಸರ ಬಳಿ ತೆರಳಿ ಎಫ್ಐಆರ್ ದಾಖಲಿಸಬೇಕು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.